ಜಿಲ್ಲೆ

ಕನ್ನಡಕ್ಕೆ ಶಾಸೀಯ ಸ್ಥಾನಮಾನ ಕಲ್ಪಿಸಲು ಶಾಸನಗಳ ಪಾತ್ರ: ತಮಿಳು ಸೆಲ್ವಿ

ಬೆಂಗಳೂರು ಕನ್ನಡಕ್ಕೆ ಶಾಸೀಯ ಸ್ಥಾನಮಾನ ಕಲ್ಪಿಸಿಕೊಡುವಲ್ಲಿ ಮತ್ತು ಚರಿತ್ರೆ ತಿಳಿಸುವಲ್ಲಿ ಕನ್ನಡದ ಶಾಸನಗಳು ಮೂಲಾಧಾರಗಳಾಗಿ ಪ್ರಮುಖ ಪಾತ್ರ ವಹಿಸಿವೆ ಎಂದು ಮದ್ರಾಸ್ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥೆ ತಮಿಳು ಸೆಲ್ವಿ ತಿಳಿಸಿದರು.

ಬೆಂಗಳೂರು ನಗರ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗವು ಗುರುವಾರ ಜ್ಞಾನಜ್ಯೋತಿ ಸಭಾಂಗಣದಲ್ಲಿ ‘ಕನ್ನಡ ಶಾಸನ ಸಾಹಿತ್ಯ’ ಕುರಿತು ಆಯೋಜಿಸಿದ್ದ 2 ದಿನಗಳ ರಾಷ್ಟ್ರೀಯ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪಾಶ್ಚಾತ್ಯ ವಿದ್ವಾಂಸರು ಕನ್ನಡ ಶಾಸನ ಸಾಹಿತ್ಯದ ಅನೇಕ ವಿವರಗಳನ್ನು ದಾಖಲಿಸುವ ಪ್ರಯತ್ನ ಮಾಡಿದ್ದರು. ಅವರಿಂದ ತಾಳೆಗರಿ, ಕೈಫಿಯತ್ತುಗಳನ್ನು ಕೂಡ ಸಂಗ್ರಹವಾದವು ಎಂದು ವಿವರಗಳನ್ನು ಹಂಚಿಕೊಂಡರು.

ಬೆಂ.ನಗರ ವಿವಿ ಕುಲಪತಿ ಪ್ರೊ. ಲಿಂಗರಾಜ ಗಾಂಧಿ ಮಾತನಾಡಿ, ಕನ್ನಡ ಏಕೀಕರಣ, ಸ್ವಾತಂತ್ರ್ಯ ಸಂಗ್ರಾಮ ಹೋರಾಟಗಳಿಗೆ ಸೆಂಟ್ರಲ್ ಕಾಲೇಜು ಕೇಂದ್ರ ಸ್ಥಾನವಾಗಿತ್ತು. ಆರಂಭದ ನವೋದಯ ಕನ್ನಡ ಸಾಹಿತ್ಯ ಪರಂಪರೆಯು ಇಲ್ಲಿಂದಲೇ ಆರಂಭವಾಯಿತು. ಎ.ಆರ್. ಕೃಷ್ಣಶಾಸಿ, ಬಿ.ಎಂ. ಶ್ರೀಕಂಠಯ್ಯ ಮತ್ತು ಕುವೆಂಪು ಅವರಂತಹ ಮಹನೀಯರು ಇದಕ್ಕೆ ನಾಂದಿ ಹಾಡಿದರು ಎಂದು ಹೇಳಿದರು.

ಶಾಸನ ಸಾಹಿತ್ಯವು ಜನ ಕಲ್ಯಾಣ ಮತ್ತು ಸಮಾಜಕ್ಕೆ ನೇರ ಸಾಹಿತ್ಯ ಸಂಬಂಧವನ್ನು ಹೊಂದಿರುತ್ತದೆ. ಇದು ಆಧುನಿಕ ಬದುಕಿಗೆ ಬೆಳಕು ಚೆಲ್ಲುತ್ತದೆ. ಮೂಲತಃ ಮೌಲ್ಯ ಮತ್ತು ಸಾಮರಸ್ಯ ಭಾವವನ್ನು ಪ್ರತಿಪಾದಿಸುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿವಿ ಕುಲಸಚಿವ ಜವರೇಗೌಡ, ಮೌಲ್ಯಮಾಪನ ಕುಲಸಚಿವ ಡಾ. ಲೋಕೇಶ್, ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ತಾಂಡವ ಗೌಡ ಟಿ.ಎನ್. ಸೇರಿ ಅಧ್ಯಾಪಕ ವರ್ಗ ಉಪಸ್ಥಿತರಿದ್ದರು.

ಶಾಸನಗಳು ಜನ ಸಮುದಾಯ, ಸಾಹಿತ್ಯ, ಕೃಷಿ, ಧಾರ್ಮಿಕತೆ ಒಳಗೊಂಡಂತೆ ಅನೇಕ ಮಾಹಿತಿಗಳನ್ನು ನೀಡುತ್ತದೆ. ಶಾಸನಗಳನ್ನು ಸಾಹಿತ್ಯ ವಿದ್ಯಾರ್ಥಿಗಳು ಹೆಚ್ಚು ಅಧ್ಯಯನ ಮಾಡಿದ್ದರಿಂದ ಶಾಸನಗಳ ಸಾಂಸ್ಕೃತಿಕ ಮಹತ್ವದ ವಿವರಳು ಲಭ್ಯವಾದವು. - ಡಾ. ಚಿತ್ತಯ್ಯ ಪೂಜಾರ್, ಬೆಂ.ನಗರ ವಿವಿ ಕನ್ನಡ ಪ್ರಾಧ್ಯಾಪಕ