ರಾಯಚೂರಿನ ಡ್ಯಾಡಿ ಕಾಲನಿಯಲ್ಲಿರುವ ಈಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ನಿಮಿತ್ತ ಮಂಗಳವಾರ ರಾತ್ರಿ ಹಮ್ಮಿಕೊಂಡಿದ್ದ ದೀಪೋತ್ಸವ ಕಾರ್ಯಕ್ರಮಕ್ಕೆ ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು. ದೇವಸ್ಥಾನ ಸಮಿತಿ ಅಧ್ಯಕ್ಷ ಚಂದ್ರಶೇಖರ ಪಾಟೀಲ್ ಮಿರ್ಜಾಪುರ, ಮುಖಂಡರಾದ ಶಿವಯೋಗಿ ಪಾಟೀಲ್,, ಗಿರಿಮಲ್ಲಪ್ಪ, ಪರಪ್ಪಗೌಡ, ಚೆನ್ನಬಸವ, ಗೀತಾ ಮಲ್ಲಪ್ಪಗೌಡ, ನೀಲಮ್ಮ ಪಾಟೀಲ್, ಜಯದೇವಿ, ದೇವಸ್ಥಾನದ ಅರ್ಚಕ ನಾಗಯ್ಯಸ್ವಾಮಿ ಇದ್ದರು. 
ಜಿಲ್ಲೆ

ಕಾರ್ತಿಕ ಮಾಸಕ್ಕೆ ವಿಶೇಷ ಪಾವಿತ್ರತೆಯಿದೆ

ರಾಯಚೂರು: ಭಾರತೀಯ ಪರಂಪರೆಯಲ್ಲಿ ಕಾರ್ತಿಕ ಮಾಸಕ್ಕೆ ವಿಶೇಷವಾದ ಪಾವಿತ್ರತೆಯನ್ನು ನೀಡಲಾಗಿದ್ದು, ಈ ಮಾಸದಲ್ಲಿ ದಾನ, ಧರ್ಮ ಮಾಡಿದರೆ ಸಾವಿರ ಪಟ್ಟು ಪ್ರಾಪ್ತಿಯಾಗುತ್ತದೆ ಎಂದು ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಸ್ಥಳೀಯ ಡ್ಯಾಡಿ ಕಾಲನಿಯ ಈಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ನಿಮಿತ್ತ ಮಂಗಳವಾರ ರಾತ್ರಿ ಹಮ್ಮಿಕೊಂಡಿದ್ದ ಕಾರ್ತೀಕ ದೀಪೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಕಾರ್ತಿಕ ಮಾಸದಲ್ಲಿ ಮಠ ಮಂದಿರ ಮತ್ತು ಮನೆಯಲ್ಲಿ ಸಂಕಲ್ಪ ಮಾಡಿ ದೀಪ ಪ್ರಜ್ವಲನೆ ಮಾಡುವುದರಿಂದ ಮನೆಯಲ್ಲಿ ಅನ್ನಪೂರ್ಣೇಶ್ವರಿ ಹಾಗೂ ಧನಲಕ್ಷ್ಮಿ ಶಾಶ್ವತವಾಗಿ ನೆಲೆಸುತ್ತಾಳೆ ಎಂದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಚಂದ್ರಶೇಖರ ಪಾಟೀಲ್ ಮಿರ್ಜಾಪುರ ಮಾತನಾಡಿ, ಬಡಾವಣೆಯಲ್ಲಿ ಉತ್ಸವಗಳು ನಡೆಯಲು ಎಲ್ಲರ ಸಹಕಾರ ನೀಡುತ್ತಿದ್ದು, 2013ರಲ್ಲಿ ಪ್ರಾರಂಭಗೊಂಡ ಕಾರ್ತಿಕ ಮಾಸದ ಕಾರ್ಯಕ್ರಮವನ್ನು ನಿರಂತರವಾಗಿ ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಖ್ಯಾತ ಗಾಯಕ ಸೂಗೂರೇಶ ಅಸ್ಕಿಹಾಳರಿಂದ ಶಾಸೀಯ ಗಾಯನ ಜರುಗಿತು. ಕಾರ್ಯಕ್ರಮದಲ್ಲಿ ಬಡಾವಣೆ ಮುಖಂಡರಾದ ಶಿವಯೋಗಿ ಪಾಟೀಲ್, ಡಾ.ಮಹಾಲಿಂಗಪ್ಪ, ಗಿರಿಮಲ್ಲಪ್ಪ, ವೀರುಪನಗೌಡ ಬಂಡಿ, ಬಸವರಾಜ ಯಾಪಲದಿನ್ನಿ, ಪರಪ್ಪಗೌಡ, ಚೆನ್ನಬಸವ, ಗೀತಾ ಮಲ್ಲಪ್ಪಗೌಡ, ನೀಲಮ್ಮ ಪಾಟೀಲ್, ಜಯದೇವಿ, ದೇವಸ್ಥಾನದ ಅರ್ಚಕ ನಾಗಯ್ಯಸ್ವಾಮಿ ಉಪಸ್ಥಿತರಿದ್ದರು.