ಜಿಲ್ಲೆ

ನಡುರಸ್ತೆಯಲ್ಲಿ ಧಗಧಗನೆ ಉರಿದ ಓಮ್ನಿ- ಪ್ರಯಾಣಿಕರು ಪಾರು

Dakshina Kannada

ವಿಟ್ಲ: ಚಲಿಸುತ್ತಿದ್ದ ಓಮ್ನಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಆಹುತಿಯಾದರೂ, ಅದರಲ್ಲಿದ್ದ ಪ್ರಯಾಣಿಕರು ಪಾರಾದ ಘಟನೆ ಭಾನುವಾರ ನಡೆದಿದೆ.

ದೇರಳಕಟ್ಟೆ ಮೂಲದ ಕುಟುಂಬ ಮಾಣಿ ಕಡೆಗೆ ಬರುತ್ತಿದ್ದಾಗ ಓಮ್ನಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಚಾಲಕ ಮತ್ತು ಪ್ರಯಾಣಿಕರು ವಾಹನ ನಿಲ್ಲಿಸಿ ಹೊರಗಡೆ ಬಂದಿದ್ದಾರೆ. ಕೂಡಲೇ ಸ್ಥಳೀಯರು ಬೆಂಕಿ ನಂದಿಸಲು ಯತ್ನಿಸಿದರು. ಬಳಿಕ ಪಕ್ಕದ ಸರ್ವೀಸ್ ಸ್ಟೇಷನ್‌ನಿಂದ ನೀರು ಹಾರಿಸಲಾಯಿತು. ಆದರೆ ವಾಹನ ಅದಾಗಲೇ ಸಂಪೂರ್ಣ ಬೆಂಕಿಗಾಹುತಿಯಾಗಿತ್ತು.