ಜಿಲ್ಲೆ

ಕೊಲೆಗಾರರಿಗೆ ಕಠಿಣ ಶಿಕ್ಷೆ ವಿಧಿಸಲಿ


ರಾಮದುರ್ಗ: ಜೈನಮುನಿ ಕಾಮಕುಮಾರ ನಂದಿ ಹಾಗೂ ಹಿಂದು ಕಾರ್ಯಕರ್ತ ವೇಣುಗೋಪಾಲ ಅವರನ್ನು ಬರ್ಬರವಾಗಿ ಹತ್ಯೆಗೈದವರಿಗೆ ಕಠಿಣ ಶಿಕ್ಷೆ ವಿಸುವಂತೆ ತಾಲೂಕು ದಿಗಂಬರ ಮತ್ತು ಶ್ವೇತಾಂಬರ ಸಮುದಾಯ, ಯುವಾ ಬ್ರಿಗೇಡ್ ಹಾಗೂ ಹಿಂದು ಸಂಘಟನೆಗಳಿಂದ ಬುಧವಾರ ವೌನ ಪ್ರತಿಭಟನೆ ಕೈಗೊಂಡು ತಹಸೀಲ್ದಾರ್ ಬಸವರಾಜ ನಾಗರಾಳ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ಜೈನಮುನಿ ಕಾಮಕುಮಾರನಂದಿ ಹಾಗೂ ಹಿಂದು ಕಾರ್ಯಕರ್ತ ವೇಣುಗೋಪಾಲ ಹತ್ಯೆ ಖಂಡಿಸಿ ವಿವಿಧ ಸಂಘಟನೆಗಳು ರಾಮದುರ್ಗದಲ್ಲಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ನೇಮಿಚಂದ್ರ ದಂಡಾವತಿ, ಶಂಕರಲಾಲ ದುಮಾವತ, ಸುರೇಶ ಪಾಲರೇಶಾ ಇತರರಿದ್ದರು.

ಸಮುದಾಯದ ಮುಖಂಡ ನೇಮಿಚಂದ್ರ ದಂಡಾವತಿ ಮಾತನಾಡಿ, ಅಹಿಂಸೆ ಪ್ರತಿಪಾದಿಸುತ್ತಿರುವ ಜೈನ ಧರ್ಮದ ಸಾಧುಗಳನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ಸಮುದಾಯವನ್ನು ತಲೆತಗ್ಗಿಸುವಂತೆ ಮಾಡಿದೆ. ಅಲ್ಪಸಂಖ್ಯಾತರಲ್ಲೇ ಅಲ್ಪಸಂಖ್ಯೆಯಲ್ಲಿರುವ ನಾವು ಸಾಧ್ಯವಾದ ಮಟ್ಟಿಗೆ ಉಪಕಾರ ಮಾಡುತ್ತೇವೆ ಹೊರತು ಅಪಕಾರ ಮಾಡುವುದಿಲ್ಲ. ಜೈನಮುನಿಗಳಿಗೆ ರಕ್ಷಣೆ ನೀಡಬೇಕು. ಟಿ. ನರಸೀಪುರದಲ್ಲಿ ಹಿಂದು ಕಾರ್ಯಕರ್ತ ವೇಣುಗೋಪಾಲ ಅವರನ್ನು ಕ್ಷುಲ್ಲಕ ಕಾರಣಕ್ಕಾಗಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಇದರಿಂದ ನಾಡಿನಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಹಿಂದುಗಳ ರಕ್ಷಣೆ ಹಾಗೂ ಅಪರಾಗಳ ವಿರುದ್ಧ  ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು.

ಶಂಕರಲಾಲ ದುಮಾವತ, ಸುರೇಶ ಪಾಲರೇಶಾ, ದಿನೇಶ ದುಮಾವತ, ನಂದಕುಮಾರ ದುಮಾವತ, ನಾಗರಾಜ ಬೋಗಾರ, ಚಂದ್ರಕಾಂತ ಬೋಗಾರ, ವಿಜಯಕುಮಾರ ದಿಂಡಿವಾರ, ಲಲಿತಾ ದಂಡಾವತಿ, ರಂಜನಾ ದಿಂಡಿವಾರ, ವಿಎಚ್‌ಪಿ ತಾಲೂಕು ಅಧ್ಯಕ್ಷ ರವಿ ಹೊಸೂರ, ಯುವಾ ಬ್ರಿಗೇಡ್ ಜಿಲ್ಲಾ ಸಂಚಾಲಕ ಮಹೇಶ ಹಿರೇಮಠ, ಹಿಂದು ಸಂಘಟನೆಯ ದತ್ತಾ ನಾಯಕ, ವಿಜಯ ಗುಡದಾರಿ, ಚಂದ್ರಕಾಂತ ಹೊಸಮನಿ, ಸಚಿನ ಗಲಗಲಿ ಇತರರಿದ್ದರು.