ಜಿಲ್ಲೆ

ವಿಪಕ್ಷ ನಾಯಕನಿಗೆ ಮಾಡಲು ಕೆಲಸವಿಲ್ಲ

ಗಾಯತ್ರಿ ಮಾಲಿಪಾಟೀಲ್

ಕುಷ್ಟಗಿ: ವಿರೋಧ ಪಕ್ಷದ ನಾಯಕನ ಜವಾಬ್ದಾರಿ ಮರೆತು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳ ಟೈಮ್ ಟೇಬಲ್ ಚೆಕ್ ಮಾಡುವ ಕಾರ್ಯದಲ್ಲಿ ನಿರತರಾದ ಆರ್.ಅಶೋಕ್‌ಗೆ ಮಾಡಲು ಕೆಲಸವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಖಾಸಗಿ ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ಬಡವರು ನೆಮ್ಮದಿಯಿಂದ ಜೀವಿಸುತ್ತಿದ್ದಾರೆ. ಬಿಜೆಪಿಗರಿಗೆ ಇದನ್ನು ಸಹಿಸಲಾಗದೆ ಟೀಕೆ ಮಾಡುವುದರಲ್ಲಿ ಕಾಲ ಕಳೆಯುತ್ತಿದ್ದಾರೆ. ಬಿಜೆಪಿಗರು ಸಿಎಂ ಬದಲಾವಣೆಯ ಕನಸು ಕಾಣುತ್ತಿದ್ದಾರೆ. ಪಕ್ಷ ಸಂಘಟನೆ, ರಾಜ್ಯಾಧ್ಯಕ್ಷರು ಇತರೆ ವಿಚಾರಗಳ ಕುರಿತು ತಮ್ಮಲ್ಲಿಯೇ ಭಿನ್ನಾಭಿಪ್ರಾಯಗಳಿವೆ. ಅವೆಲ್ಲ ಬಿಟ್ಟು ಬೇರೊಬ್ಬರ ಬಗ್ಗೆ ಯೋಚಿಸಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದರು.