ಜಿಲ್ಲೆ

ಫೆ.18ರಂದು 'ಕಣ್ಣೀರ ಕಣಿವೆ' ಕೃತಿ ಬಿಡುಗಡೆ...

ಅನುವಾದಕ ಉದಯಕುಮಾರ್​ ಹಬ್ಬು ಮಾಹಿತಿ

ವಿಜಯವಾಣಿ ಸುದ್ದಿಜಾಲ ಉಡುಪಿ

ಮಣಿಪಾಲದ ವೈದ್ಯ ಹಾಗೂ ಮೂಲತ: ಕಾಶ್ಮೀರಿ ಪಂಡಿತರಾದ ಡಾ.ರಾಹುಲ್​ ಮೆಗಝಿನ್​ ಅವರ ಆ್ಯಂಡ್​ ದಿ ವ್ಯಾಲಿ ರಿಮೈಂಡ್​ ಸೈಲೆಂಟ್​ಎಂಬ ಇಂಗ್ಲಿಷ್​ ಕೃತಿಯ ಕನ್ನಡ ಅನುವಾದ ಕಣ್ಣೀರ ಕಣಿವೆ ಎಂಬ ಕೃತಿ ಫೆ.18ರಂದು ಸಂಜೆ 4:30ಕ್ಕೆ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಕೃತಿಯ ಅನುವಾದಕ ಉದಯಕುಮಾರ್​ ಹಬ್ಬು ತಿಳಿಸಿದರು.

ಉಡುಪಿಯ ಪ್ರೆಸ್ ಕ್ಲಬ್ ನಲ್ಲಿ ಫೆ.15ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಅಧ್ಯಕ್ಷತೆ ವಹಿಸುವರು. ಅಯೋಧ್ಯಾ ಪ್ರಕಾಶನದ ರೋಹಿತ್​ ಚಕ್ರತಿರ್ಥ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಶ್ರೀನಗರದ ನಿವೃತ್ತ ಪ್ರಾಧ್ಯಾಪಕ ಡಾ.ಮನಮೋಹನಲಾಲ್​ ಕಿಶನ್​ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮೂಲ ಕೃತಿಕಾರ ಡಾ.ರಾಹುಲ್​ ಮೆಗಝಿನ್​ ಪಾಲ್ಗೊಳ್ಳಲಿದ್ದಾರೆ ಎಂದರು.

1990ರ ದಶಕದಲ್ಲಿ ಕಾಶ್ಮೀರಿ ಮುಸಲ್ಮಾನರ ಭಯೋತ್ಪಾದಕ ಕೃತ್ಯಗಳಿಂದ ಅಲ್ಲಿದ್ದ ಹಿಂದುಗಳು ಕಾಶ್ಮೀರದಿಂದ ಜಮ್ಮುವಿಗೆ ಪಲಾಯನ ಮಾಡಬೇಕಾಯಿತು. ಆ ಸಂದರ್ಭದಲ್ಲಿ ಕಾಶ್ಮೀರಿ ಪಂಡಿತರು ಅನುಭವಿಸಿದ್ದ ಕಷ್ಟಗಳ ಸರಣಿ ಘಟನೆಗಳ ಕುರಿತು ಈ ಪುಸ್ತಕ ಮಾಹಿತಿ ತೆರೆದಿಡಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಡಾ.ರಾಹುಲ್​ ಮೆಗಝಿನ್​, ಡಾ.ಮನಮೋಹನಲಾಲ್​ ಕಿಶನ್​ ಉಪಸ್ಥಿತರಿದ್ದರು.