ನೇಸರಗಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ಲಿ. ಯಕ್ಸಂಬಾ ಶಾಖೆ ಉದ್ಘಾಟನೆ ಸಮಾರಂಭದಲ್ಲಿ ಹುಬ್ಬಳ್ಳಿ ಜಡಿ ಸಿದ್ದೇಶ್ವರ ಮಠದ ಸದ್ಗುರು ರಾಮಾನಂದ ಭಾರತಿ ಸ್ವಾಮೀಜಿ ಮಾತನಾಡಿದರು. ಆರ್.ಎ.ಪಾಟೀಲ, ಬಾಬುರಾವ ಮಾಳಿ, ಬಿ.ಬಿ.ಹಿರೇಮಠ ಮತ್ತಿತರರು ಇದ್ದರು. 
ಜಿಲ್ಲೆ

ಬಡವರನ್ನು ಆರ್ಥಿಕವಾಗಿ ಬೆಳೆಸಿ

ನೇಸರಗಿ: ಸಹಕಾರ ಸಂಸ್ಥೆಗಳು ಬಡವರನ್ನು ಆರ್ಥಿಕವಾಗಿ ಮುಂದೆ ಬರುವಂತೆ ಮಾಡಿ ಸಂಸ್ಥೆಯನ್ನು ಉನ್ನತ ಮಟ್ಟದಲ್ಲಿ ಬೆಳೆಸಬೇಕು ಎಂದು ಚಂದರಗಿ ಕ್ರೀಡಾ ಶಾಲೆಯ ಮಾಜಿ ಅಧ್ಯಕ್ಷ ಆರ್.ಎ.ಪಾಟೀಲ ಹೇಳಿದ್ದಾರೆ. ಗ್ರಾಮದಲ್ಲಿ ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ಲಿ.ಯಕ್ಸಂಬಾ 53 ನೇ ಶಾಖೆ ಉದ್ಘಾಟಿಸಿ ಮಾತನಾಡಿ, ಜೊಲ್ಲೆ ಸಮೂಹದ ಆರ್ಥಿಕ ಸಂಸ್ಥೆಗಳು ರಾಜ್ಯದ ಎಲ್ಲೆಡೆ ಬಹುವೇಗವಾಗಿ ಬೆಳೆದು ಜನರಿಗೆ ಅನುಕೂಲ ಮಾಡಿವೆ ಎಂದರು. ಹುಬ್ಬಳ್ಳಿ ಜಡಿ ಸಿದ್ದೇಶ್ವರ ಮಠದ ಸದ್ಗುರು ರಾಮಾನಂದ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಸಂಸ್ಥೆ ಉಪಾಧ್ಯಕ್ಷ ಬಾಬುರಾವ ಮಾಳಿ, ಮುಖಂಡರಾದ ಕಲ್ಲಪ್ಪ ನಾಯಕ, ಡಾ.ಚನಗೌಡ ಪಾಟೀಲ, ಬಿ.ಬಿ.ಹಿರೇಮಠ, ಸುರೇಶ ಲೆಂಕನಟ್ಟಿ, ಶರೂಪುದ್ದಿನ್ ಮುಲ್ಲಾ, ಶಿಕ್ಷಕ ರಾಜಶೇಖರ ಗೆಜ್ಜಿ ಮತ್ತಿತರರು ಇದ್ದರು.