ಕವಿತಾಳ: ಸಮೀಪದ ಧೋತರಬಂಡಿ ಹಳ್ಳದ ಸೇತುವೆಯಲ್ಲಿ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗುತ್ತಿದ್ದ ಬೈಕ್ ಸವಾರರು ಮಂಗಳವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸೇತುವೆ ದಾಟುತ್ತಿರುವಾಗ ಸವಾರರಾದ ಬಸವಲಿಂಗ, ಶಾಂತಮ್ಮ, ಮೌನೇಶ ತಿಮ್ಮಪೂರ ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದರು. ಆಗ ಸಾರ್ವಜನಿಕರು ಬೈಕ್ ಸವಾರರನ್ನು ರಕ್ಷಿಸಿದ್ದಾರೆ. ಬೊಂಗಾದಲ್ಲಿ ಸಿಲುಕಿದ್ದ ಬೈಕ್‌ನ್ನು ಜಿಸಿಬಿ ಮೂಲಕ ಹೊರತೆಗೆಯಲಾಯಿತು. ಕೆಳ ದಿನಗಳಿಂದ ಮಳೆ ಆರ್ಭಟ ಜೋರಾಗಿದೆ. ಹಳ್ಳ-ಕಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ.
ಕಳೆದ 10 ವರ್ಷಗಳಿಂದ ಧೋತರಬಂಡಿ ಹಳ್ಳದ ಸೇತುವೆಯಲ್ಲಿ ಬಿದ್ದ ಬೊಂಗಾದಿಂದ ಸಮಸ್ಯೆಯಾಗಿದೆ. ಕೆಲ ತಿಂಗಳ ಹಿಂದೆ ಸಚಿವ ಎನ್.ಎಸ್. ಬೋಸರಾಜು ಸೇತುವೆ ಕಾಮಗಾರಿಗೆ ಚಾಲನೆ ನೀಡಿದ್ದರೂ ಸಮಸ್ಯೆ ಪರಿಹಾರವಾಗಿಲ್ಲ. ಕೂಡಲೇ ದುರಸ್ತಿ ಮಾಡಬೇಕೆಂದು ಎಂದು ಧೋತರಬಂಡಿ, ಉಟಕನೂರು, ತಿಮ್ಮಪೂರ ಗ್ರಾಮದ ಸಾರ್ವಜನಿಕರು ಒತ್ತಾಯಿಸಿದ್ದಾರೆ.