ಕೂಡ್ಲಿಗಿ: ಜನಸಾಮನ್ಯರಲ್ಲಿ ವಿಜ್ಞಾನದ ಬಗ್ಗೆ ಅರಿವು ಮೂಡಿಸುವುದೇ ವಿಜ್ಞಾನ ದಿನ ಆಚರಣೆಯ ಉದ್ದೇಶವಾಗಿದೆ ಎಂದು ಗೆದ್ದಲಗಟ್ಟೆ ಸರ್ಕಾರಿ ಪ್ರೌಢಶಾಲೆ ಸಹ ಶಿಕ್ಷಕ ಟಿ.ಎಚ್.ಎಂ.ಶೇಖರಯ್ಯ ಹೇಳಿದರು.
ಇದನ್ನೂ ಓದಿ:ರಾಷ್ಟ್ರೀಯ ವಿಜ್ಞಾನ ದಿನಾಚರಣೆ
ತಾಲೂಕಿನ ಗೆದ್ದಲಗಟ್ಟೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಜ್ಞಾನ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ ಸಿ.ವಿ.ರಾಮನ್ ಅವರ ರಾಮನ್ ಪರಿಣಾಮ ಅವಿಷ್ಕಾರದ ಸ್ಮರಣಾರ್ಥ ರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲಾಗುತ್ತದೆ. ವಿಜ್ಞಾನ ವಿಭಾಗದಿಂದ ನೊಬೆಲ್ ಪ್ರಶಸ್ತಿ ಪಡೆದ ಏಷ್ಯಾದ ಮೊದಲ ವಿಜ್ಞಾನಿ ಎಂಬ ಖ್ಯಾತಿ ರಾಮನ್ ಅವರಿಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಚಲಿತ ವಿದ್ಯಮಾನಗಳ ಬಗ್ಗೆ ಅರಿವು ಮೂಡಿಸುವುದು, ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವನ್ನು ಮೂಡಿಸುವುದು ಆಚರಣೆಯ ಉದ್ದೇಶ ಎಂದರು.
ವಿಧ್ಯಾರ್ಥಿಗಳು ಹಲವು ವೈಜ್ಞಾನಿಕ ವಿಚಾರಗಳನ್ನು ಚಿತ್ರಗಳ ಮೂಲಕ ವಿವರಿಸಿದರು. ಸಮತೋಲನ ಆಹಾರದ ಕುರಿತು ವಿಧ್ಯಾರ್ಥಿಗಳು ವಿಷಯ ಮಂಡಿಸಿದರು.
ಪ್ರಭಾರಿ ಮುಖ್ಯ ಶಿಕ್ಷಕ ರಾಜಪ್ಪ ದೂಪದಹಳ್ಳಿ, ಪ್ರಭಾರಿ ಮುಖ್ಯ ಶಿಕ್ಷಕ ರಾಜಪ್ಪ ದೂಪದಹಳ್ಳಿ, ಶಿಕ್ಷಕರಾದ ದೇವಸುತ ಕೃಷ್ಣ ನಾಯ್ಕ, ಸಿ.ಆರ್.ಹನುಮಂತ ರಾಜ್, ಜಿ.ಮಂಜುನಾಥ, ಜಿ.ವಿ.ನೇಸರ, ತ್ರಿವೇಣಿ ಇತರರಿದ್ದರು.