ಜಿಲ್ಲೆ

ರಸ್ತೆ ಗುಂಡಿ ಮುಚ್ಚಿಸಿದ ಪಿಎಸ್ಐ ವರ್ಷಾ: ಹೊಳಲು ವೃತ್ತದಲ್ಲಿ ಸಾರ್ವಜನಿಕರಿಗೆ ಅನುಕೂಲ

ಮಂಡ್ಯ: ನಗರದ ಹೊಳಲು ವೃತ್ತದ ಸಮೀಪ ಗುಂಡಿಗಳಿಂದಾಗಿ ಸಾರ್ವಜನಿಕರಿಗೆ ಸಮಸ್ಯೆಯಾಗಿದ್ದ ಹಿನ್ನೆಲೆಯಲ್ಲಿ ಮಂಗಳವಾರ ಸೆಂಟ್ರಲ್ ಠಾಣೆ ಪಿಎಸ್ಐ ವರ್ಷಾ ಮುಂದಾಳತ್ವದಲ್ಲಿ ತಾತ್ಕಾಲಿಕವಾಗಿ ಪರಿಹಾರ ಮಾಡಲಾಯಿತು.
ಕಾರೇಮನೆ ಗೇಟ್ ಕಡೆಯಿಂದ ಬರುವ ಮಾರ್ಗದಲ್ಲಿ ಹೊಳಲು ವೃತ್ತದ ಸಮೀಪ ಸರಣಿ ಗುಂಡಿಗಳಿವೆ. ಇದರಿಂದಾಗಿ ಪ್ರತಿನಿತ್ಯ ಜನರು ಸಂಚರಿಸಲು ಸಮಸ್ಯೆಯಾಗಿತ್ತು. ಈ ಹಿನ್ನೆಲೆಯಲ್ಲಿ  ವರ್ಷಾ ಅವರು ಟಿಪ್ಪರ್‌ಗಳ ಮೂಲಕ ಮಣ್ಣನ್ನು ತರಿಸಿ ಗುಂಡಿಗಳಿಗೆ ಸುರಿಸಿ ಜೆಸಿಬಿ ಮೂಲಕ ಮುಚ್ಚಿಸಿದರು. ಇದರಿಂದಾಗಿ ಸಮಸ್ಯೆ ತಾತ್ಕಾಲಿಕವಾಗಿ ಕಡಿಮೆಯಾಗಿದೆ. ಆದರೆ ಇಂತಹ ಪ್ರಯತ್ನ ಮಾಡಿದ ಪಿಎಸ್ಐ ವರ್ಷಾ ಹಾಗೂ ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದರು.