ಜಿಲ್ಲೆ

ರೈತರ ಬೆಂಬಲವೇ ಸಹಕಾರ ಸಂಘದ ನೈಜ ಶಕ್ತಿ

ನಾಗರಮುನ್ನೋಳಿ: ಸಹಕಾರ ಸಂಘ ಉಳಿಸಿ, ಬೆಳೆಸುವಲ್ಲಿ ರೈತರ ಪಾತ್ರ ಬಹುಮುಖ್ಯ ಎಂದು ಶ್ರೀ ಸಿದ್ಧೇಶ್ವರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಸಿದ್ದಪ್ಪ ಮರ್ಯಾಯಿ ಹೇಳಿದರು.

ಗ್ರಾಮದಲ್ಲಿ ಸಿದ್ಧೇಶ್ವರ ವಿವಿಧೋದ್ದೇಶ ಸಂಘದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ರೈತರಿಗೆ ಪತ್ತು ವಿತರಿಸುವ ಸಮಾರಂಭದಲ್ಲಿ ಮಾತನಾಡಿ, ಸಂಘವು ಬಿಡಿಸಿಸಿ ಬ್ಯಾಂಕಿನ ಸದಸ್ಯತ್ವ ಪಡೆದಿದ್ದರಿಂದ ಸಂಘಕ್ಕೂ ಪತ್ತು ಲಭ್ಯವಾಗಿದ್ದು, ವಿತರಿಸಲಾಗುತ್ತಿದೆ ಎಂದರು.

ಜ್ಯೋತೆಪ್ಪ ಖಗನ್ನವರ ಪ್ರಾಸ್ತಾವಿಕ ಮಾತನಾಡಿ, ಸಂಘದಿಂದ 91 ರೈತರಿಗೆ 85 ಲಕ್ಷ ರೂ. ಶೂನ್ಯ ಬಡ್ಡಿದರದ ಸಾಲ ವಿತರಿಸಲಾಗಿದೆ ಎಂದರು. ಗ್ರಾಪಂ ಮಾಜಿ ಅಧ್ಯಕ್ಷ ಗುಲಾಬ್ ಜಮಾದಾರ, ಯುವ ಮುಖಂಡ ರಾಜು ಕುಂಬಾರ ಮಾತನಾಡಿದರು.

ಸಂತೋಷ ಹಿರೇಮಠ, ಸಿದ್ಧೇಶ್ವರ ಪೂಜಾರಿ, ಲಕ್ಷ್ಮಣ ಪೂಜಾರಿ, ಗ್ರಾಪಂ ಅಧ್ಯಕ್ಷೆ ರಾಜಮಾ ಮುಲ್ತಾನಿ, ಶಾಂತಾ ಬಾನೆ, ಲಕ್ಷ್ಮೀಸಾಗರ ಈಟಿ, ಲಾಡಜಿ ಮುಲ್ತಾನಿ, ಶಿವಪುತ್ರ ಮನಗೂಳಿ, ಸದಾಶಿವ ಮಠದ, ಉಮೇಶ ಮನಗೂಳಿ, ಮಲಿಕ ಪೆಂಡಾರಿ, ಬಿ.ಎಸ್.ಮಾಳಿಂಗೆ, ಮಾರುತಿ ಮರ‌್ಯಾಯಿ, ಬಾಬಾಸಾಹೇಬ ಕಾಳನ್ನವರ, ಅಶೋಕ ಈಟಿ, ಎಂ.ಬಿ.ಆಲೂರೆ, ಸುಜಾತಾ ಪಾಶ್ಚಾಪೂರೆ, ಶಕುಂತಲಾ ಮರ‌್ಯಾಯಿ, ಸುಜಾತಾ ಮರ‌್ಯಾಯಿ,

ಕಾಂಗ್ರೆಸ್ ಯುವ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ಮರ‌್ಯಾಯಿ, ಎಂ.ಕೆ.ಪೂಜೇರಿ ಇತರರಿದ್ದರು.