ಜಿಲ್ಲೆ

ನಿಯಂತ್ರಣ ತಪ್ಪಿ ಹಾಲಿನ ಟ್ಯಾಂಕರ್ ಪಲ್ಟಿ, ಹಾಲು ಸಂಗ್ರಹಿಸಲು ಮುಗಿಬಿದ್ದ ಜನರು

ನರಗುಂದ: ಚಾಲಕನ ನಿಯಂತ್ರಣ ತಪ್ಪಿ ಕೆಎಂಎಫ್ ಹಾಲಿನ ಟ್ಯಾಂಕರ್ ಪಲ್ಟಿಯಾದ ಘಟನೆ ತಾಲೂಕಿನ ಶಿರೋಳ ಗ್ರಾಮದ ಜಮೀನಿನಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದೆ.


ಧಾರವಾಡ ಕೆಎಂಎಫ್ ಕೇಂದ್ರದಿಂದ ಆಗಮಿಸಿದ್ದ ಹಾಲಿನ ಟ್ಯಾಂಕರ್ ಕೊಣ್ಣೂರ ಮತ್ತು ಶಿರೋಳ ಹಾಲಿನ ಕೇಂದ್ರಗಳಲ್ಲಿ 4 ಸಾವಿರ ಲೀಟರ್ ಹಾಲು ಸಂಗ್ರಹಿಸಿತ್ತು ಎನ್ನಲಾಗಿದೆ. ಶಿರೋಳದಿಂದ ಹದಲಿ, ಸುರಕೋಡ ಮುಂತಾದ ಗ್ರಾಮಗಳ ಮಾರ್ಗವಾಗಿ ಧಾರವಾಡಕ್ಕೆ ತೆರಳಬೇಕಿತ್ತು.

ಪ್ರತಿ ಲೀಟರ್‌ಗೆ 30 ರೂಪಾಯಿಯಂತೆ ಖರೀದಿಸಿದ್ದ 4 ಸಾವಿರ ಲೀಟರ್ ಹಾಲು ಭೂಮಿ ಪಾಲಾಗಿದೆ. ಅಳಿದುಳಿದ ಹಾಲನ್ನು ಕೆಲವರು ಟ್ಯಾಂಕರ್‌ನಿಂದ ಬಾಟಲಿಗಳಲ್ಲಿ ಸಂಗ್ರಹಿಸುತ್ತಿದ್ದ ದೃಶ್ಯ ಕಂಡು ಬಂತು.