raichur 
ಜಿಲ್ಲೆ

ಪೊಲೀಸ್ ಇಲಾಖೆಯಿಂದ ಲೋಕಾ ಸ್ಪಂದನ ಕ್ಯೂಆರ್ ಕೋಡ್ ಮೂಲಕ ಠಾಣೆಗೆ ಪೀಡ್ ಬ್ಯಾಕ್ ನೀಡಬಹದು ಜಿಲ್ಲೆಯ 28 ಠಾಣೆಗಳಲ್ಲಿ ಅಳವಡಿಕೆ

ರಾಚಯ್ಯ ಸ್ವಾಮಿ ಮಾಚನೂರು

ರಾಯಚೂರು ಪೊಲೀಸ್ ಠಾಣೆಯಲ್ಲಿ ನೊಂದವರಿಗೆ ಸರಿಯಾಗಿ ಸ್ಪಂದನೆ ದೊರೆಯುವುದಿಲ್ಲ. ಪೊಲೀಸರು ಸರಿಯಾದ ರೀತಿ ಸ್ಪಂದಿಸುತ್ತಿಲ್ಲ, ದೂರು ಸ್ವಿಕರಿಸುತ್ತಿಲ್ಲ, ದೂರು ಸ್ವೀಕರಿಸಲು ವಿಳಂಬ ಮಾಡ್ತಾರೆ ಅಥವಾ ದೂರು ನೀಡಲು ಹೋದಾಗ ರಾಜಿ ಮಾಡಿಕೊಳ್ಳುವಂತೆ ಒತ್ತಡ ಹಾಕ್ತಾರೆ. ಇಂತಹ ಆರೋಪಗಳು ಆಗಾಗ ಕೇಳಿ ಬರುತ್ತಿರುವುದರಿಂದ ಇಂತಹ ಹಲವು ಸಮಸ್ಯೆಗಳಿಗೆ ಆಸ್ಪದ ನೀಡದಂತೆ ಪೊಲೀಸ್ ವ್ಯವಸ್ಥೆಯನ್ನು ಮತ್ತಷ್ಟು ಜನಸ್ನೆಹಿಯಾಗಿಸಲು ಸರ್ಕಾರ ಜಾರಿ ಮಾಡಿದ ಪೊಲೀಸ್ ಫೀಡ್ ಬ್ಯಾಕ್ ಆ್ಯಪ್ ಕ್ಯೂಆರ್ ಕೋಡ್ ತಂತ್ರಾಂಶಯನ್ನು ಇದೀಗ ಜಿಲ್ಲೆಯಲ್ಲಿಯೂ ಪ್ರಾರಂಭ ಮಾಡಲಾಗಿದೆ.

ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ಪ್ರವೇಶ ದ್ವಾರದಲ್ಲಿ ಕ್ಯೂಆರ್ ಕೋಡ್‌ಅನ್ನು ಪ್ರದರ್ಶಿಸಲಾಗುವುದು ಮತ್ತು ಠಾಣೆಗೆ ಭೇಟಿ ನೀಡುವವರು ಸೇವೆಯ ಬಗ್ಗೆ ತಮ್ಮ ಪ್ರತಿಕ್ರಿಯೆ ನೀಡಬಹುದು. ಈ ಕ್ರಮವು ಪೊಲೀಸರಿಗೆ ಉತ್ತಮ ಸೇವೆ ನೀಡಲು ಮತ್ತು ಸಿಬ್ಬಂದಿ ದಕ್ಷತೆ ಸುಧಾರಿಸುವುದರ ಜತೆಗೆ ಪಾರದರ್ಶಕತೆಯನ್ನು ತರಲು ಕ್ಯೂಆರ್ ಕೋಡ್ ಸಹಾಯಕವಾಗಿದೆ.

ಕ್ಯೂಆರ್ ಕೋಡ್‌ನಿಂದ ಏನು ಉಪಯೋಗ?

ಠಾಣೆಗಳಲ್ಲಿ ಜನ ಸಾಮಾನ್ಯರಿಗೆ ಅಧಿಕಾರಿಗಳು ಹಾಗೂ ಪೇದೆಗಳು ಸರಿಯಾಗಿ ಸಮಸ್ಯೆಗಳಿಗೆ ಸ್ಪಂದನೆ ಮಾಡುತ್ತಿಲ್ಲ ಎನ್ನುವ ಆರೋಪದಿಂದ 2023 ರಲ್ಲಿ ಮೊದಲಿಗೆ ಸರ್ಕಾರವು ಬೆಂಗಳೂರಿನಲ್ಲಿ ಎಲ್ಲಾ ಠಾಣೆಗಳಲ್ಲಿ ಲೋಕಾ ಸ್ಪಂದನೆ ಹೆಸರಿನಲ್ಲಿ ಕ್ಯೂಆರ್ ಕೋಡ್ ಪ್ರಾರಂಭ ಮಾಡಲಾಯಿತು.

ಇದರಿಂದ ಪೊಲೀಸ್ ಠಾಣೆಗೆ ಬರುವ ಜನರು ಅಥವಾ ದೂರುದಾರರು ತಮ್ಮ ಸೆಲ್ ಫೋನ್‌ಗಳಲ್ಲಿ ಕ್ಯೂಆರ್‌ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಸಿಬ್ಬಂದಿ ವರ್ತನೆ, ದೂರುಗಳನ್ನು ಸ್ವೀಕರಿಸುವುದು, ಪ್ರತಿಕ್ರಿಯೆ ಮತ್ತು ಇತರ ಸಮಸ್ಯೆಗಳ ಕುರಿತು ಪ್ರತಿಕ್ರಿಯೆಯನ್ನು ನೀಡಬಹುದು. ದೂರುಗಳು, ವಿಮರ್ಶೆಗಳು ಅಥವಾ ಕಾಮೆಂಟ್‌ಗಳನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಪರಿಶೀಲಿಸುತ್ತಾರೆ. ಉತ್ತಮ ಸ್ಪಂದನೆ ನೀಡಿದ ಠಾಣೆಗಳಿಗೆ ಸರ್ಕಾರದಿಂದ ಪ್ರಶಸ್ತಿ ನೀಡಲಾಗುತ್ತದೆ. ಆದರಂತೆ ಕಳಪೆ ವಿಮರ್ಶೆಗಳು ಬಂದರೆ ಅಧಿಕಾರಿಗಳಿಗೆ ಕ್ರಮವನ್ನು ಸಹ ಜರುಗಿಲಾಗುತ್ತದೆಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.

ಜನಸ್ನೇಹಿ ಪೊಲೀಸ್

’ಜನಸಾಮಾನ್ಯರೊಂದಿಗೆ ಪೊಲೀಸರು ಉತ್ತಮ ಬಾಂಧವ್ಯ ಹೊಂದಿದಾಗ ಮಾತ್ರ ಸಮಾಜದಲ್ಲಿ ಏನು ನಡೆಯುತ್ತಿದೆ ಎನ್ನುವ ಮಾಹಿತಿ ಪಡೆಯಲು ಈ ಯೋಜನೆ ಜಾರಿ ಮಾಡಲಾಗಿದ್ದು ಜನರ ನಡುವೆ ನಡೆಯುವ ಜಗಳ ಮನಸ್ತಾಪ ಮತ್ತು ಕೋಮುಗಲಭೆಯನ್ನು ತಡೆಯಲು ಗುಪ್ತಚರ ಇಲಾಖೆಗೆ ಕ್ಯೂಆರ್ ಕೋಡ್ ವ್ಯವಸ್ಥೆ ಸಹಕಾರಿಯಾಗಲಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮತ್ತಷ್ಟು ಜನಸ್ನೇಹಿಯಾಗಲು ಸಹಕಾರಿಯಾಗಲಿದೆ. ಕರ್ತವ್ಯ ನಿರ್ವಹಣೆಯಲ್ಲಿ ಕೆಲ ಪೊಲೀಸರು ಅನಾರೋಗ್ಯಕ್ಕೂ ತುತ್ತಾಗಿದ್ದಾರೆ. ಒಂದೆಡೆ ಕರ್ತವ್ಯ, ಮತ್ತೊಂದೆಡೆ ವಿಐಪಿಗಳ ಭದ್ರತೆಯ ನಡುವೆಯೂ ಕೆಲಸ ಮಾಡಬೇಕಾಗುತ್ತದೆ. ನಿಮ್ಮ ಸಮಸ್ಯೆಗಳ ಪರಿಹಾರಕ್ಕೆ ಈ ಕೋಡ್ ಅವಳವಡಿಕೆ ಆಗಿದೆ.

ಜಿಲ್ಲೆಯಲ್ಲಿ ಎಷ್ಟು ಠಾಣೆಗಳು ರಾಯಚೂರು ಜಿಲ್ಲಾ ಪೊಲೀಸ್ ಇಲಾಖೆಯ ಅಧಿನದಲ್ಲಿ ಒಟ್ಟು 28 ಠಾಣೆಗಳು ಇದ್ದು, ಇದರಲ್ಲಿ 03 ಡಿವೈಎಸ್ಪಿ ಕಚೇರಿಗಳು,06 ಪಿಐ ಠಾಣೆಗಳು, ಒಂದು ಮಹಿಳಾ ಠಾಣೆ,ಒಂದು ಸೇನ್ ಠಾಣೆ ಹಾಗೂ 17 ಪಿಎಸ್‌ಐ ಠಾಣೆಗಳು ಇದ್ದು, ಇದರಲ್ಲಿ ಇತ್ತಿಚ್ಚಿಗೆ ನಗರದ ಸದರ್ ಬಜಾರ್ ಠಾಣೆಯಲ್ಲಿ ಎಸ್ಪಿ ಎಂ. ಪುಟ್ಟಮಾದಯ್ಯ ಅವರು ಕ್ಯೂಆರ್ ಕೋಡ್‌ಗೆ ಚಾಲನೆ ನೀಡಿದ್ದು, ಜಿಲ್ಲೆಯ ಎಲ್ಲಾ ಠಾಣೆಗಳ ಮುಖ್ಯದ್ವಾರದಲ್ಲಿ ಅಳವಡಿಕೆ ಮಾಡಲಾಗಿದೆ.

ಪೊಲೀಸ್ ವ್ಯವಸ್ಥೆಯನ್ನು ಮತ್ತಷ್ಟು ಜನಸ್ನೆಹಿಯಾಗಿಸಲು ಸರ್ಕಾರ ಜಾರಿ ಮಾಡಿದ ಪೊಲೀಸ್ ಫೀಡ್ ಬ್ಯಾಕ್ ಆ್ಯಪ್ ಕ್ಯೂಆರ್ ಕೋಡ್ ತಂತ್ರಾಂಶಯನ್ನು ಇತ್ತಿಚ್ಚಿಗೆ ನಮ್ಮ ಜಿಲ್ಲೆಯಲ್ಲಿಯೂ ಪ್ರಾರಂಭ ಮಾಡಲಾಗಿದೆ. ಇದರಿಂದ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. 
ಎಂ.ಪುಟ್ಟಮಾದಯ್ಯ ಎಸ್ಪಿ ರಾಯಚೂರು