ನೆಲಮಂಗಲ ತಾಲೂಕು ಸೋಂಪುರ ಹೋಬಳಿಯ ಬರಗೇನಹಳ್ಳಿ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನಿಯಮಿತದ ಕಟ್ಟಡವನ್ನು ಶಾಸಕ ಎನ್​.ಶ್ರೀನಿವಾಸ್​ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಬಿ.ಆರ್​.ಪುಟ್ಟಗಂಗಯ್ಯ,ವಿಧಾನ ಪರಿಷತ್​ ಸದಸ್ಯ ಇ.ಕೃಷ್ಣಪ್ಪ, ಮಾಜಿ ಶಾಸಕ ಡಾ.ಶ್ರೀನಿವಾಸಮೂರ್ತಿ, ಕಾಂಗ್ರೆಸ್​ ಮುಖಂಡ ಕೆ.ಗೋವಿಂದರಾಜು, ನೆಲಮಂಗಲ ನಗರಸಭೆ ಅಧ್ಯಕ್ಷ ಗಣೇಶ್​ ಇದ್ದರು. 
ಜಿಲ್ಲೆ

ಸಹಕಾರ ಸಂಘಕ್ಕೆ ಸದಸ್ಯರೇ ಮಾಲೀಕರು

ದಾಬಸ್​ಪೇಟೆ : ಸಹಕಾರ ಸಂಘಗಳನ್ನು ಸದಸ್ಯರೇ ನಡೆಸುತ್ತಿದ್ದು, ಅಲ್ಲಿ ಸದಸ್ಯರೇ ಮಾಲೀಕರು ಎಂದು ಶಾಸಕ ಎನ್​.ಶ್ರೀನಿವಾಸ್​ ತಿಳಿಸಿದರು.

ನೆಲಮಂಗಲ ತಾಲೂಕು ಸೋಂಪುರ ಹೋಬಳಿಯ ಬರಗೇನಹಳ್ಳಿ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನಿಯಮಿತದ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಸಂಘದ ಅಭಿವೃದ್ಧಿಯಾಗಿದೆ. ಇದಕ್ಕೆ ಸದಸ್ಯರೇ ಕಾರಣ. ಅವರು ನಿಷ್ಟೆಯಿಂದ ಸಂಘ ಬೆಳೆಸಿದ್ದಾರೆ. ಇದಕ್ಕೆ ಒಗ್ಗಟ್ಟು ಕಾರಣ. ಸಂದ ಏಳಿಗೆಗೆ 10 ಲಕ್ಷ ರೂಪಾಯಿ ಅನುದಾನ ನೀಡಲಾಗುವುದು ಎಂದರು.

ಸಂಘದ ಅಧ್ಯಕ್ಷ ಬಿ.ಆರ್​.ಪುಟ್ಟಗಂಗಯ್ಯ ಮಾತನಾಡಿ, ಲಾಭಗಳಿಕೆಯಷ್ಟೇ ಸಹಕಾರ ಸಂದ ಉದ್ದೇಶವಲ್ಲ. ಸಂಗಳ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳಲು ಸಾಕಷ್ಟು ನೆರವು ನೀಡುತ್ತಾ ಹಾಗೂ ಬ್ಯಾಂಕಿಂಗ್​ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದರು.

ಸಂಘದ ಕಟ್ಟಡ ನಿಮಾರ್ಣಕ್ಕೆ 74 ಲಕ್ಷ ರೂಪಾಯಿ ಆಗಿದ್ದು, ಬಿಡಿಸಿಸಿ ಬ್ಯಾಂಕ್​ನಿಂದ 56 ಲಕ್ಷ, ಅಪೆಕ್ಸ್​ ಬ್ಯಾಂಕಿನಿಂದ 1.50 ಲಕ್ಷ , ಬಿಡಿಸಿಸಿ ಬ್ಯಾಂಕಿನಿಂದ 3 ಲಕ್ಷ , ಸದಸ್ಯರಿಂದ ದೇಣಿಗೆ 18 ಲಕ್ಷ ರೂಪಾಯಿ ಸಂಗ್ರಹ ಮಾಡಲಾಗಿದೆ ಎಂದರು.

ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್​ಚೌದರಿ, ಜೆಡಿಎಸ್​ ತಾಲೂಕು ಅಧ್ಯಕ್ಷ ತಿಮ್ಮರಾಯಪ್ಪ, ಬ್ಲಾಕ್​ ಅಧ್ಯಕ್ಷ ಟಿ.ಎಸ್​.ಜಗದೀಶ, ಜೆಡಿಎಸ್​ ಹೋಬಳಿ ಅಧ್ಯಕ್ಷ ಮೋಹನ ಕುಮಾರ, ಪಿಎಲ್​ಡಿ ಬ್ಯಾಂಕ್​ ನಿರ್ದೇಶಕರಾದ ಬಿ.ಎಂ.ಶ್ರೀನಿವಾಸ, ಎಚ್​.ನಾಗಭೂಷಣ್​, ಗುರು ಪ್ರಕಾಶ್​, ಬಿಡಿಸಿಸಿ ಬ್ಯಾಂಕ್​ ಅಧ್ಯಕ್ಷ ಎಂ.ಡಿ.ವಿಜಯದೇವ, ಉಪಾಧ್ಯಕ್ಷ ಕೆ.ಕೃಷ್ಣಮೂರ್ತಿ, ನಿರ್ದೇಶಕ ಎಂ.ಸಿ.ಪಟ್ಟಾಭಿರಾಮಯ್ಯ, ಸಹಕಾರ ನಿಬಂದಕ ಆರ್​.ರಾಮಾಂಜನೇಯ, ಅಭಿಯಂತರು ಜಿ.ಬಿ.ಪ್ರಭಾಕರ್​, ಮೇಲ್ವಿಚಾರಕ ಎಚ್​.ಎನ್​.ರವಿಕುಮಾರ, ಇಒ ಕೆ.ಆರ್​.ರೂಪಾ, ಲೆಕ್ಕಿಗ ಟಿ.ಎ.ಶ್ರೀನಿವಾಸಮೂರ್ತಿ, ಎ.ರಮೇಶ್​, ಅಬ್ಲುಲ್​ ಸಲಾಂ ಇದ್ದರು.