ಹುನಗುಂದ ಬಿಇಒ ಕಚೇರಿಯಲ್ಲಿ ಶಿಕ್ಷಣ ಲೋಕ್ ಅದಾಲತ್ ಕಾರ್ಯಕ್ರಮದಲ್ಲಿ ಬಿಇಒ ಜಾಸ್ಮಿನ್ ಕಿಲ್ಲೇದಾರ ಮನವಿ ಸ್ವೀಕರಿಸಿದರು. ಶಿಕ್ಷಕರ ಸಂಘದ ಅಧ್ಯಕ್ಷ ಸಂಗಮೇಶ ಪಾಟೀಲ, ರಂಗನಾಥ ಮಾಸರಡ್ಡಿ ಇದ್ದರು. 
ಜಿಲ್ಲೆ

ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದೇ ಉದ್ದೇಶ

ದತ್ತಾತ್ರೇಯ ಪಿ ಕುಲಕರ್ಣಿ

ಹುನಗುಂದ: ಕಾಲಮಿತಿ ಬಡ್ತಿ ಬಾಕಿ ವೇತನ, ಎಚ್‌ಆರ್‌ಎಂಎಸ್‌ದಲ್ಲಿ ಹೆಸರು ತಿದ್ದುಪಡಿ ಸೇರಿ ತಾಲೂಕು ಶಿಕ್ಷಕರ ಹಲವು ಸಮಸ್ಯೆಗಳನ್ನು ಚರ್ಚಿಸಿ ಸ್ಥಳದಲ್ಲೇ ಕೆಲವು ಬಗೆಹರಿಸಲಾಯಿತೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮಿನ್ ಕಿಲ್ಲೇದಾರ ಹೇಳಿದರು.

ಪಟ್ಟಣದ ಬಿಇಒ ಕಚೇರಿಯಲ್ಲಿ ಬುಧವಾರ ಶಿಕ್ಷಣ ಇಲಾಖೆ ಕಮೀಷನರ್ ಆದೇಶಿದಂತೆ ಶಾಲಾ ಶಿಕ್ಷಣ ಇಲಾಖೆ, ಜಿಪಂ, ಬಿಇಒ ಮತ್ತು ಬಿಆರ್‌ಸಿ ಸಹಯೋಗದಲ್ಲಿ ನಡೆಸಿದ 2023-24ರ ತಾಲೂಕುಮಟ್ಟದ ಶಿಕ್ಷಣ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಶಿಕ್ಷಕರ ಮನವಿ ಸ್ವೀಕರಿಸಿ ಅವರು ಮಾತನಾಡಿದರು.

ಶಿಕ್ಷಕರು ತಮ್ಮ ಸಮಸ್ಯೆಗಳನ್ನು ಇತ್ಯರ್ಥಕ್ಕೆ ಅರ್ಜಿ ಸಲ್ಲಿಸಿ ಪರಿಹಾರ ಕಾಣುವುದೇ ಈ ಅದಾಲತ್ ಉದ್ದೇಶ ಎಂದರು. ಹುನಗುಂದ ಶಿಕ್ಷಕ ಸಂಘದ ಅಧ್ಯಕ್ಷ ಸಂಗಮೇಶ ಪಾಟೀಲ, ಇಲಕಲ್ಲ ಅಧ್ಯಕ್ಷ ರಂಗನಾಥ ಮಾಸರಡ್ಡಿ, ಪರಶುರಾಮ ಪಮ್ಮಾರ, ಮುತ್ತು ಬೀಳಗಿ, ರಮೇಶ ಕೊಳಗೇರಿ, ರಮೇಶ ಮಿಣಜಗಿ, ಮಹಾಗುಂಡಪ್ಪ ಹನಮಸಾಗರ ಎಂ.ಟಿ. ನಡುವಿನಮನಿ, ಅಂದಾನಯ್ಯ ವಸದ, ಎಸ್.ಜಿ. ಹುದ್ದಾರ, ವೈ.ಎಂ. ಲೈನ್ ಇತರರಿದ್ದರು.