ಹುಬ್ಬಳ್ಳಿ : ಓರಿಜಿನಲ್ ಕಾಂಗ್ರೆಸ್ನವರು ಎಲ್ಲ ಸಭೆ, ಸಮಾರಂಭಗಳಲ್ಲಿ ರಾಷ್ಟ್ರೀಯ ಗೀತೆ ವಂದೇ ಮಾತರಂ ಹಾಡುತ್ತಿದ್ದರು. ಆದರೆ, ನೆಹರು ಆಡಳಿತದಲ್ಲಿ ಇದನ್ನು ನಿಲ್ಲಿಸಲಾಯಿತು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಬಂಗಾಳಿ ಕವಿ ದಿ. ಬಂಕಿಮಚಂದ್ರ ಚಟರ್ಜಿ ಅವರು ರಚಿಸಿರುವ ವಂದೇ ಮಾತರಂ ರಾಷ್ಟ್ರೀಯ ಗೀತೆ 150 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ಅರವಿಂದ ನಗರದಲ್ಲಿರುವ ಮಹಾನಗರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರದಂದು ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಗತ್ಸಿಂಗ್, ಸುಭಾಸಚಂದ್ರ ಬೋಸ್ ಹಾಗೂ ಇನ್ನಿತರ ಸ್ವಾತಂತ್ರ್ಯ ಹೋರಾಟಗಾರರ ಹೋರಾಟಕ್ಕೆ ವಂದೇ ಮಾತರಂ ಕಿಚ್ಚು ಹಚ್ಚುತ್ತಿತ್ತು. ಬ್ರಿಟಿಷ್ರಿಗೆ ಇದರಿಂದ ಭಯ ಉಂಟಾಗುತ್ತಿತ್ತು.
ವಿಭಜನೆಗೊಂಡ ಬಂಗಾಲ ಜೋಡಣೆಗೆ ವಂದೇ ಮಾತರಂ ಹಾಡು ಪ್ರೇರಣೆಯಾಗಿತ್ತು ಎಂದರು.
ಶಾಸಕ ಮಹೇಶ ಟೆಂಗಿನಕಾಯಿ, ಶಿವು ಮೆಣಸಿನಕಾಯಿ, ವಸಂತ ನಾಡಜೋಶಿ, ಬಸವರಾಜ ಗರಗ, ಜಗದೀಶ ಹಿರೇಮನಿ, ಅಶೋಕ ಕಾಟವೆ, ಲಿಂಗರಾಜ ಪಾಟೀಲ, ಮಹೇಂದ್ರ ಕೌತಾಳ, ರಾಜು ಕಾಳೆ, ಮಂಜುನಾಥ ಕಾಟಕರ, ಸತೀಶ ಶೇಜವಾಡಕರ, ಪ್ರಕಾಶ ಕ್ಯಾರಕಟ್ಟಿ, ಸೀಮಾ ಲದವಾ, ರಾಜೇಶ್ವರಿ ಸಾಲಗಟ್ಟಿ, ಪೂರ್ಣಿಮಾ ಶಿಂಧೆ, ಜಂಗಮಗೌಡ್ರ, ಸಂಗೀತಾ ಬದ್ದಿ, ಲೀಲಾವತಿ ಪಾಸ್ತೆ, ಅಕ್ಕಮ್ಮ ಹೆಗಡೆ, ರೂಪಾ ಶೆಟ್ಟಿ, ದುರ್ಗಮ್ಮ ಬಿಜವಾಡ, ವೀಣಾ ಬರದ್ವಾಡ, ಚಂದ್ರಿಕಾ ಮೇಸ್ತ್ರಿ, ಮೇನಕಾ ಹುರಳಿ ಹಾಗೂ ಇತರರು ಇದ್ದರು.