person arrested nelamangala 
ಜಿಲ್ಲೆ

ಬೈಕ್ ಕಳವಿಗೆ ಯತ್ನಿಸಿದವನ ಬಂಧನ

ನೆಲಮಂಗಲ: ನಗರ ಸಮೀಪದ ಬಸವನಹಳ್ಳಿಯಲ್ಲಿ ನಕಲಿ ಕೀ ಬಳಸಿ ದ್ವಿಚಕ್ರ ವಾಹನ ಕಳವು ಮಾಡಲು ಯತ್ನಿಸಿದ ಖದೀಮನನ್ನು ಸಾರ್ವಜನಿಕರು ಹಿಡಿದು ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.
ಒಡಿಶಾದ ಮೊಹಮ್ಮದ್(21) ಕಳ್ಳತನಕ್ಕೆ ಯತ್ನಿಸಿದವ. ಎರಡು ವರ್ಷದಿಂದ ಬಸವನಹಳ್ಳಿಯಲ್ಲಿ ಸ್ನೇಹಿತರ ಜತೆ ವಾಸವಿದ್ದ ಮೊಹಮ್ಮದ್ ತಾಲೂಕಿನ ಮಹದೇವಪುರ ಬಳಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಭಾನುವಾರ ರಾತ್ರಿ 9ಗಂಟೆ ವೇಳೆಯಲ್ಲಿ ಬಸವನಹಳ್ಳಿಯ ರೋಹಿತ್ ಎಂಬಾತನ ದ್ವಿಚಕ್ರವಾಹನವನ್ನು ನಕಲಿ ಕೀಯಿಂದ ಕಳ್ಳತನಕ್ಕೆ ಯತ್ನಿಸಿದ್ದ. ಇದನ್ನು ಗಮನಿಸಿದ್ದ ಸ್ಥಳೀಯ ಅರುಣ್‌ಕುಮಾರ್, ಕಳವಿಗೆ ಯತ್ನಿಸುತ್ತಿರುವುದನ್ನು ವಿಡಿಯೋ ಮಾಡಿ, ಖದೀಮನನ್ನು ಹಿಡಿದಿದ್ದಾನೆ. ಸ್ಥಳಕ್ಕೆ ಆಗಮಿಸಿದ್ದ ಗ್ರಾಮಸ್ಥರು ಥಳಿಸಿ, ಪೊಲೀಸರಿಗೆ ಒಪ್ಪಿಸಿದರು. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.