ಬೇಲೂರು ಸಮೀಪದ ಬಂಟೇನಹಳ್ಳಿಯಲ್ಲಿರುವ ಬನ್ನಿಮಂಟಪದ ಸ್ಥಳವನ್ನು ಜೆಸಿಬಿ ಯಂತ್ರದ ಮೂಲಕ ಸ್ವಚ್ಛಗೊಳಿಸುತ್ತಿರುವ ಕಂದಾಯ ಹಾಗೂ ದೇಗುಲದ ಸಿಬ್ಬಂದಿ. 
ಜಿಲ್ಲೆ

ಬೇಲೂರಿನ ಬನ್ನಿಮಂಟಪದ ಸ್ಥಳ ಸ್ವಚ್ಛ

ಬೇಲೂರು: ವಿಜಯದಶಮಿ ಅಂಗವಾಗಿ ಪಟ್ಟಣ ಸಮೀಪದ ಬಂಟೇನಹಳ್ಳಿ ಗ್ರಾಮದ ಬಳಿ ಇರುವ ಬನ್ನಿಮಂಟಪದ ಸ್ಥಳವನ್ನು ಶ್ರೀ ಚನ್ನಕೆಶವಸ್ವಾಮಿ ದೇಗುಲ ಆಡಳಿತ ಮಂಡಳಿ ಹಾಗೂ ಕಂದಾಯ ಇಲಾಖೆಯಿಂದ ಬುಧವಾರ ಸ್ವಚ್ಛತಾ ಕಾರ್ಯ ನಡೆಸಲಾಯಿತು.

ವಿಜಯದಶಮಿ ದಿನವಾದ ಶನಿವಾರ ಬನ್ನಿಮಂಟಪದ ಸ್ಥಳದಲ್ಲಿ ಬನ್ನಿಮರ ಪೂಜೆ ಇರುವುದರಿಂದ ದೇಗುಲದಿಂದ 3 ಕಿ.ಮೀ.ದೂರದಲ್ಲಿರುವ ಬಂಟೇನಹಳ್ಳಿ ಗ್ರಾಮದಲ್ಲಿರುವ ಬನ್ನಿಮಂಟಪಕ್ಕೆ ಶ್ರೀ ಚನ್ನಕೇಶವಸ್ವಾಮಿಯನ್ನು ಅಶ್ವರೂಢ ಉತ್ಸವದ ಮೂಲಕ ಕರೆತಂದು ಬನ್ನಿಮರ ಹಾಗೂ ದೇವರನ್ನು ಪೂಜಿಸಿ ಬನ್ನಿ ಸೊಪ್ಪನ್ನು ಕಡಿದು ದೇವರಿಗೆ ಸಮರ್ಪಿಸಲಾಗುವುದು. ಈ ಹಿನ್ನೆಲೆಯಲ್ಲಿ ದೇಗುಲದ ಆಡಳಿತ ಮಂಡಳಿ ಕಾರ್ಯನಿರ್ವಹಕಾಧಿಕಾರಿ ಯೋಗೇಶ್ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಕಲ್ಲು ಮುಳ್ಳುಗಳಿಂದ ಕೂಡಿದ್ದ ಬನ್ನಿಮಂಟಪದ ಸ್ಥಳವನ್ನು ಜೆಸಿಬಿ ಯಂತ್ರದಿಂದ ಪೂರ್ಣ ಪ್ರಮಾಣದಲ್ಲಿ ಸ್ವಚ್ಛಗೊಳಿಸಿದರು. ಅಲ್ಲದೆ ಪ್ರತಿವರ್ಷ ಬೆಳಕಿನ ಸಮಸ್ಯೆ ಕಾಡುತಿದ್ದುದನ್ನು ಮನಗಂಡು ಅಧಿಕಾರಿಗಳು ಈ ಬಾರಿ ಹೆಚ್ಚುವರಿಯಾಗಿ ಬೆಳಕಿನ ವ್ಯವಸ್ಥೆ ಕಲ್ಪಿಸುವುದಕ್ಕೆ ಮುಂದಾಗಿದ್ದಾರೆ.

ಸ್ವಚ್ಛತಾ ಸಂದರ್ಭ ಶ್ರೀ ಚನ್ನಕೇಶವಸ್ವಾಮಿ ದೇಗುಲದ ಇಒ ಯೋಗೇಶ್, ಸಿಬ್ಬಂದಿ ಸುಧಾಕರ್, ಬಸವರಾಜು, ನಟರಾಜ್ ಗ್ರಾಮ ಸಹಾಯಕರಾದ ಹರೀಶ್, ಪ್ರದೀಪ್ ಇದ್ದರು.