ರಾಯಬಾಗ: ಎಲ್ಲರೂ ಸೌಹಾರ್ದತೆ, ಏಕತೆಯಿಂದ ನಡೆದುಕೊಂಡರೆ ವಿಶ್ವದಲ್ಲಿ ಶಾಂತಿ ನೆಲೆಸುತ್ತದೆ ಎಂದು ಸುಕ್ಷೇತ್ರ ಹಿಪ್ಪರಗಿ ಪ್ರಭೂಜಿ ಮಹಾರಾಜರು ಹೇಳಿದರು.
ತಾಲೂಕಿನ ಮೊರಬ ಗ್ರಾಮದ ಬಾನೆಸರಕಾರ ತೋಟದಲ್ಲಿ ಎಸ್.ಆರ್. ಬಾನೆಸರಕಾರ ಮತ್ತು ಗೋದಾವರಿ ಬಾನೆಸರಕಾರ ಪುಣ್ಯಸ್ಮರಣೆ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ಸತ್ಸಂಗ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಮನಸ್ಸು ಗೆದ್ದರೆ ಜಗತ್ತು ಗೆಲ್ಲಲು ಸಾಧ್ಯ. ನಮ್ಮ ಮನಸ್ಸು ಪರಮಾತ್ಮನ ಧ್ಯಾನದಲ್ಲಿ ಲೀನಗೊಳಿಸಿದರೆ ಮುಕ್ತಿ ಪಡೆಯಲು ಸಾಧ್ಯ ಎಂದರು.
ಕೋಳಿಗುಡ್ಡ ಸುಜ್ಞಾನ ಕುಟೀರದ ಸ್ವರೂಪಾನಂದ ಸ್ವಾಮೀಜಿ, ಮುತ್ತೇಶ್ವರ ಸ್ವಾಮೀಜಿ, ಪರಪ್ಪ ಇಂಚಗೇರಿ, ಹಿರಿಯ ಧುರೀಣ ಡಿ.ಎಸ್. ನಾಯಿಕ ಮಾತನಾಡಿದರು.
ಬಿಡಿಸಿಸಿ ಅಧ್ಯಕ್ಷ ಅಪ್ಪಾಸಾಹೇಬ ಕುಲಗುಡೆ, ಯುವ ಧುರೀಣ ಸಂಜೀವಕುಮಾರ ಬಾನೆಸರಕಾರ, ಡಾ.ಎಸ್.ಎಸ್. ಬಾನೆ, ಡಾ.ಗಾಯತ್ರಿ ಬಾನೆ, ಧೂಳಗೌಡ ಪಾಟೀಲ, ಹಾಲಪ್ಪ ಘಾಳಿ, ಾರೂಕ್ ಮೋಮಿನ್, ಶೀತಲ ಬೇಡಕಿಹಾಳೆ, ಬಿ.ಎನ್. ಬಂಡಗರ, ರಾಜು ತಳವಾರ, ರೇವಣ್ಣ ಸರವ, ರಾಜು ಬಡೋರೆ, ಜಿನ್ನಪ್ಪ ಬಡೋರೆ ಇತರರರು ಇದ್ದರು.