ಶಿರಾಳಕೊಪ್ಪ: ನಮ್ಮ ಸಂಘ ಕಳೆದ ಕೆಲ ವರ್ಷಗಳಿಂದ ನಿರಂತರ ಲಾಭ ಗಳಿಸುತ್ತಿದೆ. ಬಂದAತಹ ಲಾಭವನ್ನು ಒಳ್ಳೆಯ ಕೆಲಸ ಕಾರ್ಯಗಳಿಗೆ ಬಳಸಿಕೊಂಡು ಸರ್ವ ಸದಸ್ಯರ ಸಹಕಾರದಿಂದ ಸಂಘವನ್ನು ಮುನ್ನಡೆಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಟಿ. ಸಂಗಮೇಶ್ವರ್ ಹೇಳಿದರು. ಶಿರಾಳಕೊಪ್ಪದಲ್ಲಿ ಶನಿವಾರ ಸೇವಾ ವಿಕಾಸ ಶಾಲೆಯ ಸಭಾ ಭವನದಲ್ಲಿ ಕೃಷಿ ಪತ್ತಿನ ಸಹಕಾರ ಸಂಘ ನಿಗಮದ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಸಂಘದ ಲಾಭ ಹೆಚ್ಚಿಸಲು ರಸಗೊಬ್ಬರ ಮತ್ತು ಬೀಜದ ಜತೆಗೆ ಔಷಧಗಳನ್ನು ಮಾಡಿ 5-6 ವರ್ಷದಲ್ಲಿ ಬಾಕಿ ಇರುವ 58 ಲಕ್ಷ ರೂ. ಸಾಲವನ್ನು ತೀರಿಸಿ ಡಿವಿಡೆಂಡ್ ಕೊಡುವ ಸ್ಥಿತಿಗೆ ತರಲಾಗುವುದು. ಸಂಘದ ಎಲ್ಲ ನಿರ್ದೇಶಕರೂ ಅಧ್ಯಕ್ಷರಿದ್ದಂತೆ. ನಮ್ಮ ಸಂಘಟನಾತ್ಮಕ ಕಾರ್ಯದಿಂದ ಸಂಘ ಸದೃಢವಾಗಿ ಬೆಳೆಯಲಿದೆ ಎಂದರು. ಕಾರ್ಯದರ್ಶಿ ಓಂಕಾರಪ್ಪ , ಮಾಜಿ ಅಧ್ಯಕ್ಷ ಸುರಹೊನ್ನನೆ ಅನಿಲ್‌ಕುಮಾರ್, ಉಪಾಧ್ಯಕ್ಷ ಮಲ್ಲಪ್ಪ ಗಡ್ನಳ್ಳಿ, ನಿರ್ದೇಶಕರಾದ ಅನಿಲ್‌ಕುಮಾರ್, ಖಾಸಿಂಸಾಬ್, ಹಾಲೇಶಪ್ಪ, ಜಯಪ್ರಕಾಶ್ ಅವಾಜಿ, ರಾಘವೇಂದ್ರ ಎಂ.ಭಟ್, ಉಜ್ಜಪ್ಪ ಬಂಗೇರ, ಚಂದ್ರಪ್ಪ, ಹೊಳಿಯಪ್ಪ, ಗೌರಮ್ಮ, ಎಂ. ಯಶೋಧಾ, ರವೀಂದ್ರ, ಟಿ.ಶಾಂಭವಿ ಇದ್ದರು.