ಜಿಲ್ಲೆ

ಮಹಾತ್ಮರ ಸಂದೇಶಗಳು ಆದರ್ಶಮಯ

ತೇರದಾಳ:ಮಹಾತ್ಮರ ಆದರ್ಶಮಯ ಜೀವನವು ನಾಡಿನ ಸಾಮಾಜಿಕ, ಆಧ್ಯಾತ್ಮಿಕ ಬದಲಾವಣೆಗೆ ಕಾರಣವಾಗಿವೆ. ಅಂತವರ ಸಾಲಿನಲ್ಲಿ ಪೈಗಂಬರ ಸಂದೇಶಗಳು ಅವರ ಅನುಯಾಯಿಗಳಿಗೆ ಅನ್ಯರ್ ರತ್ನವಾಗಿವೆ ಎಂದು ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಪ್ರವಿಣ ನಾಡಗೌಡ ಹೇಳಿದರು.

ಇಲ್ಲಿನ ಕಿಲ್ಲಾಭಾಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮುಹಮ್ಮದ ಪೈಗಂಬರ ಜಯಂತಿ ನಿಮಿತ್ತ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಪೈಗಂಬರ ಅವರ ಸಾಮಾಜಿಕ ಕಳಕಳಿ ಇಂದಿನ ವ್ಯವಸ್ಥೆಗೆ ಮಾದರಿ ಆಗಿದೆ. ನಿಸ್ವಾರ್ಥ ಜೀವನ ನಡೆಸಿದರೆ ಅಂತಹವರನ್ನು ಸಮಾಜ ಗುರುತಿಸುತ್ತದೆ ಎಂಬುದಕ್ಕೆ ಪೆಗಂಬರ ನಿದರ್ಶನರಾಗಿದ್ದಾರೆ ಎಂದರು.

ಜಾಮೀಯಾ ಮಸಜೀದಿಂದ ಪ್ರಾರಂಭಗೊಂಡ ಮೆರವಣಿಗೆ, ತಹಸೀಲ್ದಾರ್​ ಕಚೇರಿ, ಸರ್ಕಾರಿ ಚಾವಡಿ, ಕನ್ನಡ ಶಾಲೆ, ಕಾಳಿನ ಬಜಾರ, ಯಲ್ಲಮ್ಮದೇವಿ ದೇವಸ್ಥಾನ, ಹರಳಯ್ಯಗಲ್ಲಿ ಮುಖಾಂತರ ಬಸ್​ ನಿಲ್ದಾಣ ತಲುಪಿತು. ಮೆರವಣಿಗೆಯಲ್ಲಿ ಮಕ್ಕಳು ಪೈಗಂಬರ್​ ಜಯ ೂಷಣೆಗಳನ್ನು ಕೂಗಿ ಸಂಭ್ರಮಿಸಿದರು. ಜಾಮೀಯಾ ಮಸೀದಿ ವಿದ್ಯುತ್​ ದೀಪಗಳಿಂದ ಅಲಂಕಾರಗೊಳಿಸಲಾಗಿತ್ತು.

ಮೌಲಾನಾ ಶಮಸುಲ್​ ಹಕ್​ ರಜವಿ, ಮುಖಂಡರದಾದ ಗೌತಮ ರೋಡಕರ, ಮಾಸೂಂ ಇನಾಂದಾರ, ಪಜಲ್​ ಅತಾರಾವುತ್​, ರುಸ್ತಂ ನಿಪ್ಪಾನಿ, ಮೌಲಾಅಲಿ ಚಿತ್ರಬಾನುಕೋಟೆ, ಆಧಿನಾಥ ಸಪ್ತಸಾಗರ, ಫೈಜುಲ್ಲಾ ಇನಾಂದಾರ, ರಾಜೇಸಾಬ ನಗಾರ್ಜಿ, ದಸ್ತಗಿರ ಜಮಾದಾರ ಇದ್ದರು.

ತೇರದಾಳ ಪಟ್ಟಣದಲ್ಲಿ ಮುಹಮ್ಮದ ಪೈಗಂಬರ ಜಯಂತಿ ಅಂಗವಾಗಿ ವಿವಿಧ ಕಾರ್ಯಕ್ರಮಗಳು ಜರುಗಿದವು. ಪ್ರವಿಣ ನಾಡಗೌಡ, ಮೌಲಾನಾ ಶಮಸುಲ್​ ಹಕ್​ ರಜವಿ, ಮಾಸೂಂ ಇನಾಮದಾರ್​ ಇತರರು ಇದ್ದರು.