ಕೆರೂರ ಪಟ್ಟಣದ ರಾಚೋಟೇಶ್ವರ ಕಲ್ಯಾಣ ಮಂಟಪದಲ್ಲಿ 1997-98ನೇ ಸಾಲಿನ ಪ್ರಾಥಮಿಕ ಹಾಗೂ 2000-01 ನೇ ಸಾಲಿನ ಪ್ರೌಢಶಾಲೆ ವಿದ್ಯಾರ್ಥಿಗಳ ಗುರುವಂದನಾ, ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ನಿವೃತ್ತ ಶಿಕ್ಷಕರಾದ ಡಿ.ಪಿ. ಅಮಲಝರಿ, ಆರ್. ಆರ್. ಶೆಟ್ಟರ, ವಿ.ವ. ಸಂಘದ ಅಧ್ಯಕ್ಷ ಮಾಂತೇಶ ಮೆಣಸಗಿ ಇತರರಿದ್ದರು. 
ಜಿಲ್ಲೆ

ಶಿಕ್ಷಕರ ವೃತ್ತಿ ಎಲ್ಲ ವೃತ್ತಿಗಳಿಗಿಂತ ಅತ್ಯಂತ ಪವಿತ್ರ

ಕೆರೂರ: ಶಿಕ್ಷಕರು ಶಿಕ್ಷಣ ನೀಡುವ ಜತೆಗೆ ವಿದ್ಯಾರ್ಥಿಗಳಿಗೆ ಸಂಸ್ಕಾರ ನೀಡಿ ಸಮಾಜದಲ್ಲಿ ಸುಂದರ ಬದುಕು ಕಟ್ಟಿಕೊಳ್ಳಬೇಕೆಂದು ನಿವೃತ್ತ ಶಿಕ್ಷಕ ಡಿ.ಪಿ. ಅಮಲಝರಿ ಹೇಳಿದರು.

ಪಟ್ಟಣದ ರಾಚೋಟೇಶ್ವರ ಕಲ್ಯಾಣ ಮಂಟಪದಲ್ಲಿ 1997-98ನೇ ಸಾಲಿನ ಪ್ರಾಥಮಿಕ ಹಾಗೂ 2000-01ನೇ ಸಾಲಿನ ಪ್ರೌಡಶಾಲೆ ಹಳೆಯ ವಿದ್ಯಾರ್ಥಿಗಳು ಭಾನುವಾರ ಆಯೋಜಿಸಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಿವೃತ್ತ ಶಿಕ್ಷಕ ಆರ್. ಆರ್. ಶೆಟ್ಟರ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯ ಬದುಕಿಗೆ ನಿರಂತರ ಸ್ಫೂರ್ತಿದಾಯಕವಾಗಿ ಉಳಿಯುವ ಏಕೈಕ ವ್ಯಕ್ತಿ ಶಿಕ್ಷಕ ಮಾತ್ರ. ಶಿಕ್ಷಕರ ವೃತ್ತಿ ಎಲ್ಲ ವೃತ್ತಿಗಳಿಗಿಂತ ಅತ್ಯಂತ ಪವಿತ್ರವಾಗಿದೆ ಎಂದು ತಿಳಿಸಿದರು.

ವಿ.ವ. ಸಂಘದ ಅಧ್ಯಕ್ಷ ಮಾಂತೇಶ ಮೆಣಸಗಿ ಮಾತನಾಡಿದರು.

ಶಿಕ್ಷಕರನ್ನು ಸನ್ಮಾನಿಸಲಾಯಿತು. ನಿವೃತ್ತ ಶಿಕ್ಷಕರಾದ ವೈ. ಡಿ. ರಡ್ಡೇರ್, ಸಿ. ಎಸ್. ನಾಗನೂರ, ಆರ್. ಎಚ್. ಆಡಗಲ್, ಬಿ. ಎಚ್. ಭಜಂತ್ರಿ, ಶಿಕ್ಷಕರಾದ ಜೆ. ಎಸ್. ಬಾರಕೇರ, ಬಿ. ಆರ್. ಶೆಟ್ಟರ, ವಿನೋದ ಹೊಸಮನಿ, ಮಂಜುನಾಥ ಯಾತನೂರ, ನವೀನ ಹೆಬ್ಬಳ್ಳಿ, ಸದಾನಂದ ಮದಿ, ಪ್ರದೀಪ ವಾಲಿಕಾರ, ಕಿರಣ ಮದಿ ಇತರರಿದ್ದರು.

ಪ್ರಕಾಶ ಬಡಿಗೇರ ನಿರೂಪಿಸಿದರು. ಈರಮ್ಮಾ ಶೆಟ್ಟರ ಸ್ವಾಗತಿಸಿದರು.