ನಾಗಠಾಣ ಗ್ರಾಮದ ಅಕ್ಕಮಹಾದೇವಿ ಗುಡಿಯಲ್ಲಿ ಅಕ್ಕಮಹಾದೇವಿ ಜಯಂತಿ ಆಚರಿಸಲಾಯಿತು. ಸಂತೋಷ ಬಂಡೆ, ಕಸ್ತೂರಿ ವಗ್ಗೆ, ಮಹಾದೇವಿ ಹಡಪದ ಮತ್ತಿತರರಿದ್ದಾರೆ.  
ಜಿಲ್ಲೆ

ಕನ್ನಡ ಸಾಹಿತ್ಯದ ಧ್ರುವತಾರೆ

ವಿಜಯಪುರ: ಮಹಿಳಾ ಸ್ವಾಭಿಮಾನ ಮತ್ತು ಆತ್ಮಬಲದ ಸಂಕೇತ ಅಕ್ಕಮಹಾದೇವಿ. ಅವರ ಜೀವನದ ಯಶೋಗಾಥೆ ಅಬಲೆಯರಲ್ಲಿ ಶಕ್ತಿ ಬುತ್ತಿದೆ. ಶರಣ ಚಳವಳಿಯಲ್ಲಿ ಅವರು ಮೇರು ವ್ಯಕ್ತಿತ್ವದ ಚೇತನವಾಗಿದ್ದರು ಎಂದು ಶಿಕ, ಸಾಹಿತಿ ಸಂತೋಷ ಬಂಡೆ ಹೇಳಿದರು.

ತಾಲೂಕಿನ ನಾಗಠಾಣ ಗ್ರಾಮದ ಅಕ್ಕಮಹಾದೇವಿ ಗುಡಿಯಲ್ಲಿ ಅಕ್ಕಮಹಾದೇವಿ ಮಹಿಳಾ ಬಳಗದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಕ್ಕಮಹಾದೇವಿ ತನ್ನ ವಚನಗಳಲ್ಲಿ ಬುದ್ಧಿಗಿಂತ ಭಾವಕ್ಕೆ, ಮಾತಿಗಿಂತ ಕ್ರಿಯೆಗೆ, ಅಧಿಕಾರಕ್ಕಿಂತ ಅಂತ@ಕರಣಕ್ಕೆ ಹೆಚ್ಚು ಮಹತ್ವ ನೀಡಿದ್ದಾರೆ. ಅಕ್ಕನವರ ಮಾತು ಪಾಂಡಿತ್ಯದ ಪ್ರದರ್ಶನವಾಗಿರದೆ, ಅಂತರಂಗದಲ್ಲಿ ಹಚ್ಚಿಟ್ಟ ದೀಪದಂತಿದೆ. ಅಕ್ಕ ಒಬ್ಬ ಕವಯಿತ್ರಿ&ಅನುಭಾವಿ&ಾನದ ಬೆಳಕಾಗಿ ಕನ್ನಡ ಸಾಹಿತ್ಯದ ಧ್ರುವತಾರೆಯಾಗಿದ್ದಾಳೆ ಎಂದರು.

ಬಳಗದ ಸುನಂದಾ ತಾಯಿ ಮಾತನಾಡಿ, ಅಕ್ಕಳನ್ನು ಭಕ್ತಿ, ಾನ. ವೈರಾಗ್ಯಗಳ ಖಣಿ ಎಂದು ಶರಣರು ಬಣ್ಣಿಸಿರುವರು. ಆದಕಾರಣ ಶರಣರಿಗೆ ಬಸವಣ್ಣ ಪ್ರಮುಖರಾದಂತೆ ಶರಣೆಯರಿಗೆ ಅಕ್ಕಮಹಾದೇವಿ ಆದರ್ಶರಾಗಿರುವರು ಎಂದರು.

ಮಂಜುನಾಥ ಗಂಗನಳ್ಳಿ ಮಾತನಾಡಿ, ಕನ್ನಡ ಸಾಹಿತ್ಯದ ಮೊದಲ ಬಂಡಾಯ ಕವಯಿತ್ರಿ, ವಚನಗಾರ್ತಿ ಹಾಗೂ ಮಹಿಳೆಯರ ಪ್ರತಿನಿಧಿಯಾಗಿ, ಸಾಮಾಜಿಕ ಬದಲಾವಣೆಗೆ ಶ್ರಮಿಸಿದ ಅಕ್ಕಮಹಾದೇವಿಯ ಬದುಕೇ ಒಂದು ಮಹಾಕಾವ್ಯ ಎಂದು ತಿಳಿಸಿದರು.

ರಾಜು ಕತ್ನಳ್ಳಿ, ಪ್ರವಿಣ ಅರಕೇರಿ, ಮುತ್ತಪ್ಪ ಹಂಡಿ, ಬಾಬು ಕತ್ನಳ್ಳಿ, ತಿಪರಾಯ ಹಂಡಿ, ಕಸ್ತೂರಿ ವಗ್ಗೆ, ಮಹಾದೇವಿ ಹಡಪದ, ಪ್ರವಿಣ ಬಬಲಾದ, ಭವರವ್ವ ಬಂದಾಳ, ಪಾರ್ವತಿ ಸಾರವಾಡ ಮತ್ತಿತರರಿದ್ದರು.