The national flag flew day and night. 
ಜಿಲ್ಲೆ

ಹಗಲು- ರಾತ್ರಿ ಹಾರಾಡಿದ ರಾಷ್ಟ್ರ ಧ್ವಜ

ಲೋಕೇಶ್ ಮನು. ಡಿ

ಮೇಲುಕೋಟೆ: ಮೇಲುಕೋಟೆ ಸಮೀಪದ ಬಳಿಘಟ್ಟ ಗ್ರಾ.ಪಂ ಪಂಚಾಯಿತಿಯಲ್ಲಿ ರಾಷ್ಟ್ರ ಧ್ವಜ್ಕ ಹಗಲು-ರಾತ್ರಿ ಹಾರಾಡಿದೆ.

ಇಲ್ಲಿನ ಗ್ರಾಪಂ ಕಾರ್ಯಾಲಯದಲ್ಲಿ ಶನಿವಾರ ಬೆಳಗ್ಗೆ ಹಾರಿಸಿದ ರಾಷ್ಟ್ರ ಧ್ವಜ ಸಂಜೆ ಇಳಿಸದೆ ಸೋಮವಾರವರೆಗೂ ಸುಮಾರು 40 ಗಂಟೆ ಕಾಲ ಹಾರಿದೆ. ವಿಷಯ ತಿಳಿಯುತ್ತಿದ್ದಂತೆಯೇ ಭಾನುವಾರ ರಾತ್ರಿ ವಿವಿಧ ಸಂಘಟನೆ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಪಂ ಸಿಬ್ಬಂದಿ ಶನಿವಾರ ಎಂದಿನಂತೆ ಮುಂಜಾನೆ ಕಾರ್ಯಾಲಯದ ಅವಧಿಯಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿದ್ದು, ಸಂಜೆ ಸೂರ್ಯಾಸ್ತದ ಸಮಯದ ಮುಂಚೆ ಧ್ವಜವನ್ನು ಇಳಿಸುವ ಬದಲು ಮನೆಗೆ ಮರಳಿದ್ದಾರೆ. ಭಾನುವಾರ ರಜಾದಿನವಾದ ಸೋಮವಾರದರೆಗೂ ರಾಷ್ಟ್ರ ಧ್ವಜ ಹಾರಡಿದೆ.

ಗ್ರಾಮದ ಹೃದಯ ಭಾಗ ಮತ್ತು ಮುಖ್ಯರಸ್ತೆಯ ಪಕ್ಕದಲ್ಲಿಯೇ ಇರುವ ಗ್ರಾಪಂ ಕಾರ್ಯಾಲಯದ ಆವರಣದಲ್ಲಿ ರಾಷ್ಟ್ರಧ್ವಜವು ಕಾಲದ ಮಿತಿಯೇ ಇಲ್ಲದೆ ಹಾರಾಡುತ್ತಿರುವ ವಿಷಯ ಚರ್ಚೆಗೆ ಗ್ರಾಸವಾಗಿದ್ದು, ದೇಶಪ್ರೇಮಿಗಳನ್ನು ಕೆರಳಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ.

ಸ್ಥಳೀಯ ಮುಖಂಡರಾದ ಪ್ರಕಾಶ್ ಮಾತನಾಡಿ, ಗ್ರಾ.ಪಂ ಪಿಡಿಒ ರಾಜೇಂದ್ರ ನಿರ್ಲಕ್ಷೃದಿಂದ ಇಂತಹ ಘಟನೆ ನಡೆಸಿದೆ. ಭಾನುವಾರ ಧ್ವಜರೋಹಣದ ಬಗ್ಗೆ ಮಾಹಿತಿ ಲಭ್ಯವಾದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.