ಜಿಲ್ಲೆ

ಶಿವಲಿಂಗ ಎಸೆದಿರುವ ದುಷ್ಕರ್ಮಿಗಳು

ಆಲೂರು: ದೇವಾಲಯದಲ್ಲಿ ಪ್ರತಿಷ್ಠಾಪಿಸಿ ನಿತ್ಯ ಪೂಜೆಗೆ ಒಳಪಡುತ್ತಿದ್ದ ಪುರಾತನ ಕಾಲದ ದೇವರ ಮೂರ್ತಿಗಳನ್ನು ನದಿ ದಂಡೆಯಲ್ಲಿ ಎಸೆದು ಹೋಗಲಾಗಿದೆ.
ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿಯ ಹರಿಹಳ್ಳಿ ಗ್ರಾಮದ ಸಮೀಪ ಹೇಮಾವತಿ ನದಿ ತೀರದಲ್ಲಿ ಶಿವಲಿಂಗ, ನಾಗರಕಲ್ಲನ್ನು ದುಷ್ಕರ್ಮಿಗಳು ಶನಿವಾರ ರಾತ್ರಿ ಎಸೆದಿದ್ದಾರೆ. ಭಾನುವಾರ ಬೆಳಗ್ಗೆ ಗ್ರಾಮದ ಎಚ್.ಎನ್.ಶ್ರೀಹರ್ಷ ಅವರಿಗೆ ದೇವರ ಮೂರ್ತಿಗಳು ಕಾಣಿಸಿವೆ. ಬಳಿಕ ಗ್ರಾಮಸ್ಥರು ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿದ್ದಾರೆ. ಆದರೆ ಯಾವ ಗ್ರಾಮದ ದೇವಾಲಯದ ಮೂರ್ತಿಗಳು ಎಂಬುದು ಪತ್ತೆಯಾಗಿಲ್ಲ.
ಹೇಮಾವತಿ ನದಿ ತೀರದಲ್ಲಿ ಕಂಡುಬಂದಿರುವ ದೇವರ ವಿಗ್ರಹಗಳು ಸುತ್ತಮುತ್ತಲಿನ ಗ್ರಾಮಗಳಿಗೆ ಸೇರಿದವುಗಳಲ್ಲ. ದುಷ್ಕರ್ಮಿಗಳು ನಿಧಿ ಆಸೆಗಾಗಿ ಗರ್ಭಗುಡಿಯಲ್ಲಿರುವ ಮೂರ್ತಿಗಳನ್ನು ಕಿತ್ತು ನದಿ ದಡದಲ್ಲಿ ಎಸೆದು ಹೋಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.