ಜಿಲ್ಲೆ

ಮಕ್ಕಳ ಅಭಿವೃದ್ಧಿಯೇ ಶಿಕ್ಷಣ ಇಲಾಖೆಯ ಉದ್ದೇಶ

ಲಕ್ಷ್ಮೇಶ್ವರ: ಮಕ್ಕಳ ಸವಾರ್ಂಗೀಣ ಅಭಿವೃದ್ಧಿಯೇ ಶಾಲಾ ಶಿಕ್ಷಣ ಇಲಾಖೆಯ ಪ್ರಮುಖ ಉದ್ದೇಶವಾಗಿದೆ. ಶಿಕ್ಷಕರು ಪಠ್ಯ ಶಿಕ್ಷಣದ ಜತೆಗೆ ಮಕ್ಕಳಲ್ಲಿನ ಆಸಕ್ತಿ ಗಮನಿಸಿ ಕಲೆ, ಸಾಹಿತ್ಯ,ಸಂಗೀತ, ನೃತ್ಯ, ಚಿತ್ರಕಲೆ, ಕ್ರೀಡಾಮನೋಭಾವನೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಬಿಇಒ ಜಿ.ಎಂ ಮುಂದಿನಮನಿ ಹೇಳಿದರು.

ತಾಲೂಕಿನ ಸೂರಣಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಗಂಡು ಹಾಗೂ ಹೆಣ್ಣುಮಕ್ಕಳ ಶಾಲೆಗಳ ಶಾಲಾ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಶಿರಹಟ್ಟಿ-ಲಕ್ಷ್ಮೇಶ್ವರ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಾಸಕ ಡಾ.ಚಂದ್ರು ಲಮಾಣಿ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಗುರುತಿಸಿ ಅವರ ಸರ್ವತೋಮುಖ ಬೆಳವಣಿಗೆಗೆ ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಯಾಗಿದೆ ಎಂದರು.

ಗ್ರಾಪಂ ಅಧ್ಯಕ್ಷೆ ಚನ್ನಮ್ಮ ಕಳ್ಳಿಹಾಳ, ಈಶ್ವರ ಮೆಡ್ಲೇರಿ ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷೆ ಯಲ್ಲವ್ವ ಚಕ್ರಸಾಲಿ, ಸದಸ್ಯರಾದ ಪ್ರವೀಣ ಸೂರಣಗಿ, ತುಕ್ಕಪ್ಪ ಕಾರಬಾರಿ, ಸುಮಂಗಲಾ ಮೆಲ್ಮುರಿ, ಸುಶಿಲಾ ಲಮಾಣಿ, ಸಮನ್ವಯಾಧಿಕಾರಿ ಬಿ.ಎಸ್.ಭಜಂತ್ರಿ, ಎಚ್.ಎಸ್. ರಾಮನಗೌಡ್ರ, ಎಂ.ಬಿ. ಹೊಸಮನಿ, ಎಸ್.ಕೆ. ಪಾಟೀಲ, ಎ.ಎನ್. ಮುಳಗುಂದ, ಡಿ.ಎಚ್. ಪಾಟೀಲ, ಎಂ.ಎ ನದಾಫ, ಎಲ್.ಎಸ್. ಅರಳಿಹಳ್ಳಿ, ಎಫ್.ಎಸ್. ತಳವಾರ, ಸೋಮಶೇಖರ ಪಾಟೀಲ, ಅಶ್ವಿನಿ ಕರ್ಜಕಣ್ಣವರ, ಎಸ್.ವಿ ಕಾಕೋಳ, ಅನ್ನಪೂರ್ಣ ಗುಡಗೇರಿ ಇದ್ದರು. ಕೆಜಿಎಸ್ ಶಾಲೆಯ ಮುಖ್ಯ ಶಿಕ್ಷಕ ಎಫ್.ಎನ್ ಗೊಣೆಪ್ಪನವರ, ಸಿಆರ್‌ಪಿ ಎಲ್.ಎಫ್.ಮಠದ, ಎಂ.ಎಸ್ ಚಾಕಲಬ್ಬಿ ಇತರರಿದ್ದರು.