ಜಿಲ್ಲೆ

ಮನೆ ಕಳೆದುಕೊಂಡಿದ್ದ ವೃದ್ಧೆಗೆ ಪರಿಹಾರ ಕಲ್ಪಿಸಿದ ಶಾಸಕ

ಸಕಲೇಶಪುರ : ತಾಲೂಕಿನ ಕ್ಯಾಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದನಾಪುರ ಗ್ರಾಮದಲ್ಲಿ ಸುಂದರಿ ಎಂಬುವರ ಮನೆ ಮಳೆಗೆ ಕುಸಿದು ಬಿದ್ದಿದ್ದ ಹಿನ್ನೆಲೆಯಲ್ಲಿ ಶಾಸಕ ಸಿಮೆಂಟ್ ಮಂಜು ಇತ್ತೀಚೆಗೆ ಭೇಟಿ ನೀಡಿ, ಆಕೆಗೆ ತಾತ್ಕಾಲಿಕ ಪರಿಹಾರ ಕಲ್ಪಿಸಿದ್ದಾರೆ.


ಸಂತ್ರಸ್ತ ಮಹಿಳೆ ಮನೆ ಪಕ್ಕದಲ್ಲೇ ತಾತ್ಕಾಲಿಕವಾಗಿ ಟಾರ್ಪಲ್ ಹಾಕಿಕೊಂಡು ಜೀವನ ಸಾಗಿಸುತ್ತಿದ್ದರು. ಮನೆ ಬಿದ್ದು ಹಲವು ದಿನಗಳಾದರೂ ಅಧಿಕಾರಿಗಳು ಇತ್ತ ಸುಳಿದಿರಲಿಲ್ಲ.


ಈ ಹಿನ್ನೆಲೆಯಲ್ಲಿ ಗ್ರಾಪಂ ಪಿಡಿಒ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಶಾಸಕರು ತರಾಟೆಗೆ ತೆಗೆದುಕೊಂಡರು. ತಕ್ಷಣ ತಾತ್ಕಾಲಿಕ ಪರಿಹಾರ ವಿತರಿಸಲು ಸೂಚನೆ ನೀಡಿದರು. ಈ ಹಿನ್ನೆಲೆಯಲ್ಲಿ ಗ್ರಾಪಂ ನಿಂದ 5000 ಸಾವಿ ರೂ.ಗಳನ್ನು ತಾತ್ಕಾಲಿಕ ಪರಿಹಾರ ನೀಡಲಾಯಿತು. ಸೂಕ್ತ ದಾಖಲಾತಿ ಪಡೆದು ಸರ್ಕಾರಿದಂದ ಪರಿಹಾರ ಮೊತ್ತ ವಿರಿಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.