ಲಿಂಗದಹಳ್ಳಿ ಹೋಬಳಿ ವ್ಯಾಪ್ತಿಯ ಕಲ್ಲತ್ತಿಗಿರಿಯ ಜಲಪಾತದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವುದು. 
ಜಿಲ್ಲೆ

ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ ಮಳೆ

ಬೀರೂರು: ತರೀಕೆರೆ, ಬೀರೂರು, ಲಿಂಗದಹಳ್ಳಿಯಲ್ಲಿ ಸೋಮವಾರ ಸಂಜೆ ಗುಡುಗು, ಮಿಂಚು ಸಹಿತ ಉತ್ತಮ ಮಳೆಯಾಗಿದೆ. ಮಳೆಯಿಂದ ಬೀರೂರಿನ ಕೆಲವು ತೋಟಗಳಲ್ಲಿ ಬಾಳೆ ಗಿಡಗಳು ನೆಲಕ್ಕೂರುಳಿವೆ. ತರೀಕೆರೆ ತಾಲೂಕಿನ ಎ.ರಂಗಾಪುರ, ಇಟ್ಟಿಗೆ, ಸೀತಾಪುರ ಕಾವಲು, ಹಿರೇಕಾತೂರು, ಬೇಲೇನಹಳ್ಳಿ, ಕಟ್ಟೇಹೊಳೆಯಲ್ಲಿ ಎರಡು ಗಂಟೆಗೂ ಹೆಚ್ಚು ಮಳೆಯಾಗಿದೆ. ಲಿಂಗದಹಳ್ಳಿ ಹೋಬಳಿಯಲ್ಲೂ ವ್ಯಾಪಕ ಮಳೆಯಾಗುತ್ತಿರುವುದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ನೀರಿಲ್ಲದೆ ಒಣಗುವ ಹಂತ ತಲುಪಿದ್ದ ಅಡಿಕೆ ತೆಂಗು, ಕಾಫಿ, ಕಾಳು ಮೆಣಸು, ಸೇರಿದಂತೆ ವಿವಿಧ ತೋಟದ ಬೆಳೆಗಳಿಗೆ ಮರುಜೀವ ಬಂದಂತಾಗಿದೆ