ತೇರದಾಳ ತರಕಾರಿ ಮಾರುಕಟ್ಟೆಯಲ್ಲಿರುವ ಸರ್ಕಾರಿ ಉರ್ದು ಶಾಲೆಯ ಕೊಠಡಿಯಲ್ಲಿ ಕಿಡಿಗೇಡಿಗಳು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಲು ಯತ್ನಿಸಿರುವುದು. ಪುರಸಭೆ ಸದಸ್ಯ ಜಲ್ ಅತ್ತಾರಾವುತ್ ಇದ್ದಾರೆ. 
ಜಿಲ್ಲೆ

ಶಾಲೆಯಲ್ಲಿ ಬೆಂಕಿ ಹಚ್ಚಲು ಯತ್ನಿಸಿದ ಕಿಡಿಗೇಡಿಗಳು

ತೇರದಾಳ: ಇಲ್ಲಿನ ತರಕಾರಿ ಮಾರುಕಟ್ಟೆಯಲ್ಲಿನ ಸರ್ಕಾರಿ ಉರ್ದು ಶಾಲೆಯ ಏಳನೇ ತರಗತಿ ಕೊಠಡಿಯೊಳಗೆ ಯಾರೋ ಕಿಡಿಗೇಡಿಗಳು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಲು ಯತ್ನ ನಡೆಸಿದ್ದಾರೆ.

ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಎಂದಿನಂತೆ ಶುಕ್ರವಾರ ಶಾಲೆಗೆ ಆಗಮಿಸಿ ತರಗತಿ ಬಾಗಿಲು ತೆಗೆಯುತ್ತಿದ್ದಂತೆ ಸುಟ್ಟ ವಾಸನೆ ಬಂದಿದೆ. ಶಿಕ್ಷಕರು ಒಳಗೆ ನೋಡಿದಾಗ, ಬೆಂಚ್‌ಗಳಿಗೆ ಹೊಗೆ ಬಡಿದಿದೆ. ಸುಟ್ಟ ಕಾಗದ ಚೂರು, ಸೀಮೆಎಣ್ಣೆ ವಾಸನೆ ಬಂದಿದ್ದು, ಕೂಡಲೇ ಎಸ್‌ಡಿಎಂಸಿ ಗಮನಕ್ಕೆ ತಂದಿದ್ದಾರೆ.

ಎಸ್‌ಡಿಎಂಸಿ ಅಧ್ಯಕ್ಷ ಮೌಲಾಅಲಿ ಚಿತ್ರಬಾನುಕೋಟಿ, ಪುರಸಭೆ ಸದಸ್ಯ ಪಜಲ್ ಅತಾರಾವುತ್ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿ, ಈ ಹಿಂದೆಯೂ ಇಂಥ ಘಟನೆ ನಡೆದಿತ್ತು. ಆಗ ಪೊಲೀಸರಿಗೆ ಮಾಹಿತಿ ನೀಡಿದ್ದೇವು. ಈಗಲೂ ಈ ಕುರಿತು ಪೊಲೀಸ್ ಠಾಣೆಗೆ ದೂರು ಕೊಡುವುದಾಗಿ ತಿಳಿಸಿದರು.