ಜಿಲ್ಲೆ

ಶಿಗ್ಗಾಂವಿ ಜನತೆಗೆ ತಪ್ಪದ ನೀರಿನ ಬವಣೆ

ಶಿಗ್ಗಾಂವಿ: ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಜಲಮೂಲಗಳು ಬತ್ತಿ ಹೋಗುತ್ತಿವೆ. ಆದರೆ, ಪಟ್ಟಣದ ಜನತೆಗೆ ನಾಗನೂರಿನಲ್ಲಿ 2 ವರ್ಷ ಸಾಕಾಗುವಷ್ಟು ಸಾಮರ್ಥ್ಯದ 170 ಎಕರೆ ವಿಸ್ತೀರ್ಣದ ಕೆರೆ ಇದೆ. ಆದರೂ ಸಂಬಂಧಿತ ಅಧಿಕಾರಿಗಳ ನಿರ್ಲಕ್ಷೃದಿಂದ ಪಟ್ಟಣದ ಜನರಿಗೆ ಶುದ್ಧ ಕುಡಿಯುವ ನೀರಿನ ಬವಣೆ ಮಾತ್ರ ತಪ್ಪಿಲ್ಲ.

ಮಳೆಗಾಲದಲ್ಲಿ 3 ಅಥವಾ 4 ದಿನಗಳಿಗೊಮ್ಮೆ ಹಾಗೂ ಬೇಸಿಗೆ ಬರುತ್ತಿದ್ದಂತೆ 8 ದಿನಗಳಿಗೊಮ್ಮೆ ಪಟ್ಟಣದ ಜನತೆಗೆ ನೀರು ಪೂರೈಸಲಾಗುತ್ತದೆ. ಅದನ್ನೂ ಸಮರ್ಪಕವಾಗಿ ತಲುಪಿಸುತ್ತಿಲ್ಲ. ನೀರು ಸಾಕಾಗಲಿಲ್ಲ ಎಂದಾದರೆ ವಾರ್ಡ್ ಸದಸ್ಯರನ್ನು ಅಥವಾ ವಾಟರ್‌ಮೆನ್ ಅವರನ್ನು ಸಂಪರ್ಕಿಸಿ ನೀರು ಪಡೆಯುವಂತಾಗಿದೆ.

ಶಾಶ್ವತ ಪರಿಹಾರಕ್ಕೆ ಒತ್ತಾಯ:

ಶಾಶ್ವತವಾಗಿ ನೀರಿನ ಬವಣೆ ನೀಗಿಸುವ ನಿಟ್ಟಿನಲ್ಲಿ ಏತ ನೀರಾವರಿ ಯೋಜನೆ ಮೂಲಕ ನಾಗನೂರು ಕೆರೆ ಸೇರಿ ಗ್ರಾಮೀಣ ಪ್ರದೇಶದ ಪ್ರತಿಯೊಂದು ಕೆರೆಗಳಿಗೂ ವರದಾ ನದಿಯಿಂದ ನೀರು ಹರಿಸಿ, ಕೆರೆ ತುಂಬಿಸಲು ಪೈಪ್‌ಲೈನ್ ಅಳವಡಿಸಲಾಗಿದೆ. ವರದಾ ನದಿಯಲ್ಲಿ ನೀರಿನ ಹರಿವು ಇದ್ದಾಗ ಕಾಲಕಾಲಕ್ಕೆ ಕೆರೆಗಳನ್ನು ತುಂಬಿಸಿದರೆ ಶಾಶ್ವತವಾಗಿ ನೀರಿನ ಸಮಸ್ಯೆಯನ್ನು ದೂರ ಮಾಡಬಹುದು. ಆದರೆ, ಅಧಿಕಾರಿಗಳು ಮಾತ್ರ ಸಮರ್ಪಕವಾಗಿ ಕೆರೆಗಳಿಗೆ ನೀರನ್ನು ತುಂಬಿಸದೆ ಇರುವುದರಿಂದ ನೀರಿನ ಸಮಸ್ಯೆ ಪರಿಹಾರವಾಗುತ್ತಿಲ್ಲ ಎನ್ನುತ್ತಾರೆ ಸ್ಥಳೀಯರು.

ಕಳೆದ ವರ್ಷ ಅತಿಯಾದ ಮುಂಗಾರು ಮಳೆಯಿಂದ ತಾಲೂಕಿನ ಬೆರಳೆಣಿಕೆಯಷ್ಟು ಹಳ್ಳಿಗಳನ್ನು ಹೊರತುಪಡಿಸಿ ಗ್ರಾಮೀಣ ಪ್ರದೇಶದಲ್ಲಿ ಜನಜಾನುವಾರುಗಳಿಗೆ ಅಷ್ಟೊಂದು ನೀರಿನ ಕೊರತೆ ಕಂಡುಬರುತ್ತಿಲ್ಲ. ತಾಲೂಕಿನ ಹಿರೇಮಲ್ಲೂರ ಪ್ಲಾಟ್, ಕುಂದೂರು, ಅಂದಲಗಿ, ಎನ್‌ಎಂ ತಡಸ, ಬಾಡ ಸೇರಿ ಹಲವು ಹಳ್ಳಿಗಳಲ್ಲಿ ಕೊಂಚ ಮಟ್ಟಿಗೆ ನೀರಿನ ಸಮಸ್ಯೆ ಉಂಟಾಗಿದೆ. ಮುಂಜಾಗ್ರತೆ ಕ್ರಮವಾಗಿ ಈಗಾಗಲೇ ತಾಲೂಕಾಡಳಿತದಿಂದ ರೈತರ ಬೋರ್‌ವೆಲ್‌ಗಳನ್ನು ಬಾಡಿಗೆ ತೆಗೆದುಕೊಂಡು ನೀರು ಒದಗಿಸಲಾಗುತ್ತಿದೆ.

ಕೆರೆ, ಬಾವಿ ಹೂಳೆತ್ತಿಸಿ

ಹಿರೇಮಲ್ಲೂರ ಪ್ಲಾಟ್, ಚಿಕ್ಕಮಲ್ಲೂರ, ಕಂಕನವಾಡ, ಕುಂದೂರು, ಅಂದಲಗಿ, ಅರೇ ಮಲೆನಾಡು ಗ್ರಾಮಗಳಲ್ಲಿ ಕಳೆದ ಹತ್ತು ವಷರ್ಗಳಿಂದ ೆಬ್ರವರಿ ತಿಂಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸುತ್ತದೆ. ಈ ಭಾಗದಲ್ಲಿರುವ ಕೆರೆ, ಬಾವಿಗಳನ್ನು ಹೂಳೆತ್ತುವ ಮೂಲಕ ಕೆರೆ ತುಂಬಿಸಲು ಅಧಿಕಾರಿಗಳು ಮುಂದಾಗಬೇಕು ಎಂಬುದು ರೈತರ ಒತ್ತಾಯವಾಗಿದೆ.

ಶಾಸಕರ ಅಧ್ಯಕ್ಷತೆಯಲ್ಲಿ ನೀರಿನ ಸಮಸ್ಯೆ ನಿವಾರಣೆಗೆ ಟಾಸ್‌‌ಕೆೆರ್ಸ್ ಸಮಿತಿ ರಚನೆ ಮಾಡಲಾಗಿದೆ. ಪ್ರತಿ ತಿಂಗಳು ಪಿಡಿಒಗಳು, ತಾಲೂಕು ಮಟ್ಟದ ಅಧಿಕಾರಿಗಳ ಜತೆಗೆ ಸಭೆ ನಡೆಸಿ ಗ್ರಾಮೀಣ ಪ್ರದೇಶದಲ್ಲಿ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ. 10 ಹಳ್ಳಿಗಳಲ್ಲಿ ಸ್ವಲ್ಪ ನೀರಿನ ಸಮಸ್ಯೆ ಬರಬಹುದು ಎಂದು ಅಂದಾಜಿಸಲಾಗಿದೆ. ಈಗಾಗಲೇ ರೈತರ ಬೋರ್‌ವೆಲ್‌ಗಳನ್ನು ಗುರುತಿಸಿದ್ದು, ತಾಲೂಕು ಆಡಳಿತದಿಂದ ಬಾಡಿಗೆ ಪಡೆದು ಗ್ರಾಮಗಳಿಗೆ ನೀರು ಪೂರೈಸಲಾಗುವುದು. ರವಿಕುಮಾರ ಕೊರವರ, ತಹಸೀಲ್ದಾರ್ ಶಿಗ್ಗಾಂವಿ ಪಟ್ಟಣಕ್ಕೆ ನೀರೊದಗಿಸುವ ನಾಗನೂರು ಕೆರೆಯಲ್ಲಿ ಇನ್ನೂ 2 ತಿಂಗಳಿಗೆ ಅಗುವಷ್ಟು ನೀರಿನ ಸಂಗ್ರಹವಿದೆ. ಮಿನಿ ವಾಟರ್ ಟ್ಯಾಂಕ್‌ಗಳ ಮೂಲಕ ನಿರಂತರವಾಗಿ ಪುರಸಭೆಯಿಂದ ನೀರು ಪೂರೈಸಲಾಗುತ್ತಿದೆ. ಜೆಜೆಎಂ ಕಾಮಗಾರಿ ಪ್ರಗತಿಯಲ್ಲಿದ್ದು, ಕಾಮಗಾರಿ ತ್ವರಿತವಾಗಿ ಮುಗಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಮುಂದಿನ ಮಾರ್ಚ್ ಒಳಗಾಗಿ ಜೆಜೆಎಂ ನಳಗಳ ಮೂಲಕ ನೀರು ಪೂರೈಸಲಾಗುವುದು. ನಾಗರಾಜ ಮಿರ್ಜಿ, ಶಿಗ್ಗಾಂವಿ ಪುರಸಭೆ ಮುಖ್ಯ ಇಂಜಿನಿಯರ್ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಪಟ್ಟಣದ ಜನತೆ ನೀರಿನ ತೊಂದರೆ ಅನುಭವಿಸುವಂತಾಗಿದೆ. ನಾಗನೂರು ಕೆರೆ ನೀರು ಕಡಿಮೆ ಆದಾಗ ಕೆರೆ ಹೂಳೆತ್ತಬೇಕು. ಆಗ ನೀರಿನ ಸಂಗ್ರಹ ಮಟ್ಟ ಹೆಚ್ಚಾಗುತ್ತದೆ. ವರದಾ ನದಿಯಿಂದ ನೀರನ್ನು ತುಂಬಿಸಿಕೊಂಡರೆ ಶಾಶ್ವತವಾಗಿ ನೀರಿನ ಸಮಸ್ಯೆ ದೂರವಾಗುತ್ತದೆ. ಸಂತೋಷ ಕಟಗಿ, ಶಿಗ್ಗಾಂವಿ ನಿವಾಸಿ