ಬಿಡದಿ : ಭದ್ರಾಪುರ ಗ್ರಾಮದ ರೈಲು ಹಳಿಯ ಪಕ್ಕದಲ್ಲಿ ಶವವಾಗಿ ಪತ್ತೆಯಾಗಿದ್ದ ಬಾಲಕಿ ಮೇಲೆ ಅತ್ಯಾಚಾರ ನಡೆದಿಲ್ಲ ಎಂದು ಎಸ್ಪಿ ಶ್ರೀನಿವಾಸ್ ಗೌಡ ಸ್ಪಷ್ಟಪಡಿಸಿದರು.
ಬಿಡದಿ ಪೊಲೀಸ್ ಠಾಣೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಾಲಕಿಯ ಶವ ಪತ್ತೆಯಾಗುತ್ತಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಾಚಾರ ಮಾಡಲಾಗಿದೆ ಎಂದು ಬಿಂಬಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಎ್ಎಸ್ಎಲ್ಗೆ ಕೆಲವು ಮಾದರಿ ಕಳುಹಿಸಲಾಗಿತ್ತು. ಈಗ ವರದಿ ಬಂದಿದ್ದು, ಅತ್ಯಾಚಾರ ನಡೆದಿಲ್ಲ ಎಂದು ದೃಢವಾಗಿದೆ ಎಂದರು.
ಈ ವಿಚಾರವಾಗಿ ಟನೆ ನಡೆದ ದಿನದಿಂದ 10 ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಯಾರನ್ನೂ ಬಂಧಿಸಿಲ್ಲ. ಈ ಟನೆ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ವಿವಿಧ ರೀತಿಯಲ್ಲಿ ಸಮಾಜಕ್ಕೆ ಕೆಟ್ಟ ಸಂದೇಶ ಹರಡುವ ರೀತಿಯಲ್ಲಿ ವಿಡಿಯೋ ಹರಿಬಿಡಲಾಗಿತ್ತು. ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ : ಬಾಲಕಿಗೆ ರೈಲು ಹೊಡೆದಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಭಾನುವಾರ ಸಂಜೆ 6.9 ಗಂಟೆಗೆ ರೈಲು ಡಿಕ್ಕಿ ಹೊಡೆದಿದೆ. ಬೆಂಗಳೂರು& ಕಡಲೂರು ( 16232/39294) ರೈಲು ಡಿಕ್ಕಿ ಹೊಡೆದಿದೆ. ವೈಫೈ ಆಧಾರಿತ ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ. ಇದರ ಒರಿಜನಲ್ ಡಿವೈಸ್ ಸಿಕಂದರಾಬಾದ್ನಲ್ಲಿದ್ದು, ಅಲ್ಲಿಂದ ಮೂಲ ವಿಡಿಯೋ ತರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಎಸ್ಪಿ ಹೇಳಿದರು.
ರೈಲ್ವೆ ಪ್ರಕರಣ ಪೊಲೀಸರಿಂದ ತನಿಖೆ : ರೈಲು ಹಳಿ ಪಕ್ಕದಲ್ಲಿ ಬಾಲಕಿ ಶವವಾಗಿ ಪತ್ತೆಯಾಗಿದ್ದು, ಈ ಪ್ರಕರಣ ರೈಲ್ವೆ ಪೊಲೀಸರಿಗೆ ಬರುತ್ತದೆ. ನಾವು ಟನಾ ಸ್ಥಳಕ್ಕೆ ಹೋಗುವ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಾಚಾರ ಕೊಲೆ ಎಂದು ಬಿಂಬಿಸಲಾಗಿತ್ತು. ಹಾಗಾಗಿ ಈ ಪ್ರಕರಣವನ್ನು ನಾವು ದಾಖಲು ಮಾಡಿಕೊಂಡು ತನಿಖೆ ಮುಂದುವರಿಸಿದ್ದೇವೆ ಎಂದರು.
ಗಾಯದ ಗುರುತು ಪತ್ತೆ : ಬಾಲಕಿ ಶವ ಸಿಕ್ಕ ಪರಿಸ್ಥಿತಿಯಲ್ಲಿ ತಲೆ, ದೇಹದ ಹಿಂಬಿದಿ ಭಾಗ ಸೇರಿ ಕೆಲವು ಕಡೆ ಗಾಯಗಾಳಾಗಿದ್ದವು. ಈ ನಿಟ್ಟಿನಲ್ಲಿ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀೆ ನಡೆಸಲಾಗಿದೆ. ವೈದ್ಯರು ಇನ್ನೂ ವರದಿ ನೀಡಿಲ್ಲ ಎ್ಎಸ್ಎಲ್ ವರದಿ ಜತೆಗೆ ನಮ್ಮಿಂದ ಕೆಲವು ದಾಖಲೆ ಕೇಳಿದ್ದರು ಕೊಡಲಾಗಿದೆ. ಸೋಮವಾರ ವರದಿ ಬರಲಿದೆ ಎಂದು ಎಸ್ಪಿ ತಿಳಿಸಿದರು.