ಇಳಕಲ್ಲದಲ್ಲಿ ಹಮ್ಮಿಕೊಂಡಿದ್ದ ಪಿರಾಮಿಡ್ ಕೇಂದ್ರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಗುರುಮಹಾಂತ ಶ್ರೀಗಳು ಮಾತನಾಡಿದರು. ಬೆಂಗಳೂರಿನ ಪ್ರೇಮನಾಥ, ಮೈಸೂರಿನ ಡಾ. ಸಿ.ಎಸ್. ಕೃಷ್ಣಮೂರ್ತಿ, ಮೈಸೂರಿನ ಜಿ. ಮನೋರಮಾ, ಗಂಗಾವತಿಯ ಲಲಿತಾ ವಗಾ ಇದ್ದರು. 
ಜಿಲ್ಲೆ

ಧ್ಯಾನ ಮಾಡಲು ಪಿರಾಮಿಡ್ ಪದ್ಧತಿ ಶ್ರೇಷ್ಠ

ಗಿರೀಶ ಸಗರ

ಇಳಕಲ್ಲ(ಗ್ರಾ): ನಿತ್ಯ ವ್ಯವಹಾರದ ಜಂಜಾಟದಲ್ಲಿ ಸಿಲುಕುವ ಜನರಿಗೆ ಧ್ಯಾನ ಅತ್ಯಗತ್ಯವಾಗಿದ್ದು, ಪಿರಾಮಿಡ್ ಪದ್ಧತಿ ಮೂಲಕ ಧ್ಯಾನ ಮಾಡುವುದು ಒಂದು ಉತ್ತಮ ಪದ್ಧತಿ ಎಂದು ಗುರುಮಹಾಂತ ಶ್ರೀಗಳು ಹೇಳಿದರು.

ಸ್ಥಳೀಯ ವಿಜಯನಗರ ಬಡಾವಣೆಯ ಬನ್ನಿಗೋಳಮಠ ನಿವಾಸದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪಿರಾಮಿಡ್ ಕೇಂದ್ರದ ಉದ್ಘಾಟನೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ರೋಗಮುಕ್ತರಾಗಬೇಕೆಂದರೆ ಒಂದಿಲ್ಲ ಒಂದು ಯೋಗ, ಧ್ಯಾನ ಮಾಡುವುದು ಅಗತ್ಯವಾಗಿದೆ ಎಂದರು.

ಬೆಂಗಳೂರಿನ ಪ್ರೇಮನಾಥ, ಮೈಸೂರಿನ ಡಾ. ಸಿ.ಎಸ್. ಕೃಷ್ಣಮೂರ್ತಿ ಉಪನ್ಯಾಸ ನೀಡಿದರು. ವೇದಿಕೆ ಅಧ್ಯಕ್ಷೆ ಮಂಜುಳಾ ಬನ್ನಿಗೋಳಮಠ ಅಧ್ಯಕ್ಷತೆ ವಹಿಸಿದ್ದರು. ಮೈಸೂರಿನ ಜಿ. ಮನೋರಮಾ, ಗಂಗಾವತಿಯ ಲಲಿತಾ ವಗಾ, ಶಿವಮೊಗ್ಗದ ಗಿರಿಸ್ವಾಮಿ ರಸ್ತಾಪೂರಮಠ, ನಗರಸಭೆ ಮಾಜಿ ಅಧ್ಯಕ್ಷ ಲಕ್ಷ್ಮಣ ಗುರಂ ಉಪಸ್ಥಿತರಿದ್ದರು. ಪ್ರಭುಸ್ವಾಮಿ ಬನ್ನಿಗೋಳಮಠ ಸ್ವಾಗತಿಸಿದರು. ಮುತ್ತು ಬೀಳಗಿ ವಂದಿಸಿದರು.