ವಿಜಯಪುರದ ಅಖಿಲ ಭಾರತ ವಿರಶೈವ ಲಿಂಗಯತ ಮಹಾಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ದತ್ತಿ ಸ್ಮರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಪ್ರೊ. ಸಿದ್ದಣ್ಣ ಲಂಗೋಟಿ, ಜಂಬುನಾಥ ಕಂಚ್ಯಾಣಿ, ಡಾ. ವಿ.ಡಿ. ಐಹೊಳ್ಳಿ ಮತ್ತಿತರರಿದ್ದಾರೆ. 
ಜಿಲ್ಲೆ

ಬಂಡಾಯ ಸಾಹಿತ್ಯಕ್ಕೆ ಮುನ್ನುಡಿ ಬರೆದ ಪೋಳರು

ವಿಜಯಪುರ: ಕರ್ನಾಟಕದಲ್ಲಿ ಹುಟ್ಟಿಕೊಂಡ ಬಂಡಾಯ ಸಾಹಿತ್ಯಕ್ಕೆ ಮುನ್ನುಡಿ ಬರೆದು ಮುನ್ನಡೆಸಿದವರು ಕುಮಾರ ಕಕ್ಕಯ್ಯ ಪೋಳರು ಎಂದು ಪ್ರೊ. ಸಿದ್ದಣ್ಣ ಲಂಗೋಟಿ ಹೇಳಿದರು.

ಶರಣ ಸಾಹಿತ್ಯ ಪರಿಷತ್​, ಎ.ಎಸ್​. ಹಿಪ್ಪರಗಿ ಪ್ರತಿಷ್ಠಾನ, ಜಿಲ್ಲಾ ವಿರಶೈವ ಲಿಂಗಯತ ಮಹಾಸಭಾ ಮತ್ತು ಕುಮಾರ ಕಕ್ಕಯ್ಯ ಪೋಳ ಪ್ರತಿಷ್ಠಾನಗಳ ಸಂಯುಕ್ತಾಶಯದಲ್ಲಿ ನಗರದ ಅಖಿಲ ಭಾರತ ವೀರಶೈವ ಮಹಾಸಭಾ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ದತ್ತಿ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶರಣ ಸಾಹಿತ್ಯಕ್ಕೆ ಕುಮಾರ ಕಕ್ಕಯ್ಯ ಪೋಳರು ಕೊಡುಗೆ ಅಪಾರ ಎಂದರು. ಡಾ. ಕಲ್ಯಾಣಮ್ಮ ಲಂಗೋಟಿ ಮಾತನಾಡಿ, ಮಡಿವಾಳ ಮಾಚಯ್ಯ ಹಾಗೂ ಅಂಬಿಗರ ಚೌಡಯ್ಯನವರಂತೆ ಕುಮಾರ ಕಕ್ಕಯ್ಯನವರು ಸಮಾಜದ ಅಂಕು ಡೊಂಕುಗಳನ್ನು ತಿದ್ದಲು ಶ್ರಮಿಸಿದ್ದಾರೆ ಎಂದು ಹೇಳಿದರು. ವಿ.ಸಿ. ನಾಗಠಾಣ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶರಣ ಸಾಹಿತ್ಯ ಪರಿಷತ್​ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ ಸ್ವಾಗತಿಸಿ ಪರಿಚಯಿಸಿದರು. ಹಿಪ್ಪರಗಿ ಪ್ರತಿಷ್ಠಾನದ ಅಧ್ಯಕ್ಷ ಡಾ. ವಿ.ಡಿ. ಐಹೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಎಸ್​.ಎಂ. ಮೇತ್ರಿ ವಂದಿಸಿದರು.

ಐ.ಡಿ. ತೊಂಡಿಕಟ್ಟಿ, ಬಿ.ಸಿ. ಸಾರವಾಡ, ಶ್ರೀಕಾಂತ ಪೋಳ, ಚಿದಾನಂದ ಪೋಳ, ಡಾ. ಉಷಾ ಹಿರೇಮಠ, ಎಸ್​.ವೈ. ಗದಗ, ಬಿ.ಟಿ. ಈಶ್ವರಗೊಂಡ, ಎಸ್​.ಎನ್​. ಶಿವಣಗಿ, ಸಂಜಯ ಇಂಗಳೆ, ಗೌತಮ ಪೋಳ, ಎಸ್​.ಬಿ. ದೊಡಮನಿ, ಸಾವಿತ್ರಿ ಪೋಳ, ಎಸ್​.ಜಿ. ನಾಡಗೌಡರ, ಜೆ.ಎಸ್​. ಪಾಟೀಲ, ಪ್ರಭುಗೌಡ ಪಾಟೀಲ, ಅನಿಲ ಹೊಸಮನಿ ಮತ್ತಿತರರಿದ್ದರು.