ಸಿದ್ದಾಪುರ: ಸ್ಥಳೀಯ ಧರ್ಮಶ್ರೀ ಫೌಂಡೇಷನ್ ವತಿಯಿಂದ ಸತ್ಯಾಗ್ರಹಿ ತಿಮ್ಮಯ್ಯ ಹೆಗಡೆ ಹೂವಿನಮನೆ ಅವರು ಪಾಲ್ಗೊಂಡ ಕರನಿರಾಕರಣೆ ಚಳವಳಿ ನೆನಪಿಸುವ ‘ಹಾವಿನ ಹಂದರದಿಂದ ಹೂವ ತಂದವರು’ ಕಾದಂಬರಿ ಲೋಕಾರ್ಪಣೆ ಕಾರ್ಯಕ್ರಮ ಪಟ್ಟಣದ ಶಂಕರಮಠದ ಸಭಾಂಗಣದಲ್ಲಿ ಅ. 3ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ ಎಂದು ಕೃತಿಕಾರ ಶ್ರೀಪಾದ ಹೆಗಡೆ ಮಗೇಗಾರು ತಿಳಿಸಿದರು.
ಪಟ್ಟಣದ ಶಂಕರಮಠದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾದಂಬರಿಯು ಸ್ವಾತಂತ್ರ್ಯ ಹೋರಾಟದ ಕರನಿರಾಕರಣೆ ಸಂದರ್ಭದ ಚಿತ್ರಣ ಬಿಂಬಿಸುವುದರೊಂದಿಗೆ ಅಂದು ಕರನಿರಾಕರಣೆಯ ವೇಳೆ ಹೋರಾಟ ಮಾಡಿದವರ ಕುರಿತು ಇರುವುದರೊಂದಿಗೆ ವಿಶೇಷವಾಗಿ ಸಿದ್ದಾಪುರ ತಾಲೂಕಿನ ಭಾಷೆಯ ಮೂಲಕ ಕಾದಂಬರಿ ರಚಿಸಲಾಗಿದೆ ಎಂದರು.
ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ ಕಾದಂಬರಿ ಲೋಕಾರ್ಪಣೆ ಮಾಡುವರು. ಗೌರವಾಧ್ಯಕ್ಷ ರಾಮಮೋಹನ ಆರ್. ಹೆಗಡೆ ಅಧ್ಯಕ್ಷತೆ ವಹಿಸುವರು. ಖ್ಯಾತ ಸಾಹಿತಿ ಶಾ.ಮಂ. ಕೃಷ್ಣರಾವ್, ಸಿದ್ದಾಪುರ ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ, ವಿಮರ್ಶಕ ಸುಬ್ರಾಯ ಮತ್ತಿಹಳ್ಳಿ, ಕೃತಿಕಾರ ಶ್ರೀಪಾದ ಹೆಗಡೆ ಮಗೇಗಾರು ಉಪಸ್ಥಿತರಿರುವರು ಎಂದರು. ದಿವಾಕರ ಹೆಗಡೆ ಕೆರೆಹೊಂಡ ಪುಸ್ತಕ ಪರಿಚಯಿಸುವರು. ಇದೇ ಸಂದರ್ಭದಲ್ಲಿ ಕರನಿರಾಕರಣೆ ಚಳವಳಿಯಲ್ಲಿ ಭಾಗವಹಿಸಿದ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದವರನ್ನು ಗೌರವಿಸಲಾಗುವುದು ಎಂದು ತಿಳಿಸಿದರು.
ಧರ್ಮಶ್ರೀ ಫೌಂಡೇಷನ್ ಕಾರ್ಯಾಧ್ಯಕ್ಷ ಡಾ.ರವಿ ಹೆಗಡೆ ಹೂವಿನಮನೆ ಮಾತನಾಡಿ, ಈ ಕಾದಂಬರಿ ಸ್ವಾತಂತ್ರ್ಯ ಹೋರಾಟದ ಕುರಿತು ಮಾಹಿತಿ ನೀಡುವುದಾಗಿದೆ. ಸ್ವಾತಂತ್ರ್ಯ ಹೋರಾಟದ ಕುರಿತು ಶಾಲಾ ಪಠ್ಯಪುಸ್ತಕದಲ್ಲಿ ಬರುವಂತಾಗಬೇಕು ಎಂದರು.
ವಿಜಯ ಹೆಗಡೆ ದೊಡ್ಮನೆ, ಪರಮೆಶ್ವರಯ್ಯ ಕಾನಳ್ಳಿಮಠ ಸುದ್ದಿಗೋಷ್ಠಿಯಲ್ಲಿದ್ದರು.