ಜಿಲ್ಲೆ

ಮನೆಗೆ ಬಂದ ಹೆಬ್ಬಾವು

ವೀರೇಶ ಸೌದ್ರಿ

ಗೋಕರ್ಣ: ಬೆಳಗ್ಗೆ ಮನೆಬಾಗಿಲು ತೆರೆಯುತ್ತಿದ್ದಂತೆ ಮೂಲೆಯೊಂದರಲ್ಲಿ ಮಲಗಿದ್ದ ಹೆಬ್ಬಾವು ದಿಗಿಲು ಉಂಟುಮಾಡಿದ ಘಟನೆ ಇಲ್ಲಿನ ರಥಬೀದಿಯ ಪುರೋಹಿತ ವೇ.ವಿನಾಯಕ ರಾಮ ಉಪಾಧ್ಯಾಯ ಅವರ ಮನೆಯಲ್ಲಿ ನಡೆದಿದೆ.

ಅಂದಾಜು 9 ಅಡಿ ಉದ್ದದ ಈ ಹೆಬ್ಬಾವನ್ನು ಉರಗ ತಜ್ಞ ಬಾಬು ಮಾಂಜ್ರೇಕರ ಅವರು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟು ಬಂದರು. ಬೆಳಗ್ಗೆ ಪತ್ರಿಕೆ ಹಂಚಲು ತೆರಳುತ್ತಿದ್ದ ವಿತರಕರು ಮತ್ತು ಸ್ಥಳೀಯರು ಹಾವು ಹಿಡಿಯಲು ಸಹಾಯ ಮಾಡಿದರು.