ಜಿಲ್ಲೆ

‘ರವಿಕೆ ಪ್ರಸಂಗ’ ಚಲನಚಿತ್ರ ಶೀಘ್ರವೇ ತೆರೆಗೆ

ಮರಿದೇವ ಹೂಗಾರ

ಹುಬ್ಬಳ್ಳಿ: ದೃಷ್ಟಿ ಮೀಡಿಯಾ ಆಂಡ್ ಪೊ›ಡಕ್ಷನ್ ಬ್ಯಾನರ್​ನಡಿ ‘ರವಿಕೆ ಪ್ರಸಂಗ’ ಚಲನಚಿತ್ರ ನಿರ್ವಿುಸಿದ್ದು, ರಾಜ್ಯಾದ್ಯಂತ ಶೀಘ್ರವೇ ತೆರೆ ಕಾಣಲಿದೆ ಎಂದು ಚಿತ್ರದ ನಿರ್ದೇಶಕ ಸಂತೋಷ ಕೊಡಂಕೇರಿ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಸೊಗಡಿನ ವಾತಾವರಣ, ಸ್ಥಳೀಯ ಸಂಸ್ಕೃತಿ, ಸಂಪ್ರದಾಯದ ಜತೆಗೆ ಹಾಸ್ಯದ ಸ್ಪರ್ಶವನ್ನು ಚಿತ್ರದಲ್ಲಿ ್ಠೆಣೆಯಲಾಗಿದೆ. ದಕ್ಷಿಣ ಕರ್ನಾಟಕದ ಭಾಷೆಯನ್ನೇ ವಿಭಿನ್ನವಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆ ಎಂದರು.

ರವಿಕೆ ಪ್ರಸಂಗ ಚಿತ್ರದಲ್ಲಿ ಹೆಣ್ಣಿನ ಮನಸ್ಸಿನ ಭಾವನೆಯನ್ನು ಅನಾವರಣಗೊಳಿಸಲಾಗಿದೆ. ಈ ಮೂಲಕ ಮಹಿಳೆಯರ ಭಾವನೆಗಳಿಗೆ ಬಣ್ಣ ತುಂಬಲಾಗಿದೆ. ಸಿನಿಮಾ ಟೀಸರ್​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗಾಗಲೇ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, 3 ಹಾಡುಗಳಿವೆ ಎಂದರು.

ಪತ್ರಕರ್ತೆ ಪಾವನಾ ಸಂತೋಷ ಅವರು ಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಚಿತ್ರದಲ್ಲಿ ಗೀತಾ ಭಾರತಿ ಭಟ್, ಸುಮನ್ ರಂಗನಾಥ, ಪದ್ಮಜಾರಾವ್, ರಾಕೇಶ ಮೈಯ್ಯ, ರಘು ಪಾಂಡೇಶ್ವರ, ಸಂಪತ್ ಮೈತ್ರಿಯಾ, ಕೃಷ್ಣಮೂರ್ತಿ ಕವತಾರ ಸೇರಿ ಇತರರು ಅಭಿನಯಿಸಿದ್ದಾರೆ. ಸಂಗೀತ ನಿರ್ದೇಶನ ವಿನಯ ಶರ್ವ, ಕಿರಣ ಕಾವೇರಪ್ಪ ಅವರು ಸಾಹಿತ್ಯ ಬರೆದಿದ್ದು, ಚೈತ್ರಾ ಎಚ್.ಜಿ., ಜೋಗಿ, ಮಾನಸಾ ಹೊಳ್ಳ, ಚೇತನ ನಾಯಕ ಅವರು ಚಿತ್ರಕ್ಕೆ ಸ್ವರ ನೀಡಿದ್ದಾರೆ ಎಂದರು.

ಪಾವನಾ ಸಂತೋಷ, ನೂರ್​ಅಹ್ಮದ್ ಮಕಾಂದಾರ ಸುದ್ದಿಗೋಷ್ಠಿಯಲ್ಲಿದ್ದರು.