ಚಿಕ್ಕಮಗಳೂರಿನ ಬೇಲೂರು ರಸ್ತೆಯಲ್ಲಿ ರಂಪಾಟ ನಡೆಸುತ್ತಿರುವ ರೌಡಿ ಶೀಟರ್ ವಶಕ್ಕೆ ಪಡೆಯಲು ಪೊಲೀಸರು ಯತ್ನಿಸುತ್ತಿರುವುದು. 
ಜಿಲ್ಲೆ

ರಂಪಾಟ ನಡೆಸುತ್ತಿದ್ದ ರೌಡಿಶೀಟರ್ ಪೊಲೀಸ್ ವಶಕ್ಕೆ

ಚಿಕ್ಕಮಗಳೂರು: ನಗರದ ಬೇಲೂರು ರಸ್ತೆಯಲ್ಲಿ ರೌಡಿಶೀಟರ್ ಓರ್ವ ಸಿಕ್ಕಸಿಕ್ಕವರಿಗೆ ಚಾಕು ಇರಿಯಲು ಯತ್ನಿಸಿದ್ದಲ್ಲದೆ ಸ್ಥಳಕ್ಕೆ ಬಂದ ಪೊಲೀಸರ ಮೇಲೆಯೂ ರಾಡಿನಿಂದ ಹಲ್ಲೆ ನಡೆಸಿ ಚಾಕುವಿನಿಂದ ಚುಚ್ಚಲು ಯತ್ನಿಸಿರುವ ಘಟನೆ ಮಂಗಳವಾರ ನಡೆದಿದೆ.

ರಾಡು, ಡ್ರಾಗರ್‌ನಿಂದ ಹಲ್ಲೆ ನಡೆಸಲು ಮಧ್ಯರಸ್ತೆಯಲ್ಲೇ ಯತ್ನಿಸುತ್ತಾ ರೌಡಿ ಶೀಟರ್ ರಂಪಾಟ ನಡೆಸುತ್ತಿದ್ದ. ಮದ್ಯ ಹಾಗೂ ಗಾಂಜಾ ಮತ್ತಿನಲ್ಲಿ ಸಿಕ್ಕಸಿಕ್ಕವರಿಗೆ ಚಾಕು ಹಾಕಲು ಮುಂದಾದ ವ್ಯಕ್ತಿಯನ್ನು ಕೊನೆಗೂ ಪೊಲೀಸರು ಹರಸಾಹಸ ಪಟ್ಟು ವಶಕ್ಕೆ ಪಡೆದಿದ್ದಾರೆ.

ಸಗಣಿಪುರದ ಕಿರಿಕ್ ಕೌಶಿಕ್ ರಂಪಾಟ ನಡೆಸಿದ ರೌಡಿ ಶೀಟರ್ ಎನ್ನಲಾಗುತ್ತಿದೆ. ಸ್ಥಳಕ್ಕೆ ಬಂದ ಪೊಲೀಸರ ಮೇಲು ಚಾಕು ಹಾಗೂ ರಾಡಿನಿಂದ ಹಲ್ಲೆಗೆ ಯತ್ನಿಸಿದ್ದಾನೆ. ಇವನ ರಂಪಾಟಕ್ಕೆ ಅಸಹಾಯಕರಾಗಿ ಪೊಲೀಸರು ನಿಲ್ಲುವ ಸ್ಥಿತಿ ಉಂಟಾಗಿತ್ತು. ರಾಷ್ಟಿçÃಯ ಹೆದ್ದಾರಿ ಹಾಗೂ ಬೈಪಾಸ್ ರಸ್ತೆಯಲ್ಲಿ ಕೆಲಕಾಲ ಆತಂಕ ಮೂಡಿತ್ತು. ಕೌಶಿಕ್‌ನ ರಂಪಾಟಕ್ಕೆ ಪೊಲೀಸರೇ ದಂಗು ಬಡಿದಂತೆ ಸುಮ್ಮನಿರಬೇಕಾಯಿತು.
ಸಾರ್ವಜನಿಕರ ಕರೆ ಮೇರೆಗೆ ವಶಕ್ಕೆ ಪಡೆಯಲು ಬಂದ ನಗರ ಪೊಲೀಸ್ ಠಾಣೆಯ ಎಎಸ್‌ಐ ಕುಮಾರಸ್ವಾಮಿ ವಿರುದ್ಧವೇ ಚಾಕುವಿನಿಂದ ದಾಳಿಗೆ ಈತ ಯತ್ನುಸಿದ್ದಾನೆ. ಕೊನೆಗೆ ವಶಕ್ಕೆ ಪಡೆದರೂ ಪೊಲೀಸ್ ವಾಹನದಿಂದ ತಪ್ಪಿಸಿಕೊಂಡು ಹೋಗಲು ಸಹಾ ಯತ್ನಿಸಿದರೂ ಬಿಡದ ಪೊಲೀಸರು ಠಾಣೆಗೆ ಕರೆತಂದು ಕೂರಿಸಿದ್ದಾರೆ.