The municipality is filling the drain with garbage!  
ಜಿಲ್ಲೆ

ಚರಂಡಿಗೆ ಕಸ ತುಂಬುತ್ತಿದೆ ಪುರಸಭೆ!

Vijayapura - Desk - Doddanagouda Gudihindin

ಗುಳೇದಗುಡ್ಡ: ಪಟ್ಟಣದ ಬಸ್ ಡಿಪೋದ ಹತ್ತಿರ ಗುಳೇದಗುಡ್ಡ ತಾಂಡಾದ ಮುಖ್ಯ ಗಟಾರದಲ್ಲಿಯೇ ಪರಸಭೆ ಸಿಬ್ಬಂದಿ ಪಟ್ಟಣದ ಕಸತಂದು ಸುರಿಯುತ್ತಿದ್ದಾರೆ. ಇದರಿಂದ ಗಟಾರದ ನೀರು ಮುಂದೆ ಹೋಗದೆ ತಾಂಡಾದಲ್ಲಿನ ಮನೆಗಳ ನಿಲ್ಲುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಮನೆಯ ಒಳಗೆ ಚರಂಡಿ ನೀರು ನುಗ್ಗುವುದು ಖಚಿತ ಎಂದು ತಾಂಡಾದ ನಿವಾಸಿಗಳು ಗೋಳಾಡುತ್ತಿದ್ದಾರೆ.

ಸುಮಾರು ಒಂದು ನೂರಕ್ಕೂ ಹೆಚ್ಚು ಮನೆಗಳಿರುವ ಗುಳೇದಗುಡ್ಡ ತಾಂಡಾದ ರಸ್ತೆಗೆ ಅಂಟಿಕೊಂಡು ಪುರಸಭೆಯ ಮುಖ್ಯ ಗಟಾರದಿಂದ ಪಟ್ಟಣದ ಮಳೆ ನೀರು, ಕೊಳಚೆ ನೀರು ಹರಿಯುತ್ತಿದೆ. ಆದರೆ ಕೆಲವು ದಿನಳಿಂದ ಪುರಸಭೆಯವರು ಇಲ್ಲಿಯೇ ಪಟ್ಟಣದ ಕಸ ತಂದು ಸುರಿಯುತ್ತಿದ್ದಾರೆ. ಇದರಿಂದ ಗಟಾರ ಮುಚ್ಚಿಹೋಗುತ್ತಿದೆ. ಕೊಳಚೆ ನೀರು, ಮಳೆಯ ನೀರು ಮುಂದೆ ಸಾಗಲು ಸಾಧ್ಯವಾಗದೆ ಪಕ್ಕದಲ್ಲಿರುವ ತಾಂಡಾದ ಮನೆಗಳ ಮುಂದಿನ ಗಟಾರಗಳಿಂದ ಹೊರಬಂದು ಮನೆಯ ಆವರಣದಲ್ಲಿ ನಿಲ್ಲುತ್ತಿದೆ.