ಜಿಲ್ಲೆ

ಅಧಿಕ ಕೀಟನಾಶಕ ಬಳಕೆಯಿಂದ ಸಮಸ್ಯೆಯೂ ಹೆಚ್ಚು

ಮುರುಗಮಲ್ಲದಲ್ಲಿ ಅರಿವು ಕಾರ್ಯಕ್ರಮ

ಚಿಂತಾಮಣಿ: ರೈತರು ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ಕೀಟನಾಶಕ ಸಿಂಪಡಿಸುವಾಗ ಮುಂಜಾಗ್ರತಾ ಕ್ರಮ ಪಾಲಿಸದೆ ಶಿಾರಸು ಮಾಡಿದ್ದಕ್ಕಿಂತ ಹೆಚ್ಚು ಬಳಸುವುದರಿಂದ ಅನೇಕ ಸಮಸ್ಯೆಗಳು ಉದ್ಭವಿಸಲಿದ್ದು, ರೈತರು ಕೃಷಿ ಅಧಿಕಾರಿಗಳ ಸಲಹೆ ಪಡೆದು ಕೀಟನಾಶಕ ಬಳಸಬೇಕು ಎಂದು ಖಾಸಗಿ ಸಂಸ್ಥೆ ಹಿರಿಯ ವ್ಯವಸ್ಥಾಪಕ ಚಂದ್ರಶೇಖರ್ ಹೇಳಿದರು.

ಮುರುಗಮಲ್ಲ ಗ್ರಾಮದ ಗಂಗಮ್ಮ ದೇವಾಲಯದ ಆವರಣದಲ್ಲಿ ರೈತ ಸಂಪರ್ಕ ಕೇಂದ್ರ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಬೀಜೋಪಚಾರ ಆಂದೋಲನ ಮತ್ತು ಸುರಕ್ಷಿತ ಕೀಟನಾಶಕಗಳ ಬಳಕೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಬೀಜೋಪಾಚಾರದ ಉದ್ದೇಶ, ಮಹತ್ವ, ಪ್ರಯೋಜನಗಳ ಬಗ್ಗೆ, ಬೀಜೋಪಚಾರದ ವಿಧಾನಗಳನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಟ್ಟರು.

ಕೃಷಿ ಅಧಿಕಾರಿ ನಾಗಾರ್ಜುನ ಬಾಬು ಅವರು ಇಲಾಖೆ ಯೋಜನೆಗಳ ಬಗ್ಗೆ ತಿಳಿಸಿಕೊಟ್ಟರು. ಸಹಾಯಕ ತಾಂತ್ರಿಕ ವ್ಯವಸ್ಥಾಪಕರಾದ ಸಂಧ್ಯಾ ಮತ್ತು ಪವಿತ್ರಾ ಭಾಗವಹಿಸಿದ್ದರು. ಕ್ಷೇತ್ರ ವ್ಯವಸ್ಥಾಪಕಾ ಸತೀಶ್ ಬಾಬು ನಂಬಾಲ, ಪೆದ್ದೂರು ಗ್ರಾಮ ಪಂಚಾಯಿತಿ ಸದಸ್ಯ ಅಭಿಲಾಷ್, ಪ್ರಗತಿಪರ ರೈತರು ಭಾಗವಹಿಸಿದ್ದರು.