ಗಂಗಾಧರ್ ಬೈರಾಪಟ್ಟಣ ರಾಮನಗರ ಲೋಕಸಭೆ ಚುಣಾವಣೆ ಮುಗಿದರೂ ಬೆಂಗಳೂರು ಹಾಲು ಒಕ್ಕೂಟ ಬಮುಲ್ ಚುನಾವಣೆ ನಡೆಸುವ ಪ್ರಯತ್ನಕ್ಕೆ ಸರ್ಕಾರ ಕೈ ಹಾಕಿಲ್ಲ. ಲೋಕಸಭೆ ಚುನಾವಣೆಗೂ ಮುನ್ನವೇ ಬಮುಲ್ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಸಲು ಸಿದ್ಧತೆ ನಡೆದಿದ್ದವು. ಆದರೆ, ಲೋಕಸಭೆ ಚುನಾವಣೆ ನೆಪವೊಡ್ಡಿ ಬಹುತೇಕ ಎಲ್ಲ ಸಹಕಾರ ಸಂಗಳ ಚುನಾವಣೆ ಮುಂದೂಡಲಾಗಿತ್ತು. 2024ರ ಮಾರ್ಚ್ - ಏಪ್ರಿಲ್ನಲ್ಲಿಯೇ ಚುನಾವಣೆ ನಡೆಯಬೇಕಿತ್ತಾದರೂ, ಈಗ ನಾಲ್ಕು ತಿಂಗಳು ಕಳೆದರೂ ಅದರ ಸುಳಿವೇ ಇಲ್ಲ ಎನ್ನುವಂತೆ ಆಗಿದೆ.
ಲೋಕಸಭೆ ಚುನಾವಣೆ ಕಾರಣ ಮುಂದೂಡಲ್ಪಟ್ಟಿದ್ದ ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯನ್ನು ಒಳಗೊಂಡ ಬಮುಲ್ ಚುನಾವಣೆಯನ್ನು ಫಲಿತಾಂಶ ಪ್ರಕಟಗೊಂಡ ನಂತರವೂ ನಡೆಸದೆ ಇದ್ದ ಕಾರಣ, ಸುಮಾರು ಒಂದು ತಿಂಗಳ ಹಿಂದೆಯೇ ಚನ್ನಪಟ್ಟಣ ಬಮುಲ್ ನಿರ್ದೇಶಕ ಎಚ್.ಸಿ. ಜಯಮುತ್ತು ಕೋರ್ಟ್ ಮೆಟ್ಟಿಲೇರಿ, ಚುನಾವಣೆ ನಡೆಸುವಂತೆ ಕೋರಿದ್ದರು. ನಂತರ ಹೈಕೋರ್ಟ್ ಚುನಾವಣೆ ನಡೆಸುವಂತೆ ಸೂಚನೆ ನೀಡಿತ್ತು. ಆದರೆ, ಕೋರ್ಟ್ ಆದೇಶಕ್ಕೂ ಮನ್ನಣೆ ನೀಡದ ಸರ್ಕಾರ ಚುನಾವಣೆ ನಡೆಸುವ ಕಾರ್ಯಕ್ಕೆ ಕೈ ಹಾಕದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಬಮುಲ್ ವ್ಯಾಪ್ತಿಯಲ್ಲಿ ಒಟ್ಟು 13 ನಿರ್ದೇಶಕರನ್ನು ಚುನಾವಣೆ ಮೂಲಕ ಆಯ್ಕೆ ಮಾಡಲಾಗುತ್ತಿದೆ. ಇದರಲ್ಲಿ ರಾಮನಗರ ಜಿಲ್ಲೆಯ ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ, ಕುದೂರು, ಬೆಂಗಳೂರು ದಣ, ಉತ್ತರ, ಪೂರ್ವ, ಹೊಸಕೋಟೆ, ದೊಡ್ಡಬಳ್ಳಾಪುರ, ದೇವನಹಳ್ಳಿ, ಆನೇಕಲ್, ನೆಲಮಂಗಲ ಕ್ಷೇತ್ರಗಳನ್ನು ಹೊಂದಿವೆ. ಈ ಕ್ಷೇತ್ರ ವ್ಯಾಪ್ತಿಯ ಎಂಪಿಸಿಎಸ್ಗಳ ಮೂಲಕ ನಿರ್ದೇಶಕರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಜಿಲ್ಲೆಯ ಮಟ್ಟಿಗೆ ಬಮುಲ್ನಿಂದ ಕಣಕ್ಕೆ ಇಳಿಯಲು ಹಲವರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇವರಲ್ಲಿ ರಾಮನಗರ ನಿರ್ದೇಶಕ ಸ್ಥಾನಕ್ಕೆ ಹಾಲಿ ನಿರ್ದೇಶಕ ಪಿ.ನಾಗರಾಜು ಕಾಂಗ್ರೆಸ್ ಬೆಂಬಲಿತರಾಗಿ ಕಣಕ್ಕೆ ಇಳಿಯಲಿದ್ದಾರೆ. ಇವರ ಪ್ರತಿಸ್ಪರ್ಧಿಯಾಗಿ ಕಲ್ಲುಗೋಪಳ್ಳಿಯ ಕೆಂಪಣ್ಣ ಅವರ ಪತ್ನಿ ರೇಣುಕಮ್ಮ ಜೆಡಿಎಸ್ ಅಭ್ಯರ್ಥಿ ಆಗುವುದು ಬಹುತೇಕ ನಿಶ್ಚಿತ. ಇನ್ನು ಚನ್ನಪಟ್ಟಣದಲ್ಲಿ ಹಾಲಿ ನಿರ್ದೇಶಕ ಜೆಡಿಎಸ್ನ ಎಚ್.ಸಿ. ಜಯಮುತ್ತು ಮತ್ತೊಮ್ಮೆ ಸ್ಪರ್ಧಿಸುವುದು ಪಕ್ಕಾ ಆಗಿದೆ. ಆದರೆ ಬಮುಲ್ ಮಾಜಿ ನಿರ್ದೇಶಕ ಎಸ್. ಲಿಂಗೇಶ್ಕುಮಾರ್ ಸ್ಪರ್ಧೆಯೊಡ್ಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಇನ್ನು ಮಾಗಡಿಯಲ್ಲಿ ಎರಡು ಕ್ಷೇತ್ರಗಳಿವೆ. ಬಮುಲ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಚುನಾವಣಾ ಕಣದಿಂದ ಹಿಂದೆ ಸರಿಯುವುದಾಗಿ ಹೇಳಿದ್ದಾರೆ. ಇದರೊಂದಿಗೆ ಶಾಸಕ ಬಾಲಕೃಷ್ಣ ಅವರ ಸಹೋದರ ಎಚ್.ಎನ್. ಅಶೋಕ್ ಸ್ಫರ್ಧೆ ಖಚಿತವಾಗಿದೆ. ಇವರಿಗೆ ಜೆಡಿಎಸ್ನ ಬೋರ್ವೆಲ್ ನರಸಿಂಹಯ್ಯ ಸ್ಪರ್ಧೆ ಒಡ್ಡುವ ಸಾಧ್ಯತೆ ಇದೆ.
ಕುದೂರು ೇತ್ರಕ್ಕೆ ಕಾಂಗ್ರೆಸ್ನಿಂದ ಕೆಇಬಿ ರಾಜಣ್ಣ ಮತ್ತೆ ಕಣಕ್ಕೆ ಇಳಿಯಲಿದ್ದು, ಇವರ ಪ್ರತಿ ಸ್ಪರ್ಧಿ ಕನ್ನಸಂದ್ರ ಮಂಜುನಾಥ್ ಆಗುವರೋ ಇಲ್ಲವೇ ಬೇರೆ ಯಾರಿಗೆ ಟಿಕೆಟ್ ಲಭಿಸಲಿದೆ ಎನ್ನುವುದು ಇನ್ನೂ ಖಚಿತಗೊಂಡಿಲ್ಲ.
ಕನಕಪುರದಲ್ಲಿ ರಾಜ್ ಕುಮಾರ್ ಮತ್ತು ಬೆಂಗಳೂರು ದಕ್ಷಿಣದಲ್ಲಿ ಹರೀಶ್ ಕುಮಾರ್ ಮತ್ತೊಮ್ಮೆ ಕಣಕ್ಕೆ ಇಳಿಯಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆಯಾದರೂ, ಅಂತಿಮ ಕ್ಷಣದಲ್ಲಿ ಡಿ.ಕೆ.ಶಿವಕುಮಾರ್ ಅವರ ಆಣತಿಯಂತೆ ಅಭ್ಯರ್ಥಿಗಳು ಬದಲಾದರೆ ಅಚ್ಚರಿ ಪಡಬೇಕಿಲ್ಲ.
ಜಿಲ್ಲೆಯಲ್ಲಿ ಒಟ್ಟು 966 ಎಂಪಿಸಿಎಸ್ಗಳು ಇದ್ದು, ಇವುಗಳಲ್ಲಿ 888 ಸಂಗಳು ಮತಚಲಾವಣೆ ಮಾಡುವ ಅರ್ಹತೆ ಹೊಂದಿವೆ. ಈಗಾಗಲೇ ಈ ಸಂಬಂಧ ಬಮುಲ್ ಕರಡು ಮತದಾರರ ಪಟ್ಟಿ ಬಿಡುಗಡೆ ಮಾಡಿದೆ. ಆಯಾ ಎಂಪಿಸಿಎಸ್ನ ಅಧ್ಯಕ್ಷರು ಸಂದ ಪರವಾಗಿ ಮತ ಹಾಕುವ ಹಕ್ಕನ್ನು ಹೊಂದಿರುತ್ತಾರೆ. ಈ ಹಿನ್ನೆಲೆಯಲ್ಲಿ ತಮ್ಮ ಗೆಲುವಿಗೆ ಬೇಕಾದ ಡೇರಿಗಳಲ್ಲಿ ತಮ್ಮ ಬೆಂಬಲಿತರಿಗೆ ಅಧಿಕಾರ ಕೊಡಿಸುವ ಕೆಲಸವನ್ನು ನಿರ್ದೇಶಕ ಸ್ಥಾನದ ಅಭ್ಯರ್ಥಿಗಳು ಮಾಡಿಕೊಂಡಿದ್ದಾರೆ.
ಲೋಕಸಭೆ ಚುನಾವಣೆ ಕಾರಣ ನೀಡಿ ನಿಗದಿಯಾಗಿದ್ದ ಚುನಾವಣೆಯನ್ನು ಮುಂದೂಡಲಾಗಿತ್ತು. ಚುನಾವಣೆ ನಡೆಸುವಂತೆ ಹೈಕೋರ್ಟ್ ಸೂಚನೆ ನೀಡಿದರೂ ಇನ್ನೂ ನಡೆಸಲು ಸಂಬಂಧಪಟ್ಟವರು ಮುಂದಾಗಿಲ್ಲ. ಸರ್ಕಾರ ಕೂಡಲೇ ಈ ಸಂಬಂಧ ಕ್ರಮ ಕೈಗೊಳ್ಳಬೇಕು.
ಎಚ್.ಸಿ.ಜಯಮುತ್ತು, ಬಮುಲ್ ನಿರ್ದೇಶಕ, ಚನ್ನಪಟ್ಟಣ
===
ಕ್ಷೇತ್ರ ಸದಸ್ಯರಸಂಖ್ಯೆ ಅರ್ಹ ಸದಸ್ಯರು
ಮಾಗಡಿ 148 138
ರಾಮನಗರ 168 148
ಹಾರೋಹಳ್ಳಿ 139 135
ಕನಕಪುರ 178 163
ಕುದೂರು 155 150
ಚನ್ನಪಟ್ಟಣ 178 154
&&&&&&&&&&&&&&&&&&&&&&&&&&&&&&&&&&&&&&&&
ಒಟ್ಟು 966 888
&&&&&&&&&&&&&&&&&&&&&&&&&&&&&&&&&&&