ಜಿಲ್ಲೆ

ಮುರಕಟ್ಟಿಯಲ್ಲಿ ಮುಂದುವರಿದ ಜೆಜೆಎಂ ಗದ್ದಲ; ಕಾಮಗಾರಿ ಪರಿಶೀಲನೆಗೆ ತೆರಳಿದ್ದ ಅಧಿಕಾರಿಗಳಿಗೆ ಅಡ್ಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ ತಾಲೂಕಿನ ಮುರಕಟ್ಟಿ ಗ್ರಾಮದಲ್ಲಿ ಜಲಜೀವನ್ ಮಿಷನ್ ಕಾಮಗಾರಿ ಗದ್ದಲ ಮತ್ತೆ ಮುಂದುವರಿದಿದೆ. ಸರ್ಕಾರದ ನಿಯಮಾವಳಿಯನ್ನು ಗಾಳಿಗೆ ತೂರಿ ಕಾಮಗಾರಿ ಮಾಡಲಾಗಿದೆ ಎಂದು ಸಲ್ಲಿಕೆಯಾಗಿದ್ದ ದೂರಿಗೆ ಸಂಬAಽಸಿ ಮಂಗಳವಾರ ಪರಿಶೀಲನೆಗೆ ತೆರಳಿದ್ದ ಅಧಿಕಾರಿಗಳಿಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. * ಏನಿದು ಪ್ರಕರಣ...?: ಮುರಕಟ್ಟಿ ಮತ್ತು ಮಲ್ಲೂರ ಗ್ರಾಮ ಸೇರಿ 90 ಲಕ್ಷ ರೂಪಾಯಿ ವೆಚ್ಚದ ಜೆಜೆಎಂ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ, ಇಲಾಖೆಯ ಅಽಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಕಾಮಗಾರಿ ಕಳಪೆ ಮಾಡಿದ್ದಾರೆ. ಅಂದಾಜು ಪತ್ರಿಕೆಯಲ್ಲಿನ ಷರತ್ತುಗಳನ್ನು ಉಲ್ಲಂಘಿಸಲಾಗಿದೆ. ಕಾಮಗಾರಿಗೆ ಗುಣಮಟ್ಟದ ಸಲಕರಣೆಗಳನ್ನು ಬಳಸಿಲ್ಲ. ಈ ಕುರಿತು ಆಗಸ್ಟ್ನಲ್ಲೇ ಪಿಡಿಒಗೆ ತಕರಾರು ಅರ್ಜಿ ಕೊಟ್ಟಿದ್ದರೂ ಸ್ಪಂದಿಸಿಲ್ಲ. ಅಽಕಾರಿಗಳು ಗುತ್ತಿಗೆದಾರರ ಒತ್ತಡಕ್ಕೆ ಮಣಿದು ನ. 7ರಂದು ಹಸ್ತಾಂತರ ಪತ್ರ ನೀಡಿದ್ದಾರೆ. ಈ ಕುರಿತು ಸ್ಥಳ ಪರಿಶೀಲನೆ ಮಾಡಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಅಲ್ಲಿಯವರೆಗೆ ಬಿಲ್ ತಡೆಹಿಡಿಯಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ ಘಾಟಿನ ಜಿ.ಪಂ. ಸಿಇಒ ಸ್ವರೂಪ ಟಿ.ಕೆ. ಅವರಿಗೆ ದೂರು ನೀಡಿದ್ದರು. ಜಿ.ಪಂ. ಸಿಇಒ ನಿರ್ದೇಶನದಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಜಗದೀಶ ಪಾಟೀಲ, ಎಇಇ ಗ್ರಾಮಕ್ಕೆ ಭೇಟಿ ನೀಡಿದ್ದರು. ಸ್ಥಳ ಪರಿಶೀಲನೆ ಮಾಡುವಾಗ ಗ್ರಾಮದಲ್ಲಿ ಅಳವಡಿಸಿರುವ ಪೈಪ್‌ಲೈನ್ ಅಗೆಯಬೇಕು ಎಂದು ದೂರುದಾರ ನಾಗರಾಜ ಘಾಟಿನ ಹಾಗೂ ಗ್ರಾಮಸ್ಥರು ಒತ್ತಾಯಿಸಿದರು. ಪೈಪ್‌ಲೈನ್ ಅಳವಡಿಕೆಯಲ್ಲಿ ನಿಯಮಾವಳಿ ಉಲ್ಲಂಘಿಸಲಾಗಿದೆ ಎಂದು ಅಽಕಾರಿಗಳಿಗೆ ಮಾಹಿತಿ ನೀಡಿದರು. ಕೆಲವೆಡೆ ಪೈಪ್‌ಲೈನ್ ಅಗೆದು ಪರಿಶೀಲನೆ ಮಾಡಲಾಯಿತು. ಮತ್ತೆ ಕೆಲವೆಡೆ ಪೈಪ್‌ಲೈನ್ ಅಗೆಯಲು ಅದೇ ಗ್ರಾಮದ ಕೆಲ ರಾಜಕೀಯ ಮುಖಂಡರು ಅಡ್ಡಿಪಡಿಸಿದರು. ಗ್ರಾಮದ ಕೆಲ ಮನೆಗಳಿಗೆ ಇನ್ನೂ ನಳ ಸಂಪರ್ಕ ಕಲ್ಪಿಸಿಲ್ಲ. ಆದರೂ ಕಾಮಗಾರಿ ಮುಗಿದಿದೆ ಎನ್ನುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದರು. ತಮ್ಮ ಮನೆ ಎದುರು ಕೇವಲ 8- 10 ಇಂಚು ಆಳಕ್ಕೆ ಪೈಪ್‌ಲೈನ್ ಹಾಕಲಾಗಿದೆ ಎಂದು ನಿವಾಸಿಗಳು ಅಽಕಾರಿಗಳಿಗೆ ಮಾಹಿತಿ ನೀಡಿದರು. * ಕೋರ್ಟ್ ಅನುಮತಿ ತರುವಂತೆ ಅವಾಜ್: ಪೈಪ್‌ಲೈನ್ ಅಗೆಯಲು ಮುಂದಾದ ಅಽಕಾರಿಗಳಿಗೆ ಗ್ರಾಮದ ಕೆಲವರು ಅಡ್ಡಿಪಡಿಸಿದರು. ನ್ಯಾಯಾಲಯದ ಅನುಮತಿ ತಂದು ನೆಲ ಅಗೆಯಿರಿ ಎಂದು ಅಽಕಾರಿಗಳಿಗೇ ಅವಾಜ್ ಹಾಕಿದರು. ಇದರಿಂದ ಎರಡು ಗುಂಪುಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು. ಜಗದೀಶ ಪಾಟೀಲ ಮಧ್ಯಪ್ರವೇಶಿಸಿ ಎರಡೂ ಕಡೆಯವರನ್ನು ಸಮಾಧಾನಪಡಿಸಿದರು. ಗ್ರಾಮದಲ್ಲಿ ಜೆಜೆಎಂ ಗದ್ದಲ ಮುಂದುವರಿದು ಪರಿಶೀಲನೆಗೆ ಅಽಕಾರಿಗಳೇ ತೆರಳಿದರೂ ಗುತ್ತಿಗೆದಾರ ಸ್ಥಳಕ್ಕೆ ಬಂದಿರಲಿಲ್ಲ. ಇದು ಕೂಡ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿತ್ತು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಽಕಾರಿಗೆ ನೀಡಿದ ದೂರಿನ ಅನ್ವಯ ಅಧಿಕಾರಿಗಳು ಜೆಜೆಎಂ ಕಾಮಗಾರಿ ಪರಿಶೀಲನೆಗೆ ಬಂದಿದ್ದರು. ಆದರೆ, ಕೆಲವರು ಪೈಪ್‌ಲೈನ್ ಅಗೆಯಲು ಅಡ್ಡಿಪಡಿಸಿದರು. ನ್ಯಾಯಾಲಯದ ಅನುಮತಿ ತಂದು ನೆಲ ಅಗೆಯಿರಿ ಎಂದು ಅಧಿಕಾರಿಗಳಿಗೇ ಹೇಳಿದ್ದಾರೆ. ಮೇಲಽಕಾರಿಗಳು ಇತ್ತ ಗಮನ ಹರಿಸಬೇಕು. - ನಾಗರಾಜ ಘಾಟಿನ, ಮುರಕಟ್ಟಿ ಗ್ರಾಮ ಪಂಚಾಯಿತಿ ಸದಸ್ಯ