ಬೆಂಗಳೂರು: ಸತ್ವ ಲಾರೆಲ್ ಹೈಟ್ಸ್ ಅಪಾರ್ಟ್‌ಮೆಂಟ್ ನಿರ್ಮಾಣ ಮಾಡಿರುವ ನೂತನ ಗಣೇಶ ಮಂದಿರವು ಇತ್ತೀಚೆಗೆ ಉದ್ಘಾಟನೆಯಾಯಿತು.
ಹೆಸರಘಟ್ಟ ಮುಖ್ಯರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ನ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಗಣಪತಿ ದೇವಾಲಯದ ಉದ್ಘಾಟನೆ ಹಾಗೂ ವಿಗ್ರಹದ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಅಪಾರ್ಟ್‌ಮೆಂಟಿನ ಎಲ್ಲಾ ನಿವಾಸಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನೆರವೇರಿಸಿದರು.
48 ದಿನಗಳ ಕಾಲ ಜಲಾಧಿ ವಾಸದಲ್ಲಿದ್ದ ನೂತನ ಗಣೇಶ ಮೂರ್ತಿಯನ್ನು ನೀರಿನಿಂದ ತೆಗೆದು ಉತ್ಸವದ ಮೂಲಕ ದೇವಾಲಯಕ್ಕೆ ತರಲಾಯಿತು. ತದ ನಂತರ ಹೋಮ ಹವನಾದಿಗಳೊಂದಿಗೆ ಗೋಪೂಜೆಯ ಸಹಿತ ಪ್ರತಿಷ್ಠಾಪನಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರತಿಯೊಬ್ಬರಿಗೂ ಪ್ರಸಾದ ವಿನಿಯೋಗ ,ಅನ್ನಸಂತರ್ಪಣೆ ಏರ್ಪಡಿಸಲಾಗಿದ್ದು, ನಂತರ ಸಂಗೀತ ಸೇವೆ ನೆರವೇರಿತು.
ಈ ಎಲ್ಲಾ ಕಾರ್ಯಕ್ರಮಗಳು ಲಾರೆಲ್ ಹೈಟ್ಸ್ ಗಣೇಶ ಸೇವಾ ಸಮಿತಿಯ ಅಧ್ಯಕ್ಷ ಕಿರಣ್ ಕುಮಾರ್, ಲಾರೆಲ್ ಹೈಟ್ಸ್ ಅಸೋಸಿಯೇಷನ್ ಅಧ್ಯಕ್ಷ ವೀರೇಶ್ ಗುಂಡಗಟ್ಟಿ, ಕಾರ್ಯದರ್ಶಿ ಮಹೇಶ್ ಸಿ ಸಲಬನ್ನವರ್ ಮತ್ತಿತರರ ನೇತೃತ್ವದಲ್ಲಿ ನೆರವೇರಿದವು.