ವಿಜಯಪುರ : ಕೌಟುಂಬಿಕ ಮೌಲ್ಯಗಳನ್ನು ಕಾಪಾಡಿಕೊಂಡು ಹೋಗಲು ಪಾಲಕರು ಮತ್ತು ಹಿರಿಯರು ನುಡಿಯುವುದಕ್ಕಿಂತ ತಾವು ನಡೆದು ತೋರಿಸಿದಾಗಲೇ ಮಾತ್ರ ಮಕ್ಕಳಿಗೆ ನೈತಿಕ ಅರಿವು ಉಂಟಾಗಲಿದೆ ಎಂದು ಪ್ರೊ. ಎ.ಬಿ. ಬೂದಿಹಾಳ ಹೇಳಿದರು.
ನಗರದ ಅಖಿಲ ಭಾರತ ವೀರಶೈವ ಮಹಾಸಭಾದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ರೋಟರಿ ಪ್ರೋಬಸ್ ಕ್ಲಬ್ (ಉತ್ತರ) ಸಭೆಯಲ್ಲಿ ಅವರು ಮಾತನಾಡಿದರು.
ಹಿಂದೆ ಅವಿಭಕ್ತ ಕುಟುಂಬಗಳಿಂದ ಸಹಕಾರ, ಸಂಟನೆ, ಆರ್ಥಿಕ ಸಬಲೀಕರಣ ಉಂಟಾಗಿ ಸಮಾಜದಲ್ಲಿ ಮಾದರಿ ಕುಟುಂಬವಾಗಿ ಎದ್ದು ಕಾಣುತ್ತಿದ್ದವು.
ಆದರೆ, ಸದ್ಯ ಆಧುನಿಕ ತಂತ್ರಜ್ಞಾನ ಟ್ಟದಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಹಿರಿಯರು ಸಮಯ, ಸಂದರ್ಭಕ್ಕೆ ಅನುಗುಣವಾಗಿ ಮಾರ್ಗದರ್ಶಿಸಬೇಕು. ಅಂದಾಗ ಧರ್ಮ, ನೈತಿಕ ಜವಾಬ್ದಾರಿ ಪ್ರಾಮಾಣಿಕತೆ ಬೆಳೆಸಲು ಸಾಧ್ಯವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾರದಾ ಐಹೊಳ್ಳಿ ಮಾತನಾಡಿ, ಮಗುವಿನಿಂದ ಹಿಡಿದು ಯೌವನಾವಸ್ಥೆ ಬರುವವರೆಗೂ ನಾವು ಮಕ್ಕಳಿಗೆ ಸಲಹೆ ಮಾರ್ಗದರ್ಶನ ನೀಡುವುದು ಅತ್ಯವಶ್ಯ ಎಂದು ತಿಳಿಸಿದರು.
ಮಹಾದೇವ ಹಾಲಳ್ಳಿ, ಜಗದೀಶ ಮೋಟಗಿ, ಸುವರ್ಣಾ ತೇಲಿ, ಸೋಮಶೇಖರ ವಾಲಿ, ಎಂ.ಐ. ಬಿರಾದಾರ, ಸುಭಾಸ ಬೇಟಗೇರಿ, ಆರ್.ಎಸ್. ಭೋವಿ, ಬಿ.ಟಿ. ಈಶ್ವರಗೊಂಡ, ಡಾ. ವೈ.ಬಿ. ಪಟ್ಟಣಶೆಟ್ಟಿ, ಬಿ.ಎಚ್. ಹಿರೇಮಠ, ಬಿ.ಎಸ್. ಮನಗೂಳಿ, ವಿ.ಎಸ್. ಸಾಂಗೊಳಿಮಠ, ಡಾ. ಎಸ್.ಎನ್. ಹಾದಿಮನಿ, ರೇಖಾ ಹಾದಿಮನಿ, ಶೈಲಜಾ ಇಜೇರಿ, ಜಿ.ಆರ್. ಬಣ್ಣದ, ಎಂ.ಎಸ್. ಸಿಂಧೆ ಮತ್ತಿತರರಿದ್ದರು.