ಬಸವನಬಾಗೇವಾಡಿ: ಸಮಾಜದಲ್ಲಿ ಮತ್ತು ರಾಜಕಾರಣದಲ್ಲಿ ಸರಳ ಸಜ್ಜನಿಕೆಯ ರಾಜಕಾರಣಿ ಎಂದೆ ಹೆಸರು ವಾಸಿಯಾದ ದಿ. ಬಿ.ಎಸ್. ಪಾಟೀಲ ಮನಗೂಳಿ ಅವರ ನೆನಪು ಇನ್ನೂ ಜನರ ಮನಸ್ಸಿನಲ್ಲಿ ಹಚ್ಚು ಹಸಿರಾಗಿ ಉಳಿದಿದೆ.
ವಿಜಯಪುರ ಜಿಲ್ಲೆಯ ಅತ್ಯಂತ ಪ್ರತಿಷ್ಠಿತ ಗೌಡರ ಮನೆತನದಲ್ಲಿ ಒಂದಾದ ಮನಗೂಳಿ ಗೌಡರ ಮನೆತನ ಕೂಡ ಜಿಲ್ಲೆಯಲ್ಲಿ ಹೆಸರು ವಾಸಿಯಾದ ಮನೆತನ. ಜಿಲ್ಲೆಯ ಕನಮಡಿ ಗ್ರಾಮದಲ್ಲಿ ಈ ಮನೆತನದಲ್ಲಿ ಏಪ್ರಿಲ್ 24, 1931 ರಲ್ಲಿ ಬಸನಗೌಡ ಸೋಮನಗೌಡ ಪಾಟೀಲ ಜನಿಸಿದರು. ಪ್ರಾಥಮಿಕ ಶಿಣವನ್ನು ಮನಗೂಳಿ ಗ್ರಾಮದಲ್ಲಿ, ಪ್ರೌಢಶಾಲೆ ಶಿಕ್ಷಣವನ್ನು ವಿಜಯಪುರ ನಗರದಲ್ಲಿ ಪಡೆದರು.
1956 ರಲ್ಲಿ ಪ್ರಥಮ ಬಾರಿ ಗ್ರಾ.ಪಂ. ಸದಸ್ಯರಾಗಿ, 1960ರಲ್ಲಿ ಬಸವನಬಾಗೇವಾಡಿ ತಾಲೂಕು ಬೋರ್ಡ್ ಅಧ್ಯರಾಗಿ ಆಯ್ಕೆಯಾಗಿದ್ದರು. 1964ರಲ್ಲಿ ಮನಗೂಳಿ ಗ್ರಾಮದಲ್ಲಿ ಜನತಾ ವಿದ್ಯಾವರ್ಧಕ ಶಿಣ ಸಂಸ್ಥೆಯನ್ನು ಸ್ಥಾಪಿಸುವ ಜೊತೆಗೆ ಹೂವಿನಹಿಪ್ಪರಗಿ, ಗೊಳಸಂಗಿ, ರೋಣಿಹಾಳ ಹೀಗೆ ಹಲವಾರು ಗ್ರಾಮದಲ್ಲಿ ಶಿಣ ಸಂಸ್ಥೆಯನ್ನು ಆರಂಭಿಸುವ ಮೂಲಕ ಶಿಣದಿಂದ ವಂಚಿತರಾದವರಿಗೆ ಶಿಣ ಒದಗಿಸಿಕೊಡುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
1963 ಜೂನ್ 2ರಂದು ವಿಜಯಪುರ ನಗರದ ದರ್ಬಾರ ಹೈಸ್ಕೂಲ್ ಮೈದಾನದಲ್ಲಿ ರಾಷ್ಟ್ರೀಯ ರಣಾ ನಿಧಿ ಸಂಗ್ರಹ ಸಮಾರಂಭದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಾಗೂ ಎಸ್. ನಿಜಲಿಂಗಪ್ಪ ಅವರ ಬಂಗಾರದ ತುಲಾಭಾರ ಕಾರ್ಯಕ್ರಮದಲ್ಲಿ ಬಿ.ಎಸ್. ಪಾಟೀಲ ಮನಗೂಳಿ ಅವರ ಪಾತ್ರ ಪ್ರಮುಖವಾಗಿತ್ತು.
1967ರಲ್ಲಿ ಪ್ರಥಮ ಬಾರಿಗೆ ಬಸವನ ಬಾಗೇವಾಡಿ ಮತೇತ್ರದಿಂದ ಆಯ್ಕೆಯಾದ ಪಾಟೀಲರು ಸತತವಾಗಿ 6 ಬಾರಿ ಈ ೇತ್ರದಿಂದ ಆಯ್ಕೆಯಾಗಿದ್ದರು. ಸಚಿವರಾಗಿ ಜಿಲ್ಲೆಯ ವಿವಿಧ ಸಂ& ಸಂಸ್ಥೆಗಳಲ್ಲಿ ಅಧ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಬಸವನ ಬಾಗೇವಾಡಿ ಮತೇತ್ರದಿಂದ ಸತತವಾಗಿ ಆರು ಬಾರಿ ಗೆಲುವು ಸಾಧಿಸಿ ಜಿಲ್ಲೆಯಲ್ಲಿ ಸೋಲಿಲ್ಲದ ಸರದಾರ ಎಂಬ ಖ್ಯಾತಿ ಪಡೆದ ತಾಲೂಕಿನ ಮನಗೂಳಿ ಪಟ್ಟಣದ ದಿ. ಬಿ.ಎಸ್. ಪಾಟೀಲ ಮನಗೂಳಿ ಅವರು ಅತ್ಯಂತ ಸರಳ ಸಜ್ಜನಿಕೆ ರಾಜಕಾರಣಿಯಾಗಿದ್ದರು.
ಬಡವ ಬಲ್ಲಿದ ಎನ್ನದೆ ನಿತ್ಯವೂ ಬಡವರು ಹಾಗೂ ದೀನ& ದಲಿತರ ಕಷ್ಟ ಸುಖದಲ್ಲಿ ಭಾಗಿಯಾಗಿ ಅವರ ಆಸೆ ಆಕಾಂೆಗಳಿಗೆ ಸ್ಪಂದಿಸಿ ನಿತ್ಯ ಜನರ ಸೇವೆ ಜನಾರ್ದನ ಸೇವೆ ಎಂಬ ವೇದವಾಕ್ಯವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸರಳ ರಾಜಕೀಯ ಜೀವನವನ್ನು ನಡೆಸಿದ್ದರು.
ದಿವಂಗತ ಬಿ.ಎಸ್. ಪಾಟೀಲ ಅವರು ನಮ್ಮನ್ನು ಅಗಲಿ 16 ನವೆಂಬರ್ 2024 ರಂದು 19 ವರ್ಷವಾದರೂ ಕೂಡ ಅವರ ಸರಳ ಸಜ್ಜನಿಕೆ ಹಾಗೂ ನೀತಿ ನಡವಳಿಕೆ ಇನ್ನೂ ಜನರ ಮನಸ್ಸಿನಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡಿದೆ.