ಹುನಗುಂದ ಪಟ್ಟಣದ ಗಚ್ಚಿನಮಠದಲ್ಲಿ ನಡೆದ ಲಿಂ. ಮುರುಘೇಂದ್ರ ಮಹಾಸ್ವಾಮಿಗಳ 59ನೇ ಪುಣ್ಯ ಸ್ಮರಣೋತ್ಸವ ಹಾಗೂ ನಮ್ಮ ಬದುಕಿಗೆ ಬೆಳಕು ಚೆಲ್ಲುವ ಆಧ್ಯಾತ್ಮ ಪ್ರವಚನ ಕಾರ್ಯಕ್ರಮದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿದರು. ಅಮರೇಶ್ವರ ದೇವರು, ವೇದಮೂರ್ತಿ ಮಹಾಂತಯ್ಯ ಶೇಖರಪ್ಪ ಬಾದವಾಡಗಿ ಇದ್ದರು. 
ಜಿಲ್ಲೆ

ಮಹಾಪುರುಷರ ತತ್ವಾದರ್ಶ ಅನುಕರಣೀಯ

ಹುನಗುಂದ: ಮನುಷ್ಯರೆಲ್ಲರೂ ಮಾನವೀಯತೆ ಮೌಲ್ಯಗಳನ್ನು ಕಲಿತಿದ್ದೇ ಪುರಾಣ ಪುಣ್ಯ ಕಥೆ ಮತ್ತು ಪ್ರವಚನಗಳಿಂದ ಎಂದು ವೀರಶೈವ ಲಿಂಗಾಯತ ಲಿಂಗಾಯತ ಅಭಿವದ್ಧಿ ನಿಗಮ ಮಂಡಳಿ ಅಧ್ಯಕ್ಷ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ಪಟ್ಟಣದ ಗಚ್ಚಿನಮಠದಲ್ಲಿ  ಹಮ್ಮಿಕೊಂಡ ಲಿಂ. ಮುರಘೇಂದ್ರ ಮಹಾಸ್ವಾಮಿಗಳ 59ನೇ ಪುಣ್ಯ ಸ್ಮರಣೋತ್ಸವ ವಿಶೇಷ ಉಪನ್ಯಾಸಗಳು, ಸಾಧಕರಿಗೆ ಸನ್ಮಾನ ಮತ್ತು ಪುರಸ್ಕಾರ ನಮ್ಮ ಬದುಕಿಗೆ ಬೆಳಕು ಚೆಲ್ಲುವ ಅಧ್ಯಾತ್ಮ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಾನವ ಕುಲದ ಉದ್ಧಾರಕ್ಕೆ ಅನೇಕ ಮಹಾ ಪುರುಷರು ಮತ್ತು ತಪಸ್ವಿಗಳು ಶ್ರಮಿಸಿದವರನ್ನು ನಮ್ಮ ಮನದಾಳದಲ್ಲಿ ಸ್ಮರಿಸಿ ಅವರ ಆದರ್ಶ ಹಾಗೂ ತತ್ವಗಳು ನಮಗೆಲ್ಲರಿಗೂ ದಾರಿ ದೀಪವಾಗಿವೆ. 12ನೇ ಶತಮಾನದಲ್ಲಿ ಬಸವಣ್ಣನವರು ಲಿಂಗಾಯತ ಧರ್ಮವನ್ನು ಕಟ್ಟಿ ಅದಕ್ಕೆ ಎಲ್ಲ ರೀತಿಯಾಗಿ ಸಂಸ್ಕಾರ ನೀಡಿದ್ದಾರೆ.

ವಿಭೂತಿಯಲ್ಲಿ ಬಹಳಷ್ಟು ಅಗಾಧವಾದ ಶಕ್ತಿಯಿದೆ. ವಿಭೂತಿಯನ್ನು ಪ್ರತಿಯೊಬ್ಬರು ಧರಿಸಿ ಉತ್ತಮ ಸಂಸ್ಕಾರ ಸಾಂಪ್ರದಾಯ ಮತ್ತು ಪರಂಪರೆಯಲ್ಲಿ ಬೆಳೆದ ನಾವು ಮುಂದಿನ ಪೀಳಿಗೆಯಲ್ಲಿ ನಮ್ಮ ಧರ್ಮ ರಕ್ಷಣೆಯನ್ನು ಮಾಡುವಲ್ಲಿ ಯಾವುದೇ ಕಾರಣಕ್ಕೆ ಹಿಂದೆ ಸರಿಯಬಾರದು. ವೀರಶೈವ ಲಿಂಗಾಯತ ಧರ್ಮ ಸ್ಥಾಪಕರು ಹಾನಗಲ್ಲ ಕುಮಾರ ಮಹಾಸ್ವಾಮಿಗಳು ಇವತ್ತು ಲಿಂಗಾಯತ ಧರ್ಮಕ್ಕೆ ಸಂಸ್ಕಾರ ನಿಷ್ಠೆಯನ್ನು ಕೊಟ್ಟು ಹೋಗಿದ್ದರೆ ಆ ನಿಟ್ಟಿನಲ್ಲಿ ಎಲ್ಲರೂ ನಡೆದುಕೊಂಡು ಹೋಗಿ ಧರ್ಮ ರಕ್ಷಣೆಯನ್ನು ಮಾಡಬೇಕೆಂದು ಹೇಳಿದರು.

ಗಚ್ಚಿನಮಠದ ಅಮರೇಶ್ವರ ದೇವರು ಮಾತನಾಡಿ, ಪ್ರತಿಯೊಬ್ಬರ ಜನರು ಒಳ್ಳೆಯ ದಾರಿಯನ್ನು ಸೇರಲು ಗುರುವಿನ ಪ್ರವಚನಗಳನ್ನು ಆಲಿಸಬೇಕು. ಬದುಕಿನಲ್ಲಿ ಎಲ್ಲ ಕಷ್ಟಗಳನ್ನು ನೋಡುತ್ತಿದ್ದೇವೆ. ಮೊದಲಿನ ಪ್ರೀತಿ ಈಗಿಲ್ಲ. ದ್ವೇಷ, ಅಸೂಯೆಗಳು ದಿನನಿತ್ಯ ಹೆಚ್ಚು ಬೆಳೆಯುತ್ತಿವೆ. ಆದ್ದರಿಂದ ಪ್ರವಚನಗಳು ಆಲಿಸಿದರೆ. ದ್ವೇಷ ಅಸೂಯೆಯಂತಹ ಕಷ್ಟಗಳು ದೂರಾಗುತ್ತವೆ. ಆದ್ದರಿಂದ ಒಳ್ಳೆಯ ದಾರಿಗಳು ತೋರಿಸುವುದನ್ನು ಪ್ರವಚನಗಳು ತಿಳಿಸುತ್ತವೆ. ಮಕ್ಕಳಿಗೆ ದುಶ್ಚಟಕ್ಕೆ ಹಾಳಾಗದಂತೆ ನೋಡಿಕೊಂಡು ಅಥಣಿಯ ಮುರುಘೇಂದ್ರ ಮಹಾಸ್ವಾಮಿಗಳು ಮತ್ತು ಹಾನಗಲ್ಲ ಕುಮಾರ ಶ್ರೀಗಳ ಜೀವನ ಆಧಾರಿತ ಪುರಾಣಗಳು ಎಲ್ಲ ಜನರು ಆಲಿಸಬೇಕು ಎಂದು ತಿಳಿಸಿದರು.

ಪುರಸಭೆ ಅಧ್ಯಕ್ಷೆ ಭಾಗ್ಯಶ್ರೀ ರೇವಡಿ ಮಾತನಾಡಿ, ನಮ್ಮ ಮಕ್ಕಳಿಗೆ ಇಂದಿನ ದಿನಗಳಲ್ಲಿ ಹೆಚ್ಚಿನ ಆಧ್ಯಾತ್ಮದ ಕಡೆಗೆ ಗಮನಹರಿಸಲು ತಿಳಿಸಿಕೊಡಬೇಕೆಂದು ಹೇಳಿದರು. ವಕೀಲ ಎಂ.ಎಸ್. ಪಾಟೀಲ, ಸಂಗಮೇಶ್ವರ ಜೀಣೋದ್ಧಾರ ಕಮಿಟಿ ಅಧ್ಯಕ್ಷ ಶೇಖರಪ್ಪ ಬಾದವಾಡಗಿ ಮಾತನಾಡಿದರು.

ವೇದಮೂರ್ತಿ ಮಹಾಂತಯ್ಯ ಗಚ್ಚಿನಮಠ, ವಿ.ಮ. ಬ್ಯಾಂಕ್ ಅಧ್ಯಕ್ಷ ಶಿವಾನಂದ ಕಂಠಿ, ಮಲ್ಲನಗೌಡ ಪಾಟೀಲ, ಶಿವಪ್ಪ ಹುದ್ದಾರ, ಪ್ರವಚನಕಾರ ಕಮತಗಿಯ ಹಿರೇಮಠದ ಗಣೇಶ ಶಾಸಿ, ಚಂದ್ರ ಹಲಕಾವಟಗಿ ಪ್ರಾರ್ಥಿಸಿ ಅರುಣೋದಯ ದುದ್ಗಿ ನಿರೂಪಿಸಿ. ಪ್ರಭು ಮಾಲಗಿತ್ತಿಮಠ ವಂದಿಸಿದರು.