ಆಲಮಟ್ಟಿಯಲ್ಲಿ ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅರಣ್ಯ ಇಲಾಖೆ ದಿನಗೂಲಿ ನೌಕರರು ಆರಂಭಿಸಿದ್ದ ಧರಣಿ ಗುರುವಾರ ಅಂತ್ಯಗೊಳಿಸಲಾಯಿತು. 
ಜಿಲ್ಲೆ

ಅರಣ್ಯ ಇಲಾಖೆ ದಿನಗೂಲಿ ನೌಕರರ ಪ್ರತಿಭಟನೆ ಅಂತ್ಯ

ಆಲಮಟ್ಟಿ: ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಅರಣ್ಯ ಇಲಾಖೆ ದಿನಗೂಲಿ ನೌಕರರ ಸಂ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಆಲಮಟ್ಟಿಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯು ಅಧಿಕಾರಿಗಳ ಭರವಸೆ ಮೇರೆಗೆ ಗುರುವಾರ ಅಂತ್ಯಗೊಂಡಿದೆ.

ಧರಣಿ ಸ್ಥಳಕ್ಕೆ ಆಗಮಿಸಿದ ಕೆಬಿಜೆಎನ್​ಎಲ್​ ಅರಣ್ಯ ವಿಭಾಗದ ಡಿಎ್​ಒ ನಾಗಶೆಟ್ಟಿ ಅವರು, ಆಲಮಟ್ಟಿಯ ಉದ್ಯಾನಗಳ ನಿರ್ವಹಣೆಗೆ ನೀಡಿರುವ ಹೊರಗುತ್ತಿಗೆ ಟೆಂಡರ್​ನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಭರವಸೆ ನೀಡಿದರು.

ದಿನಗೂಲಿ ನೌಕರರ ಸಂದ ಜಿಲ್ಲಾಧ್ಯ ವೀರುಪಾ ಮಾದರ, ಬಾಗಲಕೋಟೆ ಜಿಲ್ಲಾಧ್ಯ ಬಸಪ್ಪ ಗುಡಿಮನಿ, ಅವ್ವಣ್ಣ ವಾಲಿಕಾರ, ಮಹೇಶ ತೆಲಗಿ, ಶಂಕರ ಅಂಕಲಗಿ, ಕಾಶೀನಾಥ ಬಿಂಗಿ, ಅಡಿವೆಪ್ಪ ಗೌಡರ, ಭೀಮಶಿ ಮಾದರ, ಲಕ್ಷಿ$್ಮಬಾಯಿ ಹೊಸಗೌಡರ, ರುಕ್ಮಾ ಚೌಹಾಣ್​, ತುಳಸಾ ಮಾಸ್ತೆ, ರುಕುಮಾ ವಾಲಿಕಾರ, ನೀಲವ್ವ ಗುಡೇಕಾರ, ಶೋಭಾ ಗೌಡರ ಇತರರಿದ್ದರು.