ಜಿಲ್ಲೆ

ರಾಷ್ಟ್ರೀಯ ಹೆದ್ದಾರಿಯೇ ಒತ್ತುವರಿ!

ಶ್ರೀನಿವಾಸಪುರ:  ಮೂರು ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ&69ರಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಶ್ರೀನಿವಾಸಪುರದಲ್ಲಿ ಹಾದು ಹೋಗಿರುವ ರಸ್ತೆ ಚಿಂತಾಮಣಿ ವೃತ್ತದಿಂದ ರೈಲ್ವೆ ಸೇತುವೆ ಮಾರ್ಗವಾಗಿ ಎಪಿಎಂಸಿ ಮಾರುಕಟ್ಟೆವರಿಗೂ ಸಾಗಿದ್ದು, ರಸ್ತೆಯ ಎರಡೂ ಬದಿಯಲ್ಲಿ ದಾರಿ ಉದ್ದಕ್ಕೂ ವಾಹನ ದುರಸ್ತಿ ಗ್ಯಾರೇಜ್​ಗಳು ಸೇರಿ ಇನ್ನೀತರೆ ಅಂಗಡಿ, ಮುಂಗಟ್ಟುಗಳು ಹೆದ್ದಾರಿಯನ್ನೇ ಒತ್ತುವರಿ ಮಾಡಿಕೊಂಡಿದ್ದು, ಸುಗಮ ಸಂಚಾರಕ್ಕೆ ಕಂಟಕ ತಂದಿಟ್ಟಿವೆ.

ಪಟ್ಟಣದಲ್ಲಿ ಹಾದು ಹೋಗಿರುವ ರಸ್ತೆಯಲ್ಲಿ ಸದಾ ವಾಹನಗಳ ದಟ್ಟಣೆಯಿಂದ ಕುಡಿದ್ದು, ವಾಹನ ರೀಪೇರಿ ಅಂಗಡಿಗಳು ಫುಟ್​ಪಾತ್​ ರಸ್ತೆ ಅತಿಕ್ರಮಣಮಾಡಿಕೊಂಡಿವೆ. ಇದರಿಂದ ಪಾದಚಾರಿ ಮಾರ್ಗವೇ ಇಲ್ಲದಂತಾಗಿದ್ದು, ದಾರಿ ಉದ್ದಕ್ಕೂ ಗ್ಯಾರೇಜ್​ಮಯವಾಗಿದೆ. ಇದರಿಂದ ರಿಪೇರಿಗೆ ಬರುವ ಕ್ಯಾಂಟರ್​, ಟಾಟಾ ಸುಮೋ, ಟಾಟಾ ಲಗೇಜ್​ ವಾಹನಗಳ ರಿಪೇರಿ ಮಾಡಲು ುಟ್​ಪಾತ್​ ಹಾಗೂ ರಸ್ತೆಯ ಕೆಳ ಭಾಗದ ಜಾಗವನ್ನು ಬಳಸಿಕೊಂಡು, ಕೆಟ್ಟ ವಾಹನಗಳನ್ನು ದಿನಗಟ್ಟಲೆ ನಿಲ್ಲಿಸಿಕೊಂಡಿರುತ್ತಾರೆ. ಫುಟ್​ಪಾತ್​ ಹಾಗೂ ರಸ್ತೆ ಅತಿಕ್ರಮಣ ಕಾರಣ ಸಂಜೆ ಜನದಟ್ಟಣೆ, ವಾಹನ ದಟ್ಟಣೆಯಿಂದ ಟ್ರಾಫಿಕ್​ ಸಮಸ್ಯೆ ಉಂಟಾಗುತ್ತದೆ ಎಂದು ಸ್ಥಳಿಯ ರಮೇಶ್​ ವೆಂಕಟರವಣರೆಡ್ಡಿ ಆರೋಪಿಸಿದ್ದಾರೆ.

ರಾಜ್ಯದಲ್ಲಿ 570 ಕಿ.ಮೀ. ವ್ಯಾಪ್ತಿ

ಕರ್ನಾಟಕ&ಆಂಧ್ರಪ್ರದೇಶದ ಮೂಲಕ ಹಾದುಹೋಗುತ್ತದೆ. ಪಶ್ಚಿಮ ರ್ಟಮಿನಲ್​ ಹೊನ್ನಾವರ ಬಳಿ ಎನ್​ಎಚ್​ 66 ರ ಜಂಕ್ಷನ್​ನಲ್ಲಿದೆ, ಸಿರಾ ಬಳಿ ಎನ್​ಎಚ್​ 48 ಸಂಪರ್ಕಿಸುತ್ತದೆ. ಚಿಕ್ಕಬಳ್ಳಾಪುರ ಬಳಿ ಎನ್​ಎಚ್​ 44 ಸಂಪರ್ಕಿಸುತ್ತಿದ್ದು, ಮುಳಬಾಗಿಲು ಬಳಿ ಎನ್​ಎಚ್​ 75 ಅನ್ನು ಸಂಪರ್ಕಿಸುತ್ತದೆ ಮತ್ತು ರೇಣಿಗುಂಟದ ಪೂರ್ವ ತುದಿಯಲ್ಲಿ ಕೊನೆಗೊಳ್ಳುತ್ತದೆ. ಇದು ಹೊನ್ನಾವರದಿಂದ ಪ್ರಾರಂಭವಾಗಿ ಸಾಗರ, ಶಿವಮೊಗ್ಗ, ತರೀಕೆರೆ, ಕಡೂರು, ಬಾಣಾವರ, ಹುಳಿಯಾರ್​, ಬುಕ್ಕಪಟ್ಟಣ, ಸಿರಾ, ಮಧುಗಿರಿ, ಕೋಟಾಲದಿನ್ನೆ, ಗೌರಿಬಿದನೂರು, ಮಂಚೇನಹಳ್ಳಿ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ, ಶ್ರೀನಿವಾಸಪುರ, ಮುಳಬಾಗಿಲು, ನಂಗಲಿ ಮೂಲಕ ಕರ್ನಾಟಕದಲ್ಲಿ ಹಾದು ಹೋಗಿ ಆಂಧ್ರದ ಪಲಮನೇರ್​, ಚಿತ್ತೂರು, ಪಲ್ಲಿಪಟ್ಟು ಮೂಲಕ ಪುತ್ತೂರು ಮತ್ತು ರೇಣಿಗುಂಟದಲ್ಲಿ ಕೊನೆಗೊಳ್ಳುತ್ತದೆ. ಕರ್ನಾಟಕದಲ್ಲಿ 570 ಕಿಮೀ ಸಾಗುವ ಈ ಹೆದ್ದಾರಿ ಆಂಧ್ರಪ್ರದೇಶದಲ್ಲಿ 162 ಕಿಮೀ ಸಾಗುತ್ತದೆ.

ಮಣ್ಣು ಗುಡ್ಡೆ ಶೇಖರಣೆ

ದುರಸ್ತಿಗೆ ಬಂದ ವಾಹನಗಳನ್ನು ಹೆದ್ದಾರಿ ಮೇಲೆ ನಿಲ್ಲಿಸಿಕೊಂಡು ರಿಪೇರಿ ಮಾಡುವುದರಿಂದ ವಾಹನದಲ್ಲಿರುವ ಮಣ್ಣು, ಕಸಕಡ್ದಿ ರಸ್ತೆ ಬದಿ ಬಿದ್ದು, ಅದರಲ್ಲಿ ಮಣ್ಣು ಶೇಖರಣೆಯಾಗುತ್ತದೆ. ಅದೇ ಮಣ್ಣಿನ ಮೇಲೆ ವಾಹನಗಳು ಸಾಲಾಗಿ ನಿಂತಿರುತ್ತವೆ. ಇದರಿಂದಾಗಿ ಪುರಸಭೆ ಸಿಬ್ಬಂದಿ ಮಣ್ಣು ತೆರವುಗೊಳಿಸಲು ಸಾದ್ಯವಾಗದೆ ಹಾಗೆ ಬಿಟ್ಟಿದ್ದು, ದೊಡ್ಡಮಟ್ಟದಲ್ಲಿ ಮಣ್ಣು ಶೇಖರಣೆಯಾಗಿ ದ್ವಿಚಕ್ರ ವಾಹನ ಸಂಚಾರಕ್ಕೂ ಅಡ್ಡಿಯಾಗುತ್ತಿದೆ. ಜೋರಾಗಿ ಗಾಳಿ ಬೀಸಿದಾಗ ಮಣ್ಣು ರಸ್ತೆ ತುಂಬಾ ಹರಡುತ್ತದೆ. ಬೈಕ್​ ಸವಾರರ ಕಣ್ಣಿಗೂ ಬೀಳುತ್ತಿದೆ. ಇದರಿಂದ ಗಾಳಿ ಇದ್ದಾಗ ರಸ್ತೆ ಅಪಘಾತಕ್ಕೆ ಕಾರಣವಾಗುತ್ತಿದೆ.

ಕೊಂಪೆಯಾದ ಶ್ರೀನಿವಾಸಪುರ: ಹಳೆಯ ಮಾವು ಮಾರುಕಟ್ಟೆ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ವಾಹನ ಸ್ಕ್ರಾಪ್​ ಗೋದಾಮು ಇದ್ದು, ಹಳೆಯ ವಾಹನಗಳ ಗಾಜು, ಬಾಗಿಲುಗಳು ಗೋದಾಮು ಇದೆ. ಅಲ್ಲಿಯೂ ಸಹ ಹೈವೆ ಒತ್ತುವರಿ ಮಾಡಿಕೊಂಡಿದ್ದು, ಹಳೇ ಪ್ಲಾಸ್ಟಿಕ್​, ಸರಕು, ರಸ್ತೆ ಪಕ್ಕದಲ್ಲೇ ಸುರಿಯಲಾಗಿದೆ. ಈ ಭಾಗದ ರಸ್ತೆ ನೋಡಿದರೆ ಶ್ರೀನಿವಾಸಪುರ ಹಾಳು ಕೊಂಪೆಯಂತೆ ಕಾಣುತ್ತದೆ. ಇದನ್ನು ನೋಡಿಯೂ ಸಹ ಕಣ್ಮುಚ್ಚಿ ಕುಳಿತಿರುವ ಆಡಳಿತ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಮೌನ ಹಲವು ಅನುಮಾನಗಳಿಗೆ ಕಾರಣವಾಗುತ್ತದೆ ಎಂಬುದು ಜನರ ಅಸಮಾಧಾನವಾಗಿದೆ.

"ಸದರಿ ರಸ್ತೆಯನ್ನು ಚಿಕ್ಕಬಳ್ಳಾಪುರದಿಂದ ನಂಗಲಿ ಗಡಿವರೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೇರಿಸಲಾಗಿದ್ದು, ಹೆದ್ದಾರಿ ಪ್ರಾಧಕಾರವೇ ನಿರ್ವಹಿಸುತ್ತದೆ."

- ಎನ್​.ನಾರಾಯಣಸ್ವಾಮಿ. ಎಇಇ,ಶ್ರೀನಿವಾಸಪುರ