ಜಿಲ್ಲೆ

ಜ್ಞಾನಿಗಳ ಹೆಸರು ಅಮರ

ವೀರೇಶ ಸೌದ್ರಿ

ದಾಂಡೇಲಿ: ಸೇವಾ ಮನೋಭಾವದಿಂದ ಮಾಡಿದ ದಾನ ಶಾಶ್ವತವಾಗಿ ಉಳಿಯುತ್ತದೆ. ಜ್ಞಾನಿಗಳ ಹೆಸರು ಅಮರವಾಗುತ್ತದೆ. ಆದರೆ ಆಸ್ತಿ, ಸಂಪತ್ತು, ಬಂಗಾರ ಇದಾವುದೂ ಜತೆಯಲ್ಲಿ ಬರುವುದಿಲ್ಲ ಎಂದು ನರಗುಂದದ ಡಾ. ಸಿದ್ಧವೀರ ಶಿವಯೋಗಿ ಸ್ವಾಮೀಜಿ ಹೇಳಿದರು.

ನಗರದ ಮೃತ್ಯುಂಜಯ ಮಠದಲ್ಲಿ ಶ್ರೀ ಶರಣ ಬಸವೇಶ್ವರ ಪುರಾಣ ಮಹಾಮಂಗಲ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಕಾರ್ಯಕ್ರಮಕ್ಕೂ ಮುನ್ನ ಸ್ವಾಮೀಜಿಗಳು ಶ್ರೀ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ಬಳಿಕ ಕುಂಭ ಮೆರವಣಿಗೆಯೊಂದಿಗೆ ಶ್ರೀಗಳನ್ನು ಮಠದವರೆಗೆ ಕರೆತರಲಾಯಿತು.

ಶ್ರಾವಣ ಮಾಸದಲ್ಲಿ ಸೇವೆಗೆ ಸಹಕರಿಸಿದ ದಾನಿಗಳನ್ನು, ಸ್ವಯಂ ಸೇವಕರನ್ನು ಸನ್ಮಾನಿಸಲಾಯಿತು. ಪುರಾಣ ನಡೆಸಿಕೊಟ್ಟ ವೀರಯ್ಯಶಾಸ್ತ್ರಿ ಹಿರೇಮಠ, ತಬಲವಾದಕ ಪ್ರಾಣೇಶಕುಮಾರ, ಗಾಯಕ ಪಂಪಾಪತಿ ಹಳ್ಳಿಕೊಟಿ ಅವರನ್ನು ಸತ್ಕರಿಸಲಾಯಿತು.

ವೀರಶೈವ ಸೇವಾ ಸಂಘದ ಅಧ್ಯಕ್ಷ ಬಸವರಾಜ ಕಲಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಚಂದ್ರು ಮಾಳಿ ಸ್ವಾಗತಿಸಿದರು. ಕೆ.ಬಿ. ನಂಜುಂಡಪ್ಪ, ಗುರು ಮಠಪತಿ, ನಂದೀಶ ಮುಂಗರವಾಡಿ, ಇತರರಿದ್ದರು. ಅಕ್ಕನಬಳಗ, ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆ ಸಮಿತಿ, ಅಕ್ಕಮಹಾದೇವಿ ಮಹಿಳಾ ಮಂಡಳದ ಪದಾಧಿಕಾರಿಗಳು ಸಹಕರಿಸಿದರು.