ತಿಕೋಟಾ: ಧ್ಯಾನಯೋಗಿ, ತಪಸ್ವಿ ಬಸವಂತರಾಯ ಮಹಾರಾಜರ 101ನೇ ಜಯಂತಿ ಮೂಲಕ ಅವರನ್ನು ಸ್ಮರಣೆ ಮಾಡುತ್ತಿರುವ ಕಾರ್ಯ ಶ್ಲಾನೀಯ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು.
ತಿಕೋಟಾ ತಾಲೂಕು ಹೊನವಾಡ ಗ್ರಾಮದಲ್ಲಿ ವಿದ್ಯಾವರ್ಧಕ ಸಂದ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಸವಂತರಾಯ ಮಹಾರಾಜರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹನ್ನೆರಡು ಜ್ಯೋರ್ತಿಲಿಂಗಳಿಗೆ ಪಾದಯಾತ್ರೆ ಮೂಲಕ ಸಂಚರಿಸಿ ದರ್ಶನ ಪಡೆದರು. ದೇಶದ ಉದ್ದಗಲಕ್ಕೂ ಆಶ್ರಮಗಳಿಗೆ ಭೇಟಿ ನೀಡಿದ ವಿಜಯಪುರ ಜಿಲ್ಲೆಯ ಪ್ರಥಮರು ಎಂದರು.
ವಿಶ್ರಾಂತ ಪ್ರಾಧ್ಯಾಪಕ& ಸಾಹಿತಿ ಸಿದ್ದಣ್ಣ ಮಂಗೊಂಡ ಮಾತನಾಡಿ, ಪಾಂಡಿಚೇರಿಯ ಮಹರ್ಷಿ ಅರವಿಂದರ ತತ್ವ ಸಿದ್ಧಾಂತಗಳನ್ನು ಹೊನವಾಡ ಗ್ರಾಮದ ತಪಸ್ವಿ ಬಸವಂತರಾಯ ಮಹಾರಾಜರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕಿದ ಮಹಾನುಭಾವರು. ಹೊನವಾಡ ಗ್ರಾಮದಲ್ಲಿ ವಿದ್ಯಾವರ್ಧಕ ಸಂ ಸ್ಥಾಪಿಸಿ ಸಾವಿರಾರು ಜನರ ಬಾಳು ಬೆಳಗಿದವರು. ಹೊನವಾಡ ಗ್ರಾಮದ ಬೆಳಕು ಬಸವಂತರಾಯ ಮಹಾರಾಜರು ನಮ್ಮೆಲ್ಲರನ್ನು ಆಧ್ಯಾತ್ಮಿಕ ಚಿಂತನೆಗೆ ಹಚ್ಚುವ ಶ್ರೇಷ್ಠ ಕಾರ್ಯ ಮಾಡಿದ್ದು, ಅತ್ಯಂತ ಸ್ತುತಾರ್ಹವಾಗಿದೆ ಎಂದರು.
ಪುರುಷೋತ್ತಮ ಮಸಳಿ ಸಭೆಯ ಅಧ್ಯತೆ ವಹಿಸಿ ಮಾತನಾಡಿದರು. ಎಂ.ಎ.ಹಿರೇಮಠ, ಬಿ.ಡಿ.ತೊದಲಬಾಗಿ, ಆರ್.ಎಸ್. ಪಾಟೀಲ, ಡಿ.ಬಿ.ಡೇಮ್ರಿ, ಎಂ.ಆರ್.ಬೆಳಗಲ್, ಆರ್.ಎಸ್.ಚಪ್ಪರ, ಎಂ.ಜಿ.ಕುಲಕರ್ಣಿ, ಆರ್.ಕೆ.ಹಿರೇಮಠ, ಅನ್ನಪೂರ್ಣ ದೇಸಾಯಿ , ಬಿ.ಕೆ.ಗೀತಾ, ಗೀತಾ ಗೌರಗೊಂಡ, ರಮೇಶ ಖ್ಯಾಡಿ, ಸಿದರಾಯ ಮಸಳಿ, ಕೆಂಚಪ್ಪ ಪೂಜಾರಿ, ವಿಶ್ವನಾಥ ಉಪ್ಪನಗಿ, ಲಿಂಗರಾಜ ಪಾಟೀಲ, ಮಮತಾ ಹಿರೇಮಠ, ಭೀಮಣ್ಣ ಪಡತಾರೆ, ಶಿವಾನಂದ ಮಸಳಿ, ನಿವೇದಿತಾ ಹಿರೇಮಠ, ಮಂಜುನಾಥ ಪಾತ್ರೋಟ, ಆರ್.ಬಿ.ಶೇಡ್ಯಾಳ, ಎಸ್.ಆರ್.ವಾಲಿಕಾರ, ನವೀನ ಹಿರೇಮಠ, ಇಂದ್ರಾಬಾಯಿ ಪಾತ್ರೋಟ, ಪ್ರವಿಣ ಮಸಳಿ, ಶಿವಪ್ಪ ಮಾಲಗಾರ, ಹಣಮಂತ ಪಡಸಲಗಿ, ಸದು ಮಾಲಗಾರ, ದಯಾನಂದ ಮಸಳಿ, ಸಾವಿತ್ರಿ ಕೊಟ್ಯಾಳ, ಧರೆಪ್ಪ ಸಿದ್ದನಾಥ ಇತರರಿದ್ದರು. ಐ.ಕೆ.ನದಾ ಸ್ವಾಗತಿಸಿದರು. ಜಗದೀಶ ಹಿರೇಮಠ ನಿರೂಪಿಸಿದರು. ಎಸ್.ಆರ್.ಮುಂಜೆ ವಂದಿಸಿದರು.