ಮಾಗಡಿ: ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಉಪಚುನಾವಣೆಗಳ ನಡುವೆ ಪ್ರತಿ ಪಕ್ಷದ ನಾಯಕ ಆರ್.ಆಶೋಕ್ ಮುಖಂಡರ ಹುಟ್ಟುಹಬ್ಬದಲ್ಲಿ ಭಾಗವಹಿಸಿ ಶುಭಕೋರಿ ಪುನೀತ್ ರಾಜ್ ಕುಮಾರ್ ಸಿನಿಮಾ ಹಾಡನ್ನು ಹಾಡಿ ರಂಜಿಸಿದರು.
ತಾಲೂಕಿನ ದೊಡ್ಡಯ್ಯನ ಪಾಳ್ಯದ ಬಿಜೆಪಿ ರಾಜ್ಯ ಒಬಿಸಿ ಕೋಶಾಧ್ಯಕ್ಷ ಎ.ಎಚ್.ಬಸವರಾಜು ಅವರ ಬನಶಂಕರಿ ಾರಂ ಹೌಸ್‌ಗೆ ಚನ್ನಪಟ್ಟಣದಿಂದ ಗುರುವಾರ ರಾತ್ರಿ 7.30ಕ್ಕೆ ಆಗಮಿಸಿದ್ದ ಆರ್.ಆಶೋಕ್ ಅವರು, ಬಿಜೆಪಿಯ ಐವರು ಮುಖಂಡರ ಹುಟ್ಟುಹಬ್ಬದಲ್ಲಿ ಪಾಲ್ಗೊಂಡಿದ್ದರು. 10 ಗಂಟೆಯವರೆಗೆ ಅಲ್ಲಿಯೇ ಕಾಲಕಳೆದು ತೆರಳಿದರು.
ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ವಿಧಾನಸಬಾ ಉಪಚುನಾವಣೆಗಳು ವಿರೋಧ ಪಕ್ಷದ ನಾಯಕ ಆರ್.ಆಶೋಕ್ ಅವರಿಗೆ ಪ್ರತಿಷ್ಠೆಯ ಕಣವಾಗಿದೆ. ಅದರಂತೆ ಚುನಾವಣೆಯ ಅಖಾಡ ಸಾಕಷ್ಟು ರಂಗುಪಡೆದಿದ್ದು, ಈ ಚುನಾವಣೆಯ ಪ್ರಚಾರದ ನಡುವೆಯೂ ಮುಖಂಡರ ಹುಟ್ಟುಹಬ್ಬಕ್ಕೆ ಭಾಗವಹಿಸಿರುವುದರಿಂದ ಮುಖಂಡರಿಗೆ, ಕಾರ್ಯಕರ್ತರಿಗೆ ಮತ್ತಷ್ಟು ಶಕ್ತಿ ತುಂಬಿದಂತಾಗಿದೆ.
ಆರ್.ಆಶೋಕ್ ಅವರನ್ನು ಬಿಜೆಪಿ ರಾಜ್ಯ ಒಬಿಸಿ ಕೋಶಾಧ್ಯಕ್ಷ ಎ.ಎಚ್.ಬಸವರಾಜು ಅದ್ದೂರಿಯಾಗಿ ಸ್ವಾಗತಿಸಿದರು. ‘ಒಳಿತು ಮಾಡು ಮನುಷ’ ಹಾಗೂ ‘ಗೊಂಬೆ ಹೇಳುತೈತೆ’ ಹಾಡನ್ನು ಅಶೋಕ್ ಹಾಡಿ ರಂಜಿಸಿದರು.
ಬೆಂಗಳೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಲಕ್ಷ್ಮೀಕಾಂತ್, ಆಂಜನಪ್ಪ, ದಾಮೋದರ ನಾಯ್ಡು, ಮುಖಂಡ ಬೋರಗೌಡ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ, ಹುಲುವಾಡಿ ದೇವರಾಜು, ತಾಲೂಕು ಮಾಜಿ ಅದ್ಯಕ್ಷ ಬಿ.ಎಂ.ಧನಂಜಯ, ಮಂಡ್ಯ ಚಿದಾನಂದ್, ಕೂಡ್ಲಗಿ ಲೋಕೇಶ್ ನಾಯಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಆರ್.ರಾಘವೇಂದ್ರ, ಪುರಸಭಾ ಸದಸ್ಯೆ ಭಾಗ್ಯಮ್ಮ, ಶಾಂತಕುಮಾರು, ಆನಂದ್, ಕೆಂಚನಹಳ್ಳಿ ಕಿರಣ್ ಇದ್ದರು.